ಓದುವುದರ ಜೋತೆಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶಾಸಕ ಡಾ.ರಂಗನಾಥ್ ಕರೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಅವರಣದಲ್ಲಿ ಶುಕ್ರವಾರ ತಾಲ್ಲೂಕು ಮಟ್ಟದ ಪ್ರತಿಭಾಕಾರಂಜಿ ಹಾಗೂ ಕಲೋತ್ಸವ ಸ್ಪರ್ಧಾ ಕಾರ್ಯಕ್ರಮವನ್ನು ಅಮ್ಮಿಕೋಳ್ಳಲಾಗಿತ್ತು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಡಾ.ರಂಗನಾಥ್ ವಿದ್ಯಾರ್ಥಿಗಳು ಓದುವುದರ ಜೋತೆಗೆ ಸಾಂಸ್ಕೃತಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ ನಿಮ್ಮಲ್ಲಿರುವ ಪ್ರತಿಭೆ ಅನಾವರಣ ಮಾಡಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ತಂದೆ ತಾಯಿ ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ನಿಮ್ಮಲ್ಲಿರುವ ಪ್ರತಿಭೆ ಗುರುತಿಸುವಂತಾಗಲಿ ಎಲ್ಲರೂ ಓದಿನಷ್ಟೆ ಇತರೆ ಚಟುವಟಿಕೆಗಳಿಗೆ ಮಹತ್ವ ನೀಡಿ ನೀವು ಓದಿದ ಶಾಲೆಗೆ ತಾಲ್ಲೂಕಿಗೆ ಕೀರ್ತಿ ತನ್ನಿ ಎಂದರು,
ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ ಮಾತನಾಡಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಕಳೆದೊಂದು ತಿಂಗಳಿಂದ ಕ್ಲಸ್ಟರ್ ಮಟ್ಟದಿಂದ ಹೋಬಳಿ ಮಟ್ಟದಿಂದ ಇಗ ತಾಲ್ಲೂಕು ಮಟ್ಟದ ಕಾರ್ಯಕ್ರಮ ಜರುಗುತ್ತಿದೆ ಕಳೆದ ವರ್ಷದ ಹಿಂದೆ ಯಡಿಯೂರು ಹೊಬಳಿಯ ದೊಡ್ಡಮದುರೆ ಗ್ರಾಮದ ಸರ್ಕಾರಿ ಫ್ರೌಡಶಾಲೆ ಅವರಣದಲ್ಲಿ ನಡೆಸಲಾಗಿತ್ತು ಗ್ರಾಮೀಣ ಪ್ರದೇಶದಲ್ಲಿ ಪ್ರತಿಭಾ ಕಾರಂಜಿ ನಡೆಯಬೇಕು ಎಂಬ ಆಶಯದಂತೆ ಈ ಭಾರಿ ಹುಲಿಯೂರುದುರ್ಗ ಪಟ್ಟಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಪ್ರತಿಭಾಕಾರಂಜಿ ಕಾರ್ಯಕ್ರಮಕ್ಕೆ ಸರ್ಕಾರದಿಂದ ಅನುದಾನ ನೀಡುವುದು ಕಡಿಮೆ ಆದರೆ ಸ್ಥಳಿಯರ ನೆರವಿನೊಂದಿಗೆ ಹಾಗೂ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಲ್ಲರ ಸಹಕಾರದಿಂದ ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಆಯೋಜಿಸಲಾಗಿದೆ ಮಕ್ಕಳಲ್ಲಿನ ಗುಪ್ತ ಪ್ರತಿಭೆಯನ್ನು ಅನಾವರಣ ಗೋಳಿಸುವ ಹಾಗೂ ಅವರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2002 ರಲ್ಲಿ ರಾಜ್ಯ ಸರ್ಕಾರ ಪ್ರತಿಭಾಕಾರಂಜಿ ಜಾರಿಗೆ ತಂದಿತು ಅಂದಿನಿಂದ ಇಂದಿನ ವರೆಗೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ ಮಕ್ಕಳು ಯಾವುದೆ ಭಯ ಗೊಂದಲವಿಲ್ಲದೆ ಧೈರ್ಯದಿಂದ ನಿಮ್ಮ ಪ್ರತಿಭೆಯನ್ನು ಅನಾವರಣ ಮಾಡುವ ಮೂಲಕ ನಿಮ್ಮ ಶಾಲೆಗೆ ಕೀರ್ತಿ ತರಬೇಕು ಎಂದರು,
ತಹಶೀಲ್ದಾರ್ ಯು.ರಶ್ಮಿ ಮಾತನಾಡಿ ವಿದ್ಯಾರ್ಥಿ ಜಿವನದ ಕಾಲಘಟ್ಟದಲ್ಲಿ ಪ್ರತಿಭಾ ಕಾರಂಜಿ ಒಂದು ಅದ್ಬುತವಾದ ಕಾರ್ಯಕ್ರಮ ತಮ್ಮ ಪ್ರತಿಭೆಯನ್ನು ತೊರ್ಪಡಿಸುವ ಮೂಲಕ ತಾಲ್ಲೂಕಿನ ಮಕ್ಕಳು ಜಿಲ್ಲಾ ಮಟ್ಟದಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲ್ಲೂಕಿಗೆ ಕೀರ್ತಿ ತರಬೇಕು ಅದೆಷ್ಟೊ ವಿದ್ಯಾರ್ಥಿಗಳು ತಮ್ಮ ಸಾಂಸ್ಕೃತಿಕ ಚಟುವಟಿಕೆಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಶಿಕ್ಷಣ ಇಲಾಖೆಯ ವತಿಯಿಂದ ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸುವ ಕೆಲಸ ಮಾಡುತ್ತಿದೆ ಎಲ್ಲರಿಗೂ ಶುಭವಾಗಲಿ ಎಂದರು, ಕಾರ್ಯಕ್ರಮದಲ್ಲಿ ಗಮನ ಸೆಳೆದ ಅಯೋಧ್ಯೆ ಬಾಲ ರಾಮನ ವೇಷಭೂಷಣ,ಮಾಹಾ ಕಾಳಿ ವೇಷಭೂಷಣ ತೊಟ್ಟಿದ್ದ ಮಕ್ಕಳನ್ನು ವೇದಿಕೆಗೆ ಕರೆದು ಶಾಸಕರು ಅಭಿನಂದಿಸಿದರು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯು.ರಶ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಬೋರೇಗೌಡ,ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ವಸಂತ್ ಕುಮಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ತಬಸಮ್ ಫಾತಿಮಾ,ಸದಸ್ಯರಾದ ಅಲ್ಲಾಬಕಾಷ್,ನಾಗೇಶ್,ನಟರಾಜು,ಪಿಡಿಒ ಶ್ರೀಧರ, ಮುಖಂಡರು ಶಿಕ್ಷಕರು ಹಾಗೂ ಮಕ್ಕಳು ಪೋಷಕರು ಸೇರಿದಂತೆ ಕಾರ್ಯಕ್ರಮದಲ್ಲಿ ಹಲವರು ಉಪಸ್ಥಿತರಿದ್ದರು @publicnewskunigal