ಮುಂಬರುವ ಲೊಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಕುರಿತು ಮೌನ ಮುರಿದ ಮಾಜಿ ಸಂಸದ ಸೊತೆ ಎಂದು ಪ್ರಯತ್ನ ಬಿಡೊಕ್ಕೆ ಆಗಲ್ಲ ಎಂದ ಡಿ.ಕೆ ಸುರೇಶ್!
ಕುಣಿಗಲ್ ತಾಲ್ಲೂಕಿನ ಕೆಂಪನಹಳ್ಳಿ ಗ್ರಾಮದ ಸರ್ಕಾರಿ ಫ್ರೌಡಶಾಲೆಯ ಅವರಣದಲ್ಲಿ ಡಿ.ಕೆ.ಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕುಣಿಗಲ್ ಉತ್ಸವ 2025 ಪ್ರಯುಕ್ತ ಆಯೋಜಿಸಲಾಗಿದ್ದ ಕ್ರಿಕೆಟ್ ಟೂರ್ನಿಯನ್ನು ಭಾನುವಾರ ಮಾಜಿ ಸಂಸದ ಹಾಗೂ ಬಮುಲ್ ಅಧ್ಯಕ್ಷ ಡಿ,ಕೆ ಸರೇಶ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಕುಣಿಗಲ್ ಉತ್ಸವ ತಾಲ್ಲೂಕಿನ ಎಲ್ಲಾ ಜನರ ಹಬ್ಬ ಈ ಹಬ್ಬವನ್ನು ಎಲ್ಲರು ವಿಜೃಂಭಣೆಯಿಂದ ಆಚರಿಸಬೇಕು ಜನವರಿ 8 ಮತ್ತು 9 ರಂದು ಕುಣಿಗಲ್ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಕಾರ್ಯಕ್ರಮ ಜರುಗಲಿವೆ ತಾಲ್ಲೂಕು ಮಟ್ಟದಲ್ಲಿ ಗೆದ್ದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗುತ್ತಾರೆ ಪ್ರತಿ ತಾಲ್ಲೂಕಿನಿಂದ ಎರಡೆರಡು ತಂಡಗಳನ್ನು ಆಯ್ಕೆ ಮಾಡಿ ಕನಕಪುರದಲ್ಲಿ ನಡೆಯಲಿರುವ
ಜಿಲ್ಲಾ ಮಟ್ಟದ ಕನಕೋತ್ಸವ ಕಾರ್ಯಕ್ರಮದಲ್ಲಿ ಮಾಗಡಿ,ಚನ್ನಪಟ್ಟಣ,ರಾಮನಗರ,ಕುಣಿಗಲ್, ತಾಲ್ಲೂಕಿನಿಂದ ಆಯ್ಕೆಯಾದ ತಂಡಗಳನ್ನು ಕೆ.ಪಿ.ಎಲ್ ಹಾಗೂ ಐ.ಪಿ.ಎಲ್ ಮಾದರಿಯಲ್ಲಿ ಕ್ರಿಕೆಟ್ ಟೂರ್ನಿ ಆಯೋಜಿಸಲಾಗುವುದು ಯುವ ಜನತೆಯಲ್ಲಿ ಕ್ರೀಡಾ ಆಸಕ್ತಿಗೆ ಉತ್ತೆಜನ ನೀಡುವ ಸಲುವಾಗಿ ಈ ಕಾರ್ಯಕ್ರಮಗಳನ್ನು ಡಿ.ಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ಡಿ.ಕೆ.ಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದೆ ಪಕ್ಷತೀತವಾಗಿ ಎಲ್ಲರು ಕ್ರೀಡಾ ಕೂಟದಲ್ಲಿ ಭಾಗವಹಿಸಿ ಸೋಲು ಗೆಲುವು ಮುಖ್ಯವಲ್ಲ ಭಾಗವಹಿಸುವುದು ಮುಖ್ಯ ಕ್ರಿಕೆಟ್ ಒಂದೆ ಅಲ್ಲ ಕಬ್ಬಡಿ,ವಾಲಿಬಾಲ್,ತ್ರೊಬಾಲ್, ಶಟಲ್,ಚಸ್,ಸ್ವಿಮ್ಮಿಂಗ್ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಗ್ರಾಮೀಣ ಪ್ರದೇಶದ ಪ್ರತಿಭೆಯನ್ನು ಗುರುತಿಸಿ ಅವರಿಗೆ ಒಂದು ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ,
ಎಲ್ಲಾ ಚಟುವಟಿಕೆಯಲ್ಲು ಸೋಲು ಗೇಲುವಿದೆ ರಾಜಕೀಯದಲ್ಲು ಸೋಲು ಗೆಲುವಿದೆ ಗೆದ್ದಿದ್ದಿವಿ ಎಂದು ಮೇಲೆ ಹೊಗೊಕ್ಕೆ ಆಗಲ್ಲ ಸೋತಿದ್ದಿವಿ ಎಂದು ಪ್ರಯತ್ನ ಬಿಡೊ ಹಾಗಿಲ್ಲ,ಪ್ರಯತ್ನ ನಿರಂತರವಾಗಿರಲಿ ನಿಮ್ಮ ಎಲ್ಲರ ಆಶಿರ್ವಾದ ದಿಂದ ನನ್ನ ಪ್ರಯತ್ನವು ನಿರಂತರವಾಗಿ ಇರುತ್ತೆ ಎನ್ನುವ ಮೂಲಕ ಮುಂಬರುವ ಲೋಕಸಭೆ ಸ್ಪರ್ಧೆ ಕುರಿತು ಬಮುಲ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಿ.ಕಿ ಸುರೇಶ್ ಮೌನ ಮುರಿದಿದ್ದಾರೆ,ಕಾರ್ಯಕ್ರಮದಲ್ಲಿ ಶಾಸಕ ಡಾ.ರಂಗನಾಥ್,ಕೆಪಿಸಿಸಿ ಸದಸ್ಯ ಬೇಗೂರು ನಾರಾಯಣ್,ಮುಖಂಡರಾದ ಕೋಘಟ್ಟ ರಾಜಣ್ಣ,ವಿ.ಎಸ್.ಎಸ್.ಎನ್ ಅಧ್ಯಕ್ಷ ಬೋರೆಗೌಡ, ಹಾಲುವಾಗಿಲು ಸ್ವಾಮಿ,ನಾಗರಾಜು, ಶಿವರಾಮು, ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ಸುಮತಿ ಸೆರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal