ಕಿತ್ತಿನಾಮಂಗಲ ಕೆರೆಯ ಫಲವತ್ತಾದ ಮಣ್ಣನ್ನು ವಿನರ್ ಬರ್ಗರ್ ಇಟ್ಟಿಗೆ ಕಾರ್ಖಾನೆಗೆ ಸಾಗಿಸಲು ಸ್ಥಳಿಯ ರೈತರ ವಿರೋಧ!
ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಕಿತ್ತಿನಾಮಂಗಲ ಗ್ರಾಮದ ಕೆರೆಯಿಂದ ಫಲವತ್ತಾದ ಮಣ್ಣನ್ನು ಟಿಪ್ಪರ್ ಲಾರಿಗಳಲ್ಲಿ ವಿನರ್ ಬರ್ಗರ್ ಇಟ್ಟಿಗೆ ಕಾರ್ಖಾನೆಗೆ ಅಕ್ರಮವಾಗಿ ರಾತ್ರೊ ರಾತ್ರಿ ಸಾಗಿಸುತ್ತಿರುವ ಆರೋಪ ಕೇಳಿಬಂದಿದ್ದು ರಾತ್ರಿ ವೇಳೆ ಇದನ್ನು ಪ್ರಶ್ನಿಸಲು ಹೊದ ಸ್ಥಳಿಯ ರೈತರಿಗೆ ಲಾರಿ ಹತ್ತಿಸುವ ಬೇದರಿಕೆ ಹಾಕಲಾಗಿದೆ ಎಂದು ನೂರಾರು ಮಂದಿ ರೈತರು ಭಾನುವಾರ ಕೆರೆ ಅಂಗಳದಲ್ಲಿ ಮಣ್ಣು ತುಂಬಲು ಬಳಸುವ ಇಟಾಚಿಯನ್ನು ತಡೆದು ಕೆರೆಯಿಂದ ಹೊರಗೆ ಕಳುಹಿಸಿದ ಘಟನೆ ನಡೆಯಿತು, ಈ ವೇಳೆ ಕೆ.ಪಿ.ಸಿ.ಸಿ ಸದಸ್ಯ ಬೇಗೂರು ನಾರಾಯಣ್ ಸ್ಥಳಕ್ಕೆ ಆಗಮಿಸಿ ಕೆರೆಯಿಂದ ಅಕ್ರಮವಾಗಿ ಮಣ್ಣು ಸಾಗಾಟ ಮಾಡುತ್ತಿಲ್ಲ ಸಣ್ಣ ನೀರಾವರಿ ಇಲಾಖೆಯಿಂದ ಅನುಮತಿ ಪಡೆದು ಮಣ್ಣು ತುಂಬಲಾಗುತ್ತಿದೆ ಎಂದರು,ಈ ವೇಳೆ ಆಕ್ರೋಶಕ್ಕೆ ಒಳಗಾದ ಸ್ಥಳಿಯ ರೈತರು ನಾನು ನಮ್ಮ ಜಮೀನಿಗೆ ಕೆರೆಯಿಂದ ಮಣ್ಣು ತುಂಬಲು ಹೊದರೆ ಗಾಲಾಟೆ ಮಾಡುತ್ತಾರೆ ಪೊಲೀಸರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ತೊಂದರೆ ನೀಡುತ್ತಾರೆ ಆದರೆ ನಮ್ಮ ಗಮನಕ್ಕೆ ತರದೆ ಸ್ಥಳಿಯ ಗ್ರಾಮ ಪಂಚಾಯ್ತಿಯಲ್ಲಿ ಅನುಮತಿ ಪಡೆಯದೆ ಮಣ್ಣು ರಾತ್ರೋ ರಾತ್ರಿ ಮಣ್ಣು ಸಾಗಿಸಲಾಗುತ್ತಿದೆ ಎಂದರು,ಏ ವೇಳೆ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಶಿವಣ್ಣ ಮಾತನಾಡಿ ಕೆರೆ ನಿರ್ಮಾಣ ಮಾಡುವಾಗ ಇಲ್ಲಿನ ಸ್ಥಳಿಯರು ನೂರಾರು ಎಕರೆ ಭೂಮಿ ಕಳೆದುಕೊಂಡಿದ್ದಾರೆ ರೈತರ ಭೂಮಿ ಸೇರಬೇಕಿದ್ದ ಕೆರೆಯ ಫಲವತ್ತಾದ ಮಣ್ಣನ್ನು ಸ್ಥಳಿಯ ಗಮನಕ್ಕೆ ತರದೆ ಅಕ್ರಮವಾಗಿ ಸಾಗಿಸಲಾಗುತ್ತಿದೆ ಇದಕ್ಕೆ ಅನುಮತಿ ಕೊಟ್ಟವರು ಯಾರು ನಾವು ಯಾವುದೆ ಕಾರಣಕ್ಕೂ ಇಟ್ಟಿಗೆ ಕಾರ್ಖಾನೆಗೆ ಮಣ್ಣು ತುಂಬಲು ಬಿಡುವುದಿಲ್ಲ ಎಂದರು,ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯ ತಿಳಿಗೊಳಿಸಿ ಠಾಣೆಗೆ ಬಂದು ದೂರು ನೀಡುವಂತೆ ತಿಳಿಸಿದರು ಈ ವೇಳೆ ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಮಹಾರಾಷ್ಟ್ರ ಶಿವಣ್ಣ,ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ಗುಜ್ಜೆನಹಳ್ಳಿ ಕುಮಾರ್,ಬ್ರಹ್ಮಕುಮಾರ್, ಲೋಕೇಶ್, ರವಿಕುಮಾರ್,ಗಂಗಯ್ಯ, ಮಂಜು,ಸುರೇಶ್,ಸೆರಿದಂತೆ ನೂರಾರು ಮಂದಿ ರೈತರು ಭಾಗಿಯಾಗಿದ್ದರು @publicnewskunigal