ಮತ್ತೊಂದು ಪ್ರಕರಣದಲ್ಲಿ ಮಾಹಿತಿ ನೀಡದ ಕುಣಿಗಲ್ ತಹಶೀಲ್ದಾರ್ ರವರಿಗೆ ಮಾಹಿತಿ ಆಯೋಗದಿಂದ ಹತ್ತು ಸಾವಿರ ರೂಪಾಯಿ ದಂಡ ವಿಧಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಂದಲಗೆರೆ ಗ್ರಾಮದ ನಾಗರಾಜು ಹೆಚ್.ಎಂ ಎಂಬುವವರು ಕಡತ ಒಂದರ ಬಗ್ಗೆ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯ್ದೆಯಡಿ ತಹಶೀಲ್ದಾರ್ ರವರಿಗೆ ಮನವಿ ಸಲ್ಲಿಸಿದ್ದರು ಸಕಾಲದಲ್ಲಿ ಅರ್ಜಿದಾರರಿಗೆ ಮಾಹಿತಿ ನೀಡದ ಕಾರಣ ಅರ್ಜಿದಾರ ಉಪ ವಿಭಾಗಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದರು ಮೇಲ್ಮನವಿ ಸಲ್ಲಿಸಿದರು ಸಹ ಅರ್ಜಿದಾರನಿಗೆ ಮಾಹಿತಿ ನೀಡದ ಹಿನ್ನೆಲೆ ಅರ್ಜಿದಾರ ನಾಗರಾಜು ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು ಆಯೋಗದ ಆಯುಕ್ತರಾದ ಡಾ.ಹರೀಶ್ ಕುಮಾರ್ ರವರು ಅರ್ಜಿದಾರರಿಗೆ ಮಾಹಿತಿ ನೀಡದೆ ನಿರ್ಲಕ್ಷ್ಯ ಹಾಗೂ ಆಯೋಗಕ್ಕೆ ಸರಿಯಾದ ಸಮಜಾಯಿಷಿ ನೀಡಿದ ಕುಣಿಗಲ್ ತಾಲ್ಲೂಕು ಕಂದಾಯ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿ ತಹಶೀಲ್ದಾರ್ ಯು.ರಶ್ಮಿ ರವರಿಗೆ ಹತ್ತುಸಾವಿರ ರೂಪಾಯಿ ದಂಡ ವಿಧಿಸಿ ದಂಡದ ಮೊತ್ತವನ್ನು ವೇತನದಲ್ಲಿ ಖಡಿತಗೋಳಿಸಿ ಸರ್ಕಾರದ ಲೆಕ್ಕ ಶೀರ್ಷಿಕೆ ಹೆಡ್ ಆಫ್ ಅಂಕೌಟ್ ಖಾತೆಗೆ ಜಮಾ ಮಾಡಿದ ರಶೀದಿಯೊಂದಿಗೆ ಅಂಚೆಯ ಮೂಲಕ ಆಯೋಗಕ್ಕೆ ವರದಿ ಸಲ್ಲಿಸುವಂತೆ ತುಮಕೂರು ಉಪ ವಿಭಾಗಧಿಕಾರಿ ನಾಹೀದ ಝಮ್.ಝಮ್ ರವರಿಗೆ ಮಾಹಿತಿ ಆಯೋಗದ ಆಯುಕ್ತ ಡಾ.ಹರೀಶ್ ಕುಮಾರ್ ಸೂಚಿಸಿದ್ದಾರೆ
ಕುಣಿಗಲ್ ತಾಲ್ಲೂಕು ಕಂದಾಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯ ಕಾರಣದಿಂದ ತಹಶೀಲ್ದಾರ್ ರಶ್ಮಿ ರವರು ಮಾಹಿತಿ ಆಯೋಗದಿಂದ ಮುಂದೆ ಪದೆ ಪದೆ ದಂಡಕ್ಕೆ ಒಳಗಾಗುತ್ತಿರುವುದು ತೀವ್ರ ಮುಜುಗರಕ್ಕೆ ಕಾರಣವಾಗಿದೆ ಕಂದಾಯ ಇಲಾಖೆಯ ಕಾರ್ಯ ವೈಕರಿಯನ್ನು ನಾಗರೀಕರು ಪ್ರಶ್ನಿಸುವಂತೆ ಮಾಡಿದೆ ಅಡಳಿತ ವೈಫಲ್ಯ ಕಾರಣದಿಂದ ಈ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ @publicnewskunigal