ರೈತ ದಿನಾಚರಣೆ ಅಂಗವಾಗಿ ಅನ್ನದಾತರಿಗೆ ಪಾದಪೂಜೆ ನೆರವೇರಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು!
ಪಟ್ಟಣದ ಕನ್ನಡ ಸಾಹಿತ್ಯ ಭವನದಲ್ಲಿ ರೈತ ದಿನಾಚರಣೆ ಅಂಗವಾಗಿ ರೈತ ನಾಯಕರಾದ ದಿವಂಗತ ಪ್ರೊಫೆಸರ್ ನಂಜುಂಡಸ್ವಾಮಿ ಮಾಜಿ ಪ್ರಧಾನಿ ಚೌದ್ರಿ ಚರಣ್ ಸಿಂಗ್ ಹಾಗೂ ಸುಂದರೇಶ್ ಭಾವಚಿತ್ರಕ್ಕೆ ಪುಷ್ಪ ನಮನ ಸಮರ್ಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಆನಂದ್ ಪಟೇಲ್ ಹುಲಿಕಟ್ಟೆ ನೇತೃತ್ವದಲ್ಲಿ ನೂರಾರು ರೈತರು ಕುದುರೆ ಫಾರಂ ಮುಂಭಾಗದಿಂದ ಮೆರವಣಿಗೆಯಲ್ಲಿ ರೈತ ಘೋಷಣೆಗಳನ್ನು ಕೂಗುತ್ತಾ ಕನ್ನಡ ಭವನಕ್ಕೆ ಆಗಮಿಸಿ ರೈತರಿಗೆ ಪಾದಪೂಜೆ ನೆರವೇರಿಸಿ ಮಾತನಾಡುತ್ತಾ ದೇಶದ ಪ್ರತಿಯೊಬ್ಬರು ಅನ್ನ ನೀಡುವ ರೈತರನ್ನ ಸ್ಮರಿಸುವಂತಹ ದಿನವಾಗಿದ್ದು ಜಗತ್ತಿಗೆ ಅನ್ನವನ್ನು ನೀಡುವ ಅನ್ನದಾತರು ಶ್ರಮಜೀವಿಗಳಾಗಿದ್ದ ಇವರುಗಳಿಗೆ ಆಳುವಂತಹ ಸರ್ಕಾರಗಳು ಸೌಲಭ್ಯಗಳನು ನೀಡದೆ ಅವರು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಲೆಯನ್ನು ನಿಗದಿ ಮಾಡದೆ ಇರುವುದರಿಂದ ರೈತ ಆತ್ಮಹತ್ಯೆ ದಾರಿಯನ್ನು ಹಿಡಿಯಬೇಕಾಗುತ್ತದೆ ಇಂಥವರಿಗೆ ಧೈರ್ಯವನ್ನು ತುಂಬುವಂತಹ ಕೆಲಸ ನಮ್ಮ ಹಸಿರು ಸೇನೆ ಮಾಡುತ್ತಿದೆ ರೈತ ಸಂಘಗಳನ್ನು ರೈತರಿಗೆ ಎತ್ತಿ ಕಟ್ಟಿ ಒಡೆದು ಹಾಳುವ ನೀತಿಗಳನ್ನು ಕೈಗೊಂಡು ಕೆಲವು ರೈತ ಪರ

ಸಂಘಟನೆಗಳು ಎಂದು ಹೇಳಿಕೊಂಡು ಅಧಿಕಾರಿ ಮತ್ತು ನೌಕರರನು ಬೆದರಿಸಿಕೊಂಡು ಜೀವನ ಮಾಡುತ್ತಿದ್ದಾರೆ ಎಂದು ದೂರುತ್ತಾ ಸರ್ಕಾರಗಳು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಅವರು ಬೆಳೆದಂತಹ ಬೆಳೆಗಳಿಗೆ ಸಮರ್ಪಕವಾದ ಬೆಲೆ ನೀಡುವ ಮೂಲಕ ಅವರನ್ನ ಪ್ರೋತ್ಸಾಹಿಸಬೇಕಾಗಿದೆ ಕಳೆದ 16 ವರ್ಷಗಳ ಹಿಂದೆ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆಯು ತಾಲೂಕಿನಲ್ಲಿ ಸ್ಥಾಪಿತ ಗೊಂಡಾಗಿನಿಂದಲೂ ರೈತರಿಗೆ ನೆಲ ಜಲ ಭಾಷೆಗೆ ದಕ್ಕೆಯಾದಾಗ ಹೋರಾಟ ಚಳುವಳಿಗಳನ್ನು ನಿರಂತರವಾಗಿ ಕೈಗೊಳ್ಳಲಾಗಿದೆ ಇತ್ತೀಚಿನ ರಾಜಕಾರಣಿಗಳು ರೈತ ಸಂಘವನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳಲು ರೈತರ ಒಗ್ಗಟ್ಟನ್ನು ಒಡೆದು ಹಾಳುವ ನೀತಿಯನ್ನ ಅನುಸರಿಸುತ್ತಿದ್ದಾರೆ ಎಂದು ದೂರಿದರು.ಇದೇ ಸಂದರ್ಭದಲ್ಲಿ ಐದು ಜನ ರೈತ ಮುಖಂಡರನ್ನು ಮಹಿಳೆಯರ ಪಾದ ತೊಳೆದು ಅರಿಶಿನ ಕುಂಕುಮ ಹೂವು ಸಲ್ಲಿಸಿ ಪೂಜೆ ಮಾಡಿ ಅವರನ್ನು ಸನ್ಮಾನಿಸಿ ಗೌರವಿಸಿದರು. ತಾಲೂಕು ರೈತ ಸಂಘದ ಅಧ್ಯಕ್ಷ ಅನಿಲ್ ಕುಮಾರ್,ಚಿಂತಕ ಜಿ.ಕೆ. ನಾಗಣ್ಣ,ಕಸಾಪ ಅಧ್ಯಕ್ಷ ಕಪನಿ ಪಾಳ್ಯ ರಮೇಶ್, ಸವಿತಾ ಸಮಾಜದ ನಾರಾಯಣಸ್ವಾಮಿ, ವೆಂಕಟೇಶ್ ಸೇರಿದಂತೆ ನೂರಾರು ರೈತ ಮುಖಂಡರು ಭಾಗವಹಿಸಿದ್ದರು,@publicnewskunigal