ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಅತ್ತೆ ಮಗಳನ್ನು ಪ್ರೀತಿಸಿದ ಕಾರಣ ಸಂಬಂಧಿಕರಿಂದ ಕೃತ್ಯ ಪ್ರಕರಣ ದಾಖಲು ಆರೋಪಿಗಳು ಪೊಲೀಸರ ವಶಕ್ಕೆ!
ಕುಣಿಗಲ್ / ಮಾಗಡಿ ಕತ್ತು ಸೀಳಿ ಯುವಕನ ಬರ್ಬರ ಹತ್ಯೆ ಮಾಡಿರುವ ಘಟನೆ ಮಾಗಡಿ ತಾಲ್ಲೂಕಿನಲ್ಲಿ ನಡೆದಿದೆ ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಗ್ರಾಮದ ಚಲುವರಾಜು (35) ಕೊಲೆಯಾದ ಯುವಕ ಮಾಗಡಿ ತಾಲ್ಲೂಕಿನ ಅಗಲಕೊಟೆ ಹ್ಯಾಂಡ್ ಪೋಸ್ಟ್ ನಲ್ಲಿದ್ದ ಅತ್ತೆ ಮಗಳನ್ನು ಕಳೆದ ಆರು ವರ್ಷಗಳಿಂದ ಪ್ರೀತಿಸುತ್ತಿದ್ದ ಎನ್ನಲಾಗಿದೆ ಇದಕ್ಕೆ ಯುವತಿಯ ಕುಟುಂಬಸ್ಥರ ವಿರೋಧವಿತ್ತು ಕಳೆದ ಹದಿನೈದು ದಿನಗಳ ಹಿಂದೆ ಚಲುವರಾಜು ಅತ್ತೆಯ ಮಗಳಾದ ಪೂರ್ಣಿಮಳನ್ನು ಮದುವೆಯಾಗಲು ಕರೆದುಕೊಂಡು ಕೆ.ಎಂ ದೊಡ್ಡಿಗೆ ಹೊಗಿದ್ದ ಬಳಿಕ ಯುವತಿಯ ಕುಟುಂಬಸ್ಥರಿಗೆ ಮಾಹಿತಿ ತಿಳಿದು ಕೆ.ಎಂ ದೊಡ್ಡಿಗೆ ಹಿಂಬಾಲಿಸಿಕೊಂಡು ಹೊಗಿ ಯುವತಿಯನ್ನು ಕರೆದುಕೊಂಡು ಬಂದಿದ್ದರು ಮಾಗಡಿ ಪೊಲೀಸರ ಸಮ್ಮುಖದಲ್ಲಿ ಪ್ರಕರಣ ಇತ್ಯರ್ಥ ಪಡಿಸಿಕೊಂಡು ಯುವತಿಯನ್ನು ಕುಟುಂಬಸ್ಥರು
ಕರೆದೊಯ್ಯದಿದ್ದರು ಇದಾದ ಬಳಿಕ ಯುವತಿಯ ಕುಟುಂಬಸ್ಥರು ಚಲುವರಾಜನಿಗೆ ಯುವತಿಯ ತಂಟೆಗೆ ಬಾರದಂತೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ ಯುವತಿ ಪೋನ್ ಸಂಪರ್ಕಕ್ಕೆ ಸಿಗದ ಕಾರಣ ಚಲುವರಾಜು ಗುರುವಾರ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವತಿಯ ಕುಟುಂಬಸ್ಥರ ವಿರುದ್ದ ವಿಡಿಯೊ ಮಾಡಿ ಹರಿಬಿಟ್ಟಿದ್ದ ಇದಾದ ಬಳಿಕ ಗುರುವಾರ ಸಂಜೆ ನಾಲ್ಕು ಗಂಟೆಯ ಸಮಯದಲ್ಲಿ ಕೊಲೆಯಾದ ಚಲುವರಾಜನಿಗೆ ಕೊಲೆ ಆರೋಪಿಗಳು ಪೋನ್ ಮಾಡಿ ಮಾತನಾಡಲು ಕರೆದು ಕಾರಿನಲ್ಲಿ ಅಪಹರಿಸಿ ಕರೆದೊಯ್ದು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಗಟ್ಟಿಪುರ ಗ್ರಾಮದ ರಂಗರಾಯನ ಕೆರೆ ಹಳ್ಳದಲ್ಲಿ ಗುರುವಾರ ತಡ ರಾತ್ರಿ ಕತ್ತು ಸೀಳಿ ಹತ್ಯೆ ಮಾಡಲಾಗಿದೆ ಬಳಿಕ ಮೃತದೇಹ ಅಲ್ಲೆ ಬಿಟ್ಟು ಪರಾರಿ ಯಾಗಿದ್ದರು ಶುಕ್ರವಾರ ಮಾಗಡಿ ಪೊಲೀಸ್ ಠಾಣೆಗೆ ತೆರಳಿ ಕೊಲೆ
ಆರೋಪಿಗಳು ಶರಣಾಗಿದ್ದಾರೆ ಯುವತಿಯ ತಂದೆ ಕೆಂಪಣ್ಣ, ದೊಣಕುಪ್ಪೆ ಗ್ರಾಮದ ಮಂಜುನಾಥ್,ಕುಣಿಗಲ್ ರಾಮಕೃಷ್ಣ ಕೊಲೆ ಆರೋಪಿಗಳು ಘಟನಾ ಸ್ಥಳಕ್ಕೆ ತುಮಕೂರು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಪುರುಷೋತ್ತಮ್,ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಓಂಪ್ರಕಾಶ್,ಸಿಪಿಐ ಮಾಧ್ಯನಾಯಕ್ ಹಾಗೂ ಸಿಬ್ಬಂದಿವರ್ಗ ಮಾಗಡಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಮೃತದೇಹವನ್ನ ರಾಮನಗರ ಜಿಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ ಪ್ರಕರಣವನ್ನು ಮಾಗಡಿ ಪೊಲೀಸ್ ಠಾಣೆಯಿಂದ ಕುಣಿಗಲ್ ಗೆ ವರ್ಗಹಿಸಲಾಗಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಣಿಗಲ್ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಮಗನನ್ನು ಕಳೆದುಕೊಂಡ ಕುಟುಂಬಸ್ಥರು ಮೃತದೇಹದ ಬಳಿ ಆಕ್ರಂದನ ಮುಗಿಲು ಮುಟ್ಟಿತ್ತು @publicnewskunigal
