ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹೃದಯಾಘಾತ ಮೈಸೂರು ಮೂಲಕ ವ್ಯಕ್ತಿ ಸಾವು ಮಾನವಿಯತೆ ಮೆರೆದ ರೈಲ್ವೆ ಪೊಲೀಸರು!
ಹಾಸನದಿಂದ ಕುಣಿಗಲ್ ಮಾರ್ಗವಾಗಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮೈಸೂರು ಮೂಲದ ವ್ಯಕ್ತಿ ಹೃದಯಘಾತ ದಿಂದ ಸಾವನ್ನಪ್ಪಿರುವ ಗುರುವಾರ ಘಟನೆ ನಡೆದಿದೆ ನಿಂಗರಾಜು(50) ಹೃದಯಘಾತದಿಂದ ಮೃತಪಟ್ಟ ವ್ಯಕ್ತಿ ಮೈಸೂರಿನಿಂದ ಹಾಸನದ ಮಗಳ ಮನೆಗೆ ಹೊಗಿ ಗುರುವಾರ ಬೆಳಗ್ಗೆ ವಾಪಸ್ ಬೆಂಗಳೂರಿನ ಇನ್ನೊಬ್ಬ ಮಗಳ ಮನೆಗೆ ರೈಲಿನಲ್ಲಿ ತೆರಳುತ್ತಿದ್ದ ವೇಳೆ ಯಡಿಯೂರು ಬಳಿ ರೈಲಿನ ಶೌಚಾಲಯಕ್ಕೆ ತೆರಳಿದ ವ್ಯಕ್ತಿಗೆ ಹೃದಯಘಾತ ಸಂಭವಿಸಿದೆ
ಕುಣಿಗಲ್ ನಿಲ್ದಾಣಕ್ಕೆ ಬಂದರು ಶೌಚಾಲಯದಿಂದ ಹೊರಗೆ ಬಾರದನ್ನು ಗಮನಿಸಿದ ಪತ್ನಿ ಶೌಚಾಲಯ ಬಾಗಿಲು ತೆರೆದಾಗ ಪತಿ ಕೆಳಗೆ ಬಿದ್ದಿದ್ದನ್ನು ಗಮನಿಸಿ ತಕ್ಷಣ ಸಹ ಪ್ರಯಾಣಿಕರ ನೆರವಿನಿಂದ ಶೌಚಾಲಯದಿಂದ ಹೊರಗೆ ಕರೆತಂದಿದ್ದಾರೆ ಈ ವೇಳೆ ನೊಡಿದಗ ಹೃದಯಘಾತ ಸಂಭವಿಸಿರುವುದು ತಿಳಿದು ಬಂದಿದೆ ಅದೆ ರೈಲಿನ ಇನ್ನೊಂದ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ರೈಲ್ವೆ ಪೊಲೀಸ್ ಕೆಂಪರಾಜು ಕೂಡಲೆ ಹೃದಯಾಘಾತಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಆಟೊ ಮೂಲಕ ಆಸ್ಪತ್ರೆಗೆ ಕರೆ ತಂದಿದ್ದಾರೆ ಆದರೆ ನಿಂಗರಾಜು ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ ಬಳಿಕ ಪೊಲೀಸರು ಕುಟುಂಬಸ್ಥರಿಗೆ ಮಾಹಿತಿ ನೀಡಿ ಸ್ಥಳದಲ್ಲೆ ಇದ್ದು ಪತ್ನಿಗೆ ಧೈರ್ಯ ತುಂಬಿ ಮೃತದೇಹವನ್ನು ಮೈಸೂರಿಗೆ ಕೊಂಡೊಯ್ಯಲು ನೆರವಾಗಿ ಮಾನವಿಯತೆ ಮೆರೆದಿದ್ದಾರೆ @publicnewskunigal