ಜನಗಣತಿ ಮುಗಿಸಿ ಮನೆಗೆ ತೆರಳಲು ಬಸ್ ನಿಲ್ದಾಣದಲ್ಲಿ ನಿಂತಿದ್ದ ವೇಳೆ ಶಿಕ್ಷಕಿಯ ಮೊಬೈಲ್ ಎಗರಿಸಿದ ಕಳ್ಳರು!
ಕುಣಿಗಲ್ ಪಟ್ಟಣದ ತುಮಕೂರು ರಸ್ತೆಯ ಬಸ್ಸ್ ನಿಲ್ದಾಣದಲ್ಲಿ ತುಮಕೂರು ಕಡೆಗೆ ಬಸ್ಸ್ ಹತ್ತಲು ನಿಂತಿದ್ದ ಶಿಕ್ಷಕಿಯ ಮೋಬೈಲ್ ಪೋನ್ ಕಳವು ಮಾಡಿರುವ ಘಟನೆ ಭಾನುವಾರ ಸಂಜೆ ನಡೆದಿದೆ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಗೋವಿಂದಯ್ಯನಪಾಳ್ಯ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠ ಶಾಲೆಯ ಮುಖ್ಯ ಶಿಕ್ಷಕಿ ಪುಷ್ಪಾವತಿ ಮೊಬೈಲ್ ಪೋನ್ ಕಳೆದುಕೊಂಡವರು ಭಾನುವಾರ ಬೆಳಗ್ಗೆಯಿಂದ ಸಂಜೆ ವರೆಗೆ ಜನಗಣತಿ ಕೆಲಸ ಮುಗಿಸಿಕೊಂಡು
ವಾಪಸ್ ತುಮಕೂರಿಗೆ ತೆರಳಲು ಪಟ್ಟಣದ ತುಮಕೂರು ರಸ್ತೆಯ ಬಸ್ ನಿಲ್ದಾಣದಲ್ಲಿ ನಿಂತಿದ್ದರು ಈ ವೇಳೆ ಬ್ಯಾಗ್ ನಲ್ಲಿದ್ದ ಮೋಬೈಲ್ ಪೋನ್ ಕಳವು ಮಾಡಲಾಗಿದೆ ಬಸ್ ಹತ್ತಿ ಬ್ಯಾಗ್ ಪರಿಶೀಲಿಸಿದಾಗ ಮೋಬೈಲ್ ಪೋನ್ ಇಲ್ಲದಿರುವುದು ಕಂಡು ಬಂದಿದ್ದು ತಕ್ಷಣ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.ಇತ್ತಿಚೇಗೆ ರಾಜ್ಯ ಸರ್ಕಾರ ಜನಗಣತಿ ಕೆಲಸವನ್ನು ತ್ವರಿತಗತಿಯಲ್ಲಿ ಪೂರ್ಣ ಗೋಳಿಸುವಂತೆ ಶಿಕ್ಷಕರ ಮೇಲೆ ಒತ್ತಡ ಹೇರಿರುವ ಕಾರಣ ಹಗಲು ರಾತ್ರಿ ಎನ್ನದೆ ಶಿಕ್ಷಕರು ಸರ್ವೇ ಕಾರ್ಯದಲ್ಲಿ ನಿರತರಾಗಿರುವ ಶಿಕ್ಷಕರು ಸಾಕಷ್ಟು ಸಮಸ್ಯೆಗಳಿಗೆ ಒಳಗಾಗಿದ್ದಾರೆ ಜನಗಣತಿ ಸರ್ವೆ ಕಾರ್ಯದ ಸಂಪೂರ್ಣ ಮಾಹಿತಿ ಇರುವ ಮೋಬೈಲ್ ಪೋನ್ ಕಳುವಾಗಿರುವುದು ಶಿಕ್ಷಕರಿಗೆ ಇಗ ತಲೆನೊವಾಗಿದೆ @publicnewskunigal