ನಿಡಸಾಲೆ ಗ್ರಾಮ ಪಂಚಾಯಿತಿ ಅವರಣದಲ್ಲಿ ದಲಿತರ ಕುಂದು ಕೊರತೆ ಸಭೆ ಅಂಗವಿಕಲರಿಗೆ ಮನಶಾಸನ ಪತ್ರ ವಿತರಣೆ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ನೀಡಸಾಲೆ ಗ್ರಾಮ ಪಂಚಾಯಿತಿ ಅವರಣದಲ್ಲಿ ಸೋಮವಾರ ಗ್ರಾಮ ಪಂಚಾಯಿತಿ ಮಟ್ಟದ ದಲಿತರ ಕುಂದು ಕೊರತೆಯ ಸಭೆಯನ್ನು ಅಮ್ಮಿಕೋಳ್ಳಲಾಗಿತ್ತ ಕಾರ್ಯಕ್ರಮವನ್ನು ಡಾ.ಬಿ.ಆರ್ ಅಂಬೇಡಕರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಹುಲಿಯೂರುದುರ್ಗ ಪಿ.ಎಸ್.ಐ ಪ್ರಶಾಂತ್ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ದಲಿತರ ಕುಂದು ಕೊರತೆಯ ಸಭೆಯಲ್ಲಿ ಗ್ರಾಮ ಪಂಚಾಯ್ತಿಯಲ್ಲಿ ಬಗೆಹರಿಸಬಹುದಾದ ಸಮಸ್ಯೆಗಳನ್ನು ಠಾಣೆಗೆ ತರುತ್ತಿದ್ದು ಆದ್ದರಿಂದ ಗ್ರಾಮ ಪಂಚಾಯಿತಿಲ್ಲಿ ಸಭೆ ನಡೆಸಿ ಸ್ಥಳಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಂದು ಗ್ರಾಮ ಪಂಚಾಯಿತಿಯಲ್ಲಿ ಸಭೆ ಅಮ್ಮಿಕೋಳ್ಳಲಾಗಿದೆ ಎಂದರು,ನೀಡಸಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಲಿತರ ಕಾಲೋನಿಗಳಲ್ಲಿ ಚರಂಡಿ ಸ್ವಚ್ಚಗೊಳಿಸಿಲ್ಲ ಬೀದಿ ದೀಪ ಸರಿಯಾಗಿ ಹಾಕಿಲ್ಲ,ಗ್ರಾಮಗಳಲ್ಲಿನ ಸಮಸ್ಯೆಗಳ ಬಗ್ಗೆ ಗ್ರಾಮ ಪಂಚಾಯಿತಿಗೆ ದೂರು ನೀಡಿದರೆ ಕ್ರಮ ವಹಿಸುವುದಿಲ್ಲ ಎ.ಕೆ ದೊಡ್ಡಿ ನೀಡಸಾಲೆ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಸಭೆಯಲ್ಲಿ ಗ್ರಾಮಸ್ಥರು ದೂರಿದರು ಈ ವೇಳೆ ಪಿಎಸ್ಐ ಪ್ರಶಾಂತ್ ಮಾತನಾಡಿ ಗ್ರಾಮ ಪಂಚಾಯಿತಿಯಲ್ಲಿ ಬಗೆ ಹರಿಸುವ ಸಮಸ್ಯೆಗಳನ್ನು ಠಾಣೆಗೆ ತರದೆ ಪಿಡಿಒ ರವರ ಗಮನಕ್ಕೆ ತನ್ನಿ ಎಂದರು ಶಾಲೆ ಕಾಲೇಜು ಬಳಿ ಹೆಣ್ಣು ಮಕ್ಕಳನ್ನು ಕೆಲವು ಪುಂಡರು ಚುಡಾಹಿಸುತ್ತಿದ್ದು ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು ಇಂತಹ ಘಟನೆಗಳು ನಡೆದಾಗ ಕೂಡಲೆ 112 ಗೆ ಕರೆ ಮಾಡಿ ನಮ್ಮ ಗಮನಕ್ಕೆ ತನ್ನಿ ಅಂತಹವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಿದರೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುವುದು ಮಕ್ಕಳ ವಿಷಯದಲ್ಲಿ ಕಾನೂನು ಪೋಷಕರು ನಿರ್ಲಕ್ಷ್ಯ ವಹಿಸದೆ ಎಚ್ಚರಿಕೆಯಿಂದ ಇರಿ ಎಂದರು ಈ ವೇಳೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅಂಗವಿಕಲರಿಗೆ ಮನಶಾಸನ ಪತ್ರ ವಿತರಿಸಿ ಸನ್ಮಾನಿಸಿ ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ಪಿ.ಎಸ್.ಐ ಪ್ರಶಾಂತ್,ಗ್ರಾಮ ಪಂಚಾಯಿತಿ ಪಿಡಿಒ ದಿಲೀಪ್ ಕುಮಾರ್,ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲತಾ ಸದಸ್ಯರಾದ ಜಯರಾಮಯ್ಯ, ದಲಿತ ಮುಖಂಡರಾದ ಶಂಕರ್,ಪಿ.ಎಂ ಹೊನ್ನಯ್ಯ,ಪ್ರಕಾಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal