ಯಾವುದೆ ಅನುಮತಿ ಇಲ್ಲದೆ ತಡರಾತ್ರಿಯಲ್ಲಿ ಹಳೆವೂರು ಗ್ರಾಮದ ಶ್ರೀ ಹುಲಿಯೂರಮ್ಮ ದೇವಿಯ ಮೂಲ ವಿಗ್ರಹದ ಹಚ್ಚು ತೆಗೆಯಲು ಹೊಗಿದ್ದವರನ್ನು ಗ್ರಾಮಸ್ಥರು ಪ್ರಶ್ನಿಸುತಿದ್ದಂತೆ ಸ್ಥಳದಿಂದ ಪರಾರಿ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಳೆವೂರು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಹುಲಿಯೂರಮ್ಮ ದೇವಾಲಯದಲ್ಲಿ ಬುಧವಾರ ತಡರಾತ್ರಿ ಅಮ್ಮನವರ ಮೂಲ ವಿಗ್ರಹದ ಅಚ್ಚನ್ನು ಸಂಗ್ರಹಿಸಲು ಹೋಗಿದ್ದ ಕೆಲವರು ಗ್ರಾಮಸ್ಥರು ಪ್ರಶ್ನೆಮಾಡುತ್ತಿದ್ದಂತೆ ಹಚ್ಚು ಸಂಗ್ರಹ ಮಾಡಲು ತಂದಿದ್ದ ಪರಿಕರಗಳನ್ನು ಬಿಟ್ಟು ಸ್ಥಳದಿಂದ ಪರಾರಿಯಾಗಿರುವ ಘಟನೆ ನಡೆದಿದೆ ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ತಾಲ್ಲೂಕಿನ ‘ಎ’ ದರ್ಜೆಯ ಶ್ರೇಣಿಯ ದೇವಾಲಯ ವಾಗಿರುವ ಶ್ರೀ ಹುಲಿಯೂರಮ್ಮ ದೇವಾಲಯದಲ್ಲಿ ಯಾವುದೆ ರೀತಿಯ ಭದ್ರತೆ ಇಲ್ಲದಿರುವುದು ಮೆಲ್ನೊಟಕ್ಕೆ ಕಂಡುಬಂದಿದೆ
ಬುಧವಾರ ತಡರಾತ್ರಿ 9:00 ರ ಸಮಯದಲ್ಲಿ ದೇವಾಲಯದ ಬಾಗಿಲು ಮುಚ್ಚದೆ ಹಾಗೂ ದೇವಾಲಯದ ಒಳಗೆ ಯಾರೊ ಇರುವುದನ್ನು ಗಮನಿಸಿದ ಸ್ಥಳಿಯರು ದೇವಾಲಯದ ಒಳಗೆ ಇದ್ದವರನ್ನು ಪ್ರಶ್ನಿಸಿದ್ದಾರೆ ಈ ತಡ ರಾತ್ರಿಯಲ್ಲಿ ಏನು ಮಾಡುತ್ತಿದ್ದಿರ ಎಂದ ಒಳಗಿದ್ದ ಕೆಲ ಅರ್ಚಕರು ಹಾಗೂ ಇತರರು ಸರಿಯಾದ ಉತ್ತರ ನೀಡದಿದ್ದಾಗ ಅನುಮಾನಗೊಂಡ ಗ್ರಾಮಸ್ಥರು ಕೂಡಲೆ ಪೊಲೀಸರಿಗೆ ಹಾಗೂ ದೇವಾಲಯದ ಕಾರ್ಯನಿರ್ವಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಅಧಿಕಾರಿಗಳು ದೇವಾಲಯದ ಅರ್ಚಕರು ಘಟನೆಯ ಬಗ್ಗೆ ನನಗೆ ಯಾವುದೆ ರೀತಿಯ ಮಾಹಿತಿ ನೀಡಿಲ್ಲ ಎಂದು ತೀಳಿಸಿದ್ದಾರೆ ಕೂಡಲೆ ಗ್ರಾಮಸ್ಥರು ಅರ್ಚಕರು ಮತ್ತು ಅಮ್ಮನವರ ವಿಗ್ರಹದ ಹಚ್ಚು ಸಂಗ್ರಹ ಮಾಡಲು ಬಂದಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಸ್ಥಳಕ್ಕೆ ಪೊಲೀಸರು ಬರುತ್ತಿದ್ದಂತೆ ದೇವಾಲಯದ ಒಳಗಿದ್ದ ಅರ್ಚಕರು ಇತರರು ಸ್ಥಳದಿಂದ ಕಾಲ್ಕಿತ್ತಿದ್ದಾರೆ ಇನ್ನೂ ದೇವಾಲಯದ ಅರ್ಚಕರ ನಡೆ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದ್ದು ಅಧಿಕಾರಿಗಳಿಂದ ಯಾವುದೆ ರೀತಿಯ ಅನುಮತಿ ಪಡೆಯದೆ ತಡರಾತ್ರಿಯಲ್ಲಿ ದೇವರ ಮೂಲ ವಿಗ್ರಹದ ಪ್ರತಿಬಿಂಬ ಹಚ್ಚು ಸಂಗ್ರಹ ಮಾಡುವುದು ಏನಿತ್ತು ಎಂಬುದು ಗ್ರಾಮಸ್ಥರ ಹಾಗೂ ಭಕ್ತರ ಪ್ರಶ್ನೆಯಾಗಿದೆ

ತಡರಾತ್ರಿ ದೇವಾಲಯಕ್ಕೆ ಕಾರ್ಯನಿರ್ವಣ ಅಧಿಕಾರಿ ಮಂಜೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಗುರುವಾರ ದೇವಾಲಯದ ಅರ್ಚಕರು ಹಾಗೂ ಕಾವಲುಗಾರರಿಗೆ ಕಾರಣ ಕೇಳಿ ನೋಟಿಸ್ ನೀಡಿದ್ದು ಘಟನೆ ಸಂಬಂಧ ದೇವಾಲಯದ ಆಡಳಿತ ಅಧಿಕಾರಿ ಹಾಗಿರುವ ತುಮಕೂರು ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ ಇನ್ನೂ ಮುಜರಾಯಿ ಇಲಾಖೆ ವ್ಯಾಪ್ತಿಗೆ ಒಳಪಡುವ ದೇವಾಲಯದಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ಅವ್ಯವಾರ ನಡೆದಿದ್ದು ಈ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ಭಕ್ತರೊಬ್ಬರು ಖಾಸಗಿ ದೂರು ದಾಖಲಿಸಿದ್ದು ಪ್ರಕರಣ ತನಿಖೆ ಹಂತದಲ್ಲಿರುವಾಗಲೇ ದೇವಾಲಯದಲ್ಲಿ ಈ ರೀತಿಯ ಅಹಿತಕರ ಘಟನೆಗಳು ನಡೆಯುತ್ತಿದ್ದು ಮುಜರಾಯಿ ಇಲಾಖೆ ಅಧಿಕಾರಿಗಳು ದಿವ್ಯ ನಿರ್ಲಕ್ಷ ಕಾರಣದಿಂದಾಗಿ ಪದೆ ಪದೆ ಇಂತಹ ಅಹಿತಕರ ಘಟನೆ ನಡೆಯುತ್ತಲಿವೆ ಭಕ್ತರು ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ನೀಡಿರುವ ದೇಣಿಗೆ ದುರುಪಯೋಗ ಹಾಗಿರುವ ಬಗ್ಗೆ ಜಿಲ್ಲಾಧಿಕಾರಿ, ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು ಮುಜುರಾಯಿ ಸಚಿವರು, ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ,ಸೇರಿದಂತೆ ಹಲವರಿಗೆ ಈ ಬಗ್ಗೆ ಖಾಸಗಿ ದೂರುಗಳು ದಾಖಲಾಗಿದ್ದರು ಸಹ ಇದುವರೆಗೂ ಯಾವುದೇ ತನಿಖೆ ನಡೆದಿಲ್ಲ ದೇವಾಲಯದ ಬೊಕ್ಕಸಕ್ಕೆ ಸೇರ ಬೇಕಾಗಿದ್ದ ಕೋಟ್ಯಂತರ ರೂಪಾಯಿ ದುರುಪಯೋಗ ಹಾಗಿ ದೂರು ಕೊಟ್ಟರು ಯಾವುದೇ ತನಿಖೆ ನಡೆದಿಲ್ಲ ಇದರಲ್ಲಿ ಇಲಾಖೆಯ ಅಧಿಕಾರಿಗಳ ಪಾಲು ಎಷ್ಟಿದೆ ಎಂಬುದು ಶ್ರೀ ಹುಲಿಯೂರಮ್ಮ ದೇವಿಯೆ ಬಲ್ಲಳು ದೇವಾಲಯದ ವ್ಯವಸ್ಥಾಪನ ಸಮಿತಿ ರಚನೆ ಬಗ್ಗೆ ಕಳೆದ ಎರಡು ವರ್ಷಗಳ ಹಿಂದೆ ಆಯ್ಕೆ ಪ್ರಕ್ರಿಯೆಗಳು ನಡೆದರು ವ್ಯವಸ್ಥಾಪನ ಸಮಿತಿ ಕಾರ್ಯರೂಪಕ್ಕೆ ಬಂದಿಲ್ಲ ದೇವಾಲಯದಲ್ಲಿ ಇಷ್ಟೆಲ್ಲ ಅಕ್ರಮಗಳು ನಡೆದರು ಯಾವುದೆ ರೀತಿಯ ಕ್ರಮ ಜರುಗದೆ ಇರುವುದು ಕಂಡರೆ ಇದರ ಹಿಂದೆ ಕಾಣದ ಕೈಗಳು ದೇವಾಲಯದ ಆಡಳಿತವನ್ನು ತಮ್ಮ ಕೊಟ್ಟಷ್ಠಿಯಲ್ಲಿ ಹಿಡಿದಿಡುವುದು ಮೆಲ್ನೊಟಕ್ಕೆ ಕಾಣುತ್ತಿದೆ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸಿ ದೇವಾಲಯದಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಉನ್ನತ ತನಿಖೆ ನಡಸಲಿ ಎಂಬುದು ಭಕ್ತರ ಆಗ್ರಹ @publicnewskunigal