ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಜ್ಞಾನ ವಿಕಾಸ ಕೇಂದ್ರ ಸದಸ್ಯರಿಗೆ ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಜೀವನಶೈಲಿ ಬಗ್ಗೆ ಮಹಿಳಾ ವಿಚಾರಗೊಷ್ಠಿ ಆಯೋಜನೆ!
ಕುಣಿಗಲ್ ಪಟ್ಟಣದ ಶ್ರೀ ಕೊಲ್ಲಾಪುರದಮ್ಮ ಕಲ್ಯಾಣ ಮಂಟಪದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ವತಿಯಿಂದ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಆರೋಗ್ಯಕರ ಜೀವನಶೈಲಿ ರೂಪಿಸಿಕೊಳ್ಳುವ ಬಗ್ಗೆ ಮಹಿಳಾ ಸದಸ್ಯರಿಗೆ ವಿಚಾರಗೊಷ್ಠಿ ಅಮ್ಮಿಕೋಳ್ಳಲಾಗಿತ್ತು ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ತಹಶೀಲ್ದಾರ್ ರಶ್ಮಿ ಯು,ಬಳಿಕ ಮಾತನಾಡಿದ ಅವರು ಧರ್ಮಸ್ಥಳ ಸಂಸ್ಥೆ ಮಹಿಳಾ ಸಬಲಿಕರಣಕ್ಕೆ ಸಂಬಂಧಪಟ್ಟ ಹಾಗೆ ಬಹಳಷ್ಟು ಕಾರ್ಯಕ್ರಮಗಳ ಅನುಷ್ಠಾನ ಮಾಡುತ್ತಿದ್ದು ಇದರ ಸದುಪಯೋಗ ಜನತೆ ಪಡೆದುಕೊಳ್ಳಬೇಕು ಎಂದರು.ಮುಖ್ಯ ಅತಿಥಿಗಳಾಗಿ ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ಶ್ರೀ ಶೀನಪ್ಪ ಎಂ. ಇವರು ಆಗಮಿಸಿದ್ದು ಯೋಜನೆಯಲ್ಲಿ ಆರು ಲಕ್ಷ ಸಂಘಗಳು ಸಕ್ರಿಯವಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ರಾಷ್ಟ್ರೀಕೃತ ಬ್ಯಾಂಕನಲ್ಲಿ ಸಂಘದ ಆರ್ಥಿಕ ವ್ಯವಹಾರ ನಡೆಯುತ್ತಿದ್ದು ಸಂಘದ ಸದಸ್ಯರಿಗೆ ಕಡಿಮೆ ಬಡ್ಡಿದರದಲ್ಲಿ ಬ್ಯಾಂಕಿನವರು ಸಾಲ ನೀಡುತ್ತಿದ್ದಾರೆ.ಪರಮಪೂಜ್ಯ ಧರ್ಮಾಧಿಕಾರಿಗಳಾದ ಡಾ॥ ಡಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮದ್ಯವರ್ಜನ ಶಿಬಿರದಂತಹ ಜನಜಾಗೃತಿ ಕಾರ್ಯಕ್ರಮ ನಡೆಸಿ ದುಶ್ಚಟಮುಕ್ತ ಸಮಾಜ ನಿರ್ಮಾಣ ಕೆಲಸಕ್ಕೆ ಆದ್ಯತೆ ನೀಡುತ್ತಿದ್ದಾರೆ.ನಮ್ಮೂರು ನಮ್ಮ ಕೆರೆ ಕಾರ್ಯಕ್ರಮ ಮೂಲಕ ನೀರಿನ ಅಂರ್ತಜಲ ವೃದ್ಧಿ ಕೆಲಸ ಮಾಡುತ್ತಿದ್ದಾರೆ.ಸಮುದಾಯ ಅಭಿವೃದ್ಧಿ ಕಾರ್ಯಕ್ರಮ ಮೂಲಕ ಹಾಲಿನ ಡೈರಿ ಕಟ್ಟಡ ಕಾಮಗಾರಿಗೆ 2 ಲಕ್ಷ ಸಹಾಯಧನ ಹಾಗೂ ಸಾರ್ವಜನಿಕ ಸಮುದಾಯ ಭವನಗಳ
ನಿರ್ಮಾಣಕ್ಕೆ ರಾಜ್ಯದಲ್ಲಿ ಸಹಾಯಧನ ನಿಡಲಾಗುತ್ತಿದೆ.ಮಾತೃಶ್ರೀ ಡಾ॥ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಪ್ರತಿ ತಾಲೂಕಿನಲ್ಲಿ 25 ಜ್ಞಾನವಿಕಾಸ ಕೇಂದ್ರಗಳ ರಚನೆ ಮಾಡಲಾಗಿದೆ.ಇ ಕೇಂದ್ರಗಳಿಗೆ ಪ್ರತಿ ತಿಂಗಳು ಸಂಪನ್ಮೂಲ ವ್ಯಕ್ತಿಗಳ ಮೂಲಕ ಮಹಿಳೆಯರಿಗೆ ಶಿಕ್ಷಣದ ಮಹತ್ವದ ಬಗ್ಗೆ,ಆರೋಗ್ಯದ ಬಗ್ಗೆ,ಕೌಟುಂಬಿಕ ಸಾಮರಸ್ಯದ ಬಗ್ಗೆ,ಕಾನೂನಿನ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಸಲಾಗುತ್ತಿದೆ.19169 ನಿರ್ಗತಿಕ ಕುಟುಂಬಗಳಿಗೆ ತಿಂಗಳಿಗೆ 1000 ರೂಪಾಯಿನಂತೆ ಮಾಶಾಸನ ನಿಡಲಾಗುತ್ತಿದ್ದು ವಾತ್ಸಲ್ಯ ಮನೆ ಕಾರ್ಯಕ್ರಮದ ಮೂಲಕ ಮನೆ ರಚನೆಯ ಕೆಲಸವೂ ಇವರಿಗೆ ಮಾಡಿಕೊಡಲಾಗುತ್ತಿದೆ ಎಂದರು. ಸ್ತ್ರಿರೋಗ ತಜ್ಞರಾದ ಶ್ರೀಮತಿ ಡಾ॥ ರಕ್ಷಾ ಅವರು ಕುಟುಂಬದಲ್ಲಿರುವ ಪ್ರತಿಯೊಬ್ಬರ ಆರೋಗ್ಯದ ಬಗ್ಗೆ ಗಮನ ಕೊಡುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಕಡಿಮೆ.ಇ ಮನೋಭಾವ ಬದಲಾಗಬೇಕು.ಮಹಿಳೆಯರು ತಮ್ಮ ಆರೋಗ್ಯದಲ್ಲಿ ಸಮಸ್ಯೆ ಕಂಡಾಗ ಕೂಡಲೆ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಹೇಳಿದರು. ಸಂಪನ್ಮೂಲ ವ್ಯಕ್ತಿಗಳಾದ ಡಾ॥ ಯಮುನಾ ಬಿ.ಎನ್ ವೈದ್ಯರು ಅನೀಕೇತನ ಟ್ರಸ್ಟ ತುಮಕೂರು ಇವರು ಸಣ್ಣ ವಯಸ್ಸಿಗೆ ಮದುವೆ ಆಗುವುದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರು. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು.ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸಮಯಾನುಸಾರ ಆಹಾರ ಸೇವನೆ ಮಾಡಬೇಕು ಎಂದರು.
ಆರೋಗ್ಯದಲ್ಲಿ ಸಮಸ್ಯೆಗಳು ಕಂಡಾಗ ಸಾಮಾಜಿಕ ಜಾಲತಾಣಗಳ ಮಾಹಿತಿ ಆಧಾರದಲ್ಲಿ ಚಿಕಿತ್ಸೆ ಹಾಗೂ ಪರಿಹಾರ ಮಾಡಿಕೊಳ್ಳುವ ಕ್ರಮ ಅನುಸರಿಸದೆ ಹತ್ತಿರದ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ತಾ.ಪಂ ಅಧ್ಯಕ್ಷರಾದ ಶ್ರೀಮತಿ ವರಲಕ್ಷ್ಮಿ ವಹಿಸಿದ್ದರು. ಯೋಜನೆ ಯೋಜನಾಧಿಕಾರಿ ಸತೀಶ್ ಶೇಟ್,ಪುರಸಭೆ ಕಚೇರಿ ವ್ಯವಸ್ಥಾಪಕರು ಶ್ರೀಮತಿ ಗೀತಾ,ಸಮನ್ವಯ ಅಧಿಕಾರಿ ಸಿಂಧೂ ಇವರು ಉಪಸ್ಥಿತರಿದ್ದರು. ಸದಸ್ಯರಿಗೆ ರಂಗೋಲಿ ಸ್ಪರ್ಥೆ ನಡೆಸಲಾಯಿತು. ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿತು. ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಸಂದೇಶ್ ವಂದಿಸಿದರು.@publicnewskunigal