ಶ್ರೀರಂಗ ಏತ ನೀರಾವರಿ ಯೋಜನೆಯ ಪಂಪ್ ಹೌಸ್ ಉದ್ಘಾಟನೆ ದಶಕಗಳ ಕನಸಿಗೆ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ಯೋಜನೆಗೆ 378 ಕೊಟಿ ವೆಚ್ಚ ಗಂಗಾಪೂಜೆ ನೆರವೇರಿಸಿದ ಶಾಸಕ!
ಕುಣಿಗಲ್ ತಾಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ 18 ಕೆರೆಗಳಿಗೆ ನೀರು ತುಂಬಿಸುವ ಮಹತ್ವಕಾಂಕ್ಷಿ ಶ್ರೀರಂಗ ಏತ ನೀರಾವರಿ ಯೋಜನೆಗೆ ಸೋಮವಾರ ಶಾಸಕ ಡಾ.ರಂಗನಾಥ್ ಪ್ರಾಯೋಗಿಕವಾಗಿ ಐದು ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಪಂಪ್ ಹೌಸ್ ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು 2015 ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು 2017 ಕ್ಕೆ ಯೋಜನೆ ಪೂರ್ಣಗೊಳಿಸಬೆಕಿತ್ತು ಆದರೆ ಯೋಜನೆಗೆ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬ ಕಾರಣದಿಂದ ದಶಕಗಳ ಬಳಿಕ ಯೋಜನೆಗೆ ಇದೀಗ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು ಯಲಿಯೂರು,ಆಲ್ಕೆರೆ ಹೊಸಹಳ್ಳಿ,ಹೊಸೂರು,ಕತ್ರಿಘಟ್ಟ,ಹುತ್ರಿ ಗ್ರಾಮದ ಕೆರೆಗಳಿಗೆ ಇಂದು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ, ಪೈಪ್ ಲೈನ್ ಮೂಲಕ ಯಲಿಯೂರು ಕೆರೆಗೆ ಹರಿಯುವ ನೀರಿಗೆ ಗಂಗಾಪೂಜೆ ನೆರವೇರಿಸಿದ ಶಾಸಕರು ಬಳಿಕ ಮಾತನಾಡಿ ನನ್ನ ಜೀವನದಲ್ಲಿ ಕನಸನ್ನು ಕಂಡಂತೆ ಕುಣಿಗಲ್ ತಾಲ್ಲೂಕಿನ ಮಗನಾಗಿ ಇಂದಿನ ದಿನವನ್ನು
ಮರೆಲಾಗದ ದಿನ ಎಂದು ಹೇಳಬಲ್ಲೆ ಜನ್ಮ ಕೊಟ್ಟಂತಹ ಹುತ್ರಿದುರ್ಗ ಹೋಬಳಿಯ ಮಗನಾಗಿ ನಾನು ನನ್ನ ಕೈಲಾದಷ್ಟು ಸೇವೆ ಮಾಡಬೇಕು ಎಂದು ಪ್ರತಿಯೊಂದು, ದಿನ ಪ್ರತಿಯೊಂದು ಕ್ಷಣ ಯೋಚನೆ ಮಾಡುವ ಸಮಯದಲ್ಲಿ, ನನ್ನ ಜೊತೆಯಿರುವ ನನ್ನ ಹೋಬಳಿಯ ರೈತಾಪಿ ಕುಟುಂಬದವರಿಗೆ ಪ್ರತಿಯೊಂದು ಕೆರೆಗೆ ನೀರು ತುಂಬಿಸುತ್ತೇನೆಂದು ಮಾತು ಕೊಟ್ಟಿದ್ದೆ, ಅದೇ ರೀತಿ ನಮ್ಮ ಮಾಜಿ ಸಂಸದ ಡಿ.ಕೆ ಸುರೇಶ್ ಅವರ ಅವಧಿಯಲ್ಲಿ ಶ್ರೀರಂಗ ಏತ ನೀರಾವರಿ ಯೋಜನೆಯನ್ನು ಜಾರಿಗೆ ತಂದು ಪ್ರತಿಯೊಂದು ಕೆರೆಗಳಿಗೆ ನೀರು ತುಂಬಿಸುವ ಮುಂದುವರಿದ ಭಾಗವಾಗಿ ಇಂದು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದೆನೆ,ಮಾಜಿ ಸಂಸದ ಡಿ.ಕೆ ಸುರೇಶ್ ರವರ ಪರಿಶ್ರಮದ ಫಲವಾಗಿ ಇಂದು ಹುತ್ರಿದುರ್ಗ ಹೋಬಳಿಯ ಸುಮಾರು 25 ಕೆರೆಗಳಲ್ಲಿ 19 ಕೆರೆಗಳನ್ನು ತುಂಬಿಸುವುದರ ಜೋತೆಗೆ ತಾಲ್ಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸುತ್ತೇನೆ ಎಂದು ಘೋಷಣೆ ಮೂಲಕ ಹೇಳುತ್ತೇನೆ,ಇದಕ್ಕಾಗಿ ನಾನು ಮಾನ್ಯ ಮುಖ್ಯ
ಮಂತ್ರಿಗಳು, ಮಾನ್ಯ ಉಪ ಮುಖ್ಯಮಂತ್ರಿಗಳಿಗೆ ಹಾಗೂ ಮಾಜಿ ಸಂಸದರಾದ ಡಿ.ಕೆ ಸುರೇಶ್ ರವರಿಗೆ ವಿಶೇಷ ಅಭಿನಂದನೆಯನ್ನು ತಿಳಿಸುತ್ತೇನೆ,ಕುಣಿಗಲ್ ತಾಲ್ಲೂಕಿನ ಪ್ರತಿಯೊಂದು ಕೆರೆಗಳನ್ನು ತುಂಬಿಸಬೇಕು ಎಂಬ ಕನಸನ್ನು ಇಟ್ಟುಕೊಂಡಿದ್ದೇನೆ. ಮುಂದಿನ ದಿನಗಳಲ್ಲಿ ಲಿಂಕ್ ಕೆನಾಲ್ ತಂದು ಆ ಕೆಲಸ ಮಾಡುತ್ತೆನೆ, ಬಹಳಷ್ಟು ಜನ ವಿರೋಧ ಪಕ್ಷದವರು ಹೇಳುತ್ತಿದ್ದರು ಲಿಂಕ್ ಕೆನಾಲ್ ಕುಣಿಗಲ್ ತಾಲ್ಲೂಕಿಗೆ ಉಪಯೋಗ ಆಗುವುದಿಲ್ಲ ಎಂದು, ಇವತ್ತು ನಾನು ಹುತ್ರಿದುರ್ಗ ಕೆರೆಯನ್ನು ತುಂಬಿಸಿ ನಿಮಗೆ ಉತ್ತರ ಕೊಡುತ್ತೇನೆ ಎಂದು ಹೇಳಿದ್ದೆ, ಅದರಂತೆ ಇವತ್ತು ಕೆರೆಯನ್ನು ತುಂಬಿಸಲು ಹೊರಟಿದ್ದೇನೆ, ಕೊತ್ತಗೆರೆ ಕೆರೆಗೆ ನೀರು ತುಂಬಿಸಲು ಪ್ರಾಜೆಕ್ಟ್ ರೆಡಿ ಮಾಡ್ತಿದರೆ, ಹುಲಿಯೂರುದುರ್ಗಕ್ಕೂ ಪ್ರಾಜೆಟ್ ರೆಡಿ ಆಗ್ತಿದೆ, ನಾನು ಪ್ರತಿಯೊಂದು ಕೆರೆಗಳನ್ನು ತುಂಬಿಸಿ ನನ್ನ ತಾಲ್ಲೂಕಿನ ಜನತೆಯ ಋಣವನ್ನು ತೀರಿಸುತ್ತೇನೆ ಎಂದರು, ಕಾರ್ಯಕ್ರಮದಲ್ಲಿ ಹೇಮಾವತಿ ನಾಲ ವಿಭಾಗದ ಕಾರ್ಯಪಾಲಕ ಅಭಿಯಂತರರು ಕಿರಣ್,ಸಹಾಯಕ ಕಾರ್ಯಪಾಲಕ ಅಭಿಯಂತರ ರವಿ,ಸಹಾಯಕ ಇಂಜಿನಿಯರ್ ಕೃಷ್ಣ ಮುಖಂಡರಾದ ಬೇಗೂರು ನಾರಾಯಣ್, ಮೂರ್ತಿ ಆಡಿಟರ್ ನಾಗರಾಜು,ಕೋಘಟ್ಟ ರಾಜಣ್ಣ, ಓಂಕಾರ್ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುಮತಿ,ಆಲ್ಕೆರೆ ನಾರಾಯಣ್ ನಾಗರಾಜು ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal