ರಾಜ್ಯ ಹೆದ್ದಾರಿ 33ರಲ್ಲಿ ರಸ್ತೆ ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ನಡೆದಿದೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹೆದ್ದಾರಿ 33ರ ವಾಜರಪಾಳ್ಯ ಗ್ರಾಮದ ಬಳಿ ರಸ್ತೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡಿದ್ದ ರಾಜೇಂದ್ರಪುರ ಗ್ರಾಮದ ಗಂಗಾಧರಯ್ಯ (65) ಎಂಬುವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ ಗಂಗಾಧರಯ್ಯ ರಾಜೇಂದ್ರಪುರ ಗ್ರಾಮದಿಂದ ತಮ್ಮ ದ್ವಿಚಕ್ರ ವಾಹನದಲ್ಲಿ ಹುಲಿಯೂರುದುರ್ಗ ಪಟ್ಟಣಕ್ಕೆ ತೆರಳಿ ಪಶು ಆಹಾರದ ಚೀಲ ತೆಗೆದುಕೊಂಡು ವಾಪಸ್ ರಾಜೇಂದ್ರಪುರ ಗ್ರಾಮಕ್ಕೆ ಮರಳುವ ವೇಳೆ ರಾಜ್ಯ ಹೆದ್ದಾರಿ 33ರ ವಾಜರಪಾಳ್ಯ ಸಮೀಪ ಕುಣಿಗಲ್ ಕಡೆಯಿಂದ ಎದುರಿಗೆ ಬಂದ ಅಪರಿಚಿತ ವಾಹನ ಡಿಕ್ಕಿಯಾದ ಕಾರಣ ದ್ವಿಚಕ್ರ ವಾಹನ ಸವಾರ ಗಂಗಾಧರಯ್ಯ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ತಕ್ಷಣ ಸ್ಥಳಿಯರ ನೆರವಿನೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿರುವ ಘಟನೆ ನಡೆದಿದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal