ನಾವೆಲ್ಲರೂ ವಿಚಾರ ಸಾಹಿತ್ಯವನ್ನು ತಿಳಿದುಕೊಂಡರೆ ಪ್ರಪಂಚಕ್ಕೆ ಒಳ್ಳೆಯದು, ಕುವೆಂಪುರವರು ವಿಚಾರ ಕ್ರಾಂತಿಯನ್ನೇ ಎಬ್ಬಿಸಿ ಸರಳ ಜೀವನದ ಹಾದಿಯನ್ನು ತೋರಿಸಿದರು ಎಂದು ಸಾಹಿತಿ ಜಾಣಗೆರೆ ವೆಂಕಟರಾಮಯ್ಯ!
ಕುಣಿಗಲ್ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಶುಕ್ರವಾರ ನಡೆದ ಗ್ರಂಥಾಲಯ ಉದ್ಘಾಟನಾ ಸಮಾರಂಭದಲ್ಲಿ ವಿಚಾರ ಸಾಹಿತ್ಯ ಕೃತಿ ಬಿಡುಗಡೆ ಮಾಡಿ ಮಾತನಾಡಿ, ಕುವೆಂಪು ರವರ ವಿಚಾರ ಕ್ರಾಂತಿ ಹೆಚ್ಚಿಸಬೇಕಾಗಿದೆ, ಇತ್ತೀಚಿನ ದಿನಗಳಲ್ಲಿ ನಾರಾಯಣ ಗುರು ಪೆರಿಯಾರ್ ರಾಮಸ್ವಾಮಿ, ಭಗತ್ ಸಿಂಗ್, ಅವರಂತಹ ವಿಚಾರವಾದಿಗಳನ್ನು ಮರೆಯುತ್ತಿದ್ದೇವೆ ಇದು ನೋವಿನ ಸಂಗತಿ,ದೇಶದ ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಬಾರದೆಂಬ ಮನು ವಾದಿಗಳ ಪುರೋಹಿತ ಶಾಹಿಗಳ ಸಾಮ್ರಾಜ್ಯದಲ್ಲಿ ದಲಿತ ಹೆಣ್ಣುಮಗಳೊಬ್ಬಳು ಮೆಟ್ಟಿನಿಂತು ಮಹಿಳೆಯರಿಗೆ ಶಿಕ್ಷಣ ಕೊಟ್ಟವರು ದಲಿತ ಮಹಿಳೆ ಸಾಹಿತ್ರಿ ಬಾಪುಲೆ ಇಂಥವರನ್ನ ಮರೆಯಲೇ ಬಾರದು, ದಲಿತರನ್ನ ದ್ವೇಷ ಮಾಡಿದ ಜನಾಂಗ ಇತ್ತೀಚೆಗೆ ಧರ್ಮ ಮತ್ತು ಜಾತಿಗಳ ಮಧ್ಯೆ ಎತ್ತಿ ಕಟ್ಟಿ ವಿಷ ಬೀಜ ಬಿತ್ತುತ್ತಿದ್ದಾರೆ, ಅಂಬೇಡ್ಕರ್ ರವರು ದೇಶಕ್ಕೆ ಸಂವಿಧಾನ ಕೊಡದಿದ್ದರೆ ದೇಶ ಉಳಿಯುತ್ತಿರಲಿಲ್ಲ ಎಂದರು.ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಭ್ರಷ್ಟಾಚಾರದಲ್ಲಿ ಮುಳುಗಿದರೆ ಜಿಲ್ಲಾ ಮತ್ತು ತಾಲ್ಲೂಕು ಸಾಹಿತ್ಯ ಪರಿಷತ್ತುಗಳು ಸ್ವತಂತ್ರವಾಗಿ ಕೆಲಸ ನಿರ್ವಹಿಸುತ್ತಿವೆ ಎಂದರು. ಭ್ರಷ್ಟಾಚಾರ ಸಾಬೀತಾದರೆ ರಾಜ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಜೈಲು ಪಾಲಾಗಲಿದ್ದಾರೆ ಎಂದರು.ಕ ಸಾ ಪ ಜಿಲ್ಲಾ ಅಧ್ಯಕ್ಷ ಸಿದ್ದಲಿಂಗಪ್ಪ ಮಾತನಾಡಿ ಯಾರ ಮನೆಗಳಲ್ಲಿ ಗ್ರಂಥಾಲಯ ಗಳಿವೆಯೋ ಪುಸ್ತಕ ಗಳಿವೆಯೋ ಅವರ ಮನೆಯಲ್ಲಿ ಅಪರಾಧಗಳ ಸಂಖ್ಯೆ ಕಡಿಮೆ, ಸಂಸ್ಕಾರ ಹೆಚ್ಚಿರುತ್ತದೆ, ಗ್ರಂಥಾಲಯಗಳು ಮಕ್ಕಳಿಗೆ ಸಂಸ್ಕಾರವನ್ನು ತಂದು ಕೊಡುತ್ತವೆ ಎಂದರು.ಸಾಹಿತಿ ಬೀಚನಹಳ್ಳಿ ಕರಿಗೌಡ ಮಾತನಾಡಿ ಪ್ರಪಂಚಕ್ಕೆ ಸೂರ್ಯ ಬೆಳಕಾದರೆ ಮನೆಗೆ ಗ್ರಂಥಾಲಯವೇ ಬೆಳಕು, ಗ್ರಂಥಾಲಯಗಳಲ್ಲಿ ಉತ್ತಮ ಪುಸ್ತಕಗಳನ್ನ ಇಡಬೇಕು ಗ್ರಂಥಾಲಯಗಳು ದೇವಾಲಯವಿದ್ದಂತೆ ಕುವೆಂಪು ಆದರ್ಶಗಳನ್ನ ಅಳವಡಿಸಿಕೊಳ್ಳಿ ಅರಸರ ಆಡಳಿತದ ಕಾಲದಲ್ಲಿ ಆಡಳಿತ ಭಾಷೆ ಕನ್ನಡ ವಾಗಿತ್ತು ಆದರೆ ಇಂದು ಕರ್ನಾಟಕದಲ್ಲಿ ಕನ್ನಡ ಚಳುವಳಿ ಕಷ್ಟದಲ್ಲಿದೆ ಎಂದರು.ಸಾಹಿತಿ ನಾರಾಯಣ್ ಹೊಡಾಘಟ್ಟ ಮಾತನಾಡಿ ಧರ್ಮ ದೇವರ ಹಿಂದೆ ಬೀಳುವ ಬದಲು ಪುಸ್ತಕಗಳ ಹಿಂದೆ ಬೀಳಬೇಕು ಜ್ಞಾನಾರ್ಜನೆ ಜೊತೆಗೆ ಆತ್ಮ ಗೌರವ ಹೆಚ್ಚುತ್ತದೆ, ಗ್ರಂಥಾಲಯ ಸಂಸ್ಕಾರ ಬೆಳಸಿದರೆ, ಧರ್ಮ ದೇಶವನ್ನು ಹಾಳು ಮಾಡುತ್ತದೆ ಇದಕ್ಕೆ ಪಾಕಿಸ್ತಾನ, ಆಫ್ಘಾನಿಸ್ತಾನ, ಬಾಂಗ್ಲಾದೇಶವೇ ತಾಜಾ ಉದಾಹರಣೆ ಎಂದರು.ಮಾಜಿ ಕ ಸಾ ಪ ಅಧ್ಯಕ್ಷ ಕ ಚ ಕೃಷ್ಣಪ್ಪನವರ ವಿಚಾರ ಸಾಹಿತ್ಯ ಕೃತಿ ಬಿಡುಗಡೆ ಮಾಡಲಾಯಿತು, ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪತ್ರಕರ್ತ ಸಾಹಿತಿ ವೈ ಜಿ ವೆಂಕಟೇಶಯ್ಯರವರನ್ನ ಸನ್ಮಾನಿಸಲಾಯಿತು, ಕಾರ್ಯಕ್ರಮದಲ್ಲಿ ಕನ್ನಡದ ಬಾವುಟ ಮತ್ತು ಕನ್ನಡದ ಕವಿಗಳ ಭಾವಚಿತ್ರಗಳು ರಾರಾಜಿಸುತ್ತಿದ್ದವು, ಕಾರ್ಯಕ್ರಮದಲ್ಲಿ ಮಾಜಿ ಸಚಿವ ಡಿ ನಾಗರಾಜಯ್ಯ, ಸೊಂದಲಗೆರೆ ಲಕ್ಷ್ಮಿಪತಿ ಮಾತನಾಡಿದರೆ ,ಗ್ರಂಥಾಲಯದ ಪೀಠೋಪಕರಣ ಹಾಗೂ ಡಿಜಿಟಲ್ ಉಪಕರಣಗಳ ದಾನಿಗಳಾದ ವೆಗೋಲಾ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯ ನಿರ್ದೇಶಕ ಪಿ ಶಿವರಾಂ ಟಿ, ಪ್ರಧಾನ ವ್ಯವಸ್ಥಾಪಕ ಜಗದೀಶ್ ನಾಯಕ್, ಪ್ರಗತಿ ಎಚ್ ಆರ್ ಸರ್ವಿಸ್ ಪ್ರೈವೇಟ್ ಲಿಮಿಟೆಡ್ ಮಾಲೀಕ ರಾದ ಜಿ ರವಿಕುಮಾರ್, ಕ ಸಾ ಪ ಅಧ್ಯಕ್ಷ ಕಪನಿಪಾಳ್ಯ ರಮೇಶ್, ಕ ಸಾ ಪ ಮಾಜಿ ಅಧ್ಯಕ್ಷರಾದ ತಗಡೂರು ವೀರಭದ್ರಪ್ಪ, ಜಿ,ಬಿ ಮಲ್ಲಪ್ಪ, ಕೆಎಚ್ ವೆಂಕಟೇಶ್, ಗಾಯಿತ್ರಿ ಬಲರಾಮರಾಜು, ದಿನೇಶ್ ಕುಮಾರ್ ಕ ಚ ಕೃಷ್ಣಪ್ಪ, ನಳಿನಾ ಕೃಷ್ಣಪ್ಪ,ಪದಾಧಿಕಾರಿ ಗಳಾದ ಸಿದ್ಧಲಿಂಗ ಸ್ವಾಮಿ, ಜಯರಾಮಯ್ಯ, ರಾಮಣ್ಣ, ಶಿವಣ್ಣ, ಜೀವಂದರ್ ಕುಮಾರ್, ಉಮೇಶ್, ಕೆ ಲೀಲಾವತಿ, ಪ್ರಸಾದ್ ನಿಡಸಾಲೆ, ವರದರಾಜು, ತೋಪನಯ್ಯ, ಲಕ್ಷ್ಮೀನಾರಾಯಣ್, ರಂಗನಾಥ್, ಲೋಕೇಶ್, ಷರೀಫ್, ಮೋಹನ್ ಇದ್ದರು.@publicnewskunigal