ತೋಟದಿಂದ ಮನೆಗೆ ತೆರಳುತ್ತಿದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಂಗರಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಏಳುಗಂಟೆಯ ಸಮಯದಲ್ಲಿ ತೋಟದಿಂದ ಹಸು ಎಮ್ಮೆಗಳನ್ನು ಮೆಹಿಸಿಕೊಂಡು ಮನೆ ಕಡೆಗೆ ತೆರಳುತ್ತಿದ್ದ ವ್ಯಕ್ತಿಯನ್ನು ಅಡ್ಡಗಟ್ಟಿ ಕ್ಷುಲ್ಲಕ ಕಾರಣಕ್ಕೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ ದ್ಯಾವಯ್ಯ (62) ಕೊಲೆಯಾದ ವ್ಯಕ್ತಿ ಇದೆ ಗ್ರಾಮದ ಮಲ್ಲಿಕಾರ್ಜುನಯ್ಯ ಅಲಿಯಾಸ್ ಕೊತ್ವಾಲ (48) ದ್ಯಾವಯ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ಆರೋಪಿ ಸ್ಥಳಕ್ಕೆ ಹುಲಿಯೂರುದುರ್ಗ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಹುಲಿಯೂರುದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ
ಇಬ್ಬರ ನಡುವೆ ಜಮೀನಿನ ವಿಷಯಕ್ಕೆ ಗಲಾಟೆ ನಡೆದಿದ್ದು ತೊಟದ ಕಡೆಯಿಂದ ಮನೆಗೆ ದ್ಯಾವಯ್ಯ ಬರುವ ವೇಳೆ ಹಂಗರಹಳ್ಳಿ ಗ್ರಾಮದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು ರಸ್ತೆ ಮಾಡಲು ಸುರಿದಿದ್ದ ಜಲ್ಲಿಕಲ್ಲಿನಿಂದ ಇಬ್ಬರು ಹೊಡೆದಾಡಿಕೊಂಡಿದ್ದಾರೆ ಬಳಿಕ ಆರೋಪಿ ಮಲ್ಲಿಕಾರ್ಜುನ ದ್ಯಾವಯ್ಯನ ಮನೆಯ ಬಳಿ ಹೊಗಿ ಬಾಗಿಲ ಬಳಿ ಕುಳಿತಿದ್ದ ದ್ಯಾವಯ್ಯನ ಹಿಡಿದು ಕುತ್ತಿಗೆ ಇಸುಕಿ ಕೊಲೆಗೈದಿರುವುದಾಗಿ ತಿಳಿದು ಬಂದಿದೆ ಸ್ಥಳದಲ್ಲಿದ್ದ ಸಾರ್ವಜನಿಕರು ಮಲ್ಲಿಕಾರ್ಜುನ ಅಲಿಯಾಸ್ ಕೊತ್ವಾಲನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೆಳ್ಳೂರು ಕ್ರಾಸ್ ನ ಆದಿ ಚುಂಚನಗಿರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ @publicnewskunigal