ಮನೆಯ ಮುಂದೆ ನಿಲ್ಲಿಸಲಾಗಿದ್ದ ಟ್ರಾಕ್ಟರ್ ಗಳಲ್ಲಿ ಬ್ಯಾಟರಿ ಕಳವು ದೂರು ದಾಖಲು!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ನೀಲಸಂದ್ರ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ಮನೆಯ ಮುಂದೆ ನಿಲ್ಲಿಸಲಾಗಿದ್ದ ಟ್ರಾಕ್ಟರ್ ಗಳಲ್ಲಿ ಬ್ಯಾಟರಿಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ ನೀಲಸಂದ್ರ ಗ್ರಾಮದ ಜಗದೀಶ್, ಎಂಬುವವರಿಗೆ ಸೇರಿದ್ದ ಎರಡು ಟ್ರಾಕ್ಟರ್ ಹಾಗೂ ಆನಂದ್, ಎಂಬುವವರಿಗೆ ಸೇರಿದ ಒಂದು ಟ್ರಕ್ಟರ್ ಗಳಲ್ಲಿ ತಡ ರಾತ್ರಿ ಬ್ಯಾಟರಿ ಕಳುವಾಗಿದೆ ಈ ಹಿಂದೆ ಶಾಲೆ ಗ್ರಾಮ ಪಂಚಾಯ್ತಿ ಕಚೇರಿಗಳಲ್ಲಿ ಅಳವಡಿಸಲಾಗಿದ್ದ ಯು.ಪಿ.ಎಸ್ ಮತ್ತು ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ಖದೀಮರು ಇಗ ರೈತರ ಟ್ರಾಕ್ಟರ್ ಗಳಿಗೆ ಕೈ ಹಾಕಿದ್ದಾರೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ರಾತ್ರಿ ವೇಳೆ ಬೀಟ್ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳತನ ಪ್ರಕರಣಗಳಿಗೆ ಕಡಿವಾಣ ಹಾಕುವಂತೆ ಸ್ಥಳೀಯ ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದಾರೆ