ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನಲ್ಲಿ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರು ಪ್ರತ್ರಕರ್ತರ ಬಗ್ಗೆ ವಾರ್ತಾ ಇಲಾಖೆಯಿಂದ ನೀಡಿರುವ ಮಾಹಿತಿ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಹಿನ್ನೆಲೆ ವಾರ್ತಾ ಇಲಾಖೆಯ ಅಧಿಕಾರಿಗಳನ್ನು ಬೇಟಿಯಾದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು!
ಕೆಲವು ದಿನಗಳ ಹಿಂದೆ ಕುಣಿಗಲ್ ತಾಲ್ಲೂಕು ಕಾರ್ಯನಿರತ ಪತ್ರಕರ್ತರಲ್ಲಿ ಗೊಂದಲಕ್ಕೆ ಕಾರಣವಾಗಿದ್ದ ವಾರ್ತಾ ಇಲಾಖೆಯ ಅಧಿಕಾರಿಗಳ ಪ್ರತ್ರದ ಬಗ್ಗೆ ಜಿಲ್ಲಾ ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕರಾದ ಹಿಮಂತರಾಜು ರವರನ್ನು ಸೋಮವಾರ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಯೋಗೇಶ್ ನೇತೃತ್ವದ ಪದಾಧಿಕಾರಿಗಳ ತಂಡ ಬೇಟಿ ಮಾಡಿ ಅಧಿಕಾರಿಯೊಂದಿಗೆ ಚರ್ಚಿಸಿ ವಾರ್ತಾ ಇಲಾಖೆ ಮಾನ್ಯತಾ ಕಾರ್ಡ್ ಹೊಂದಿಲ್ಲದ ಕಾರಣದಿಂದ ಕಾರ್ಯನಿರತ ಪತ್ರಕರ್ತರನ್ನು ಮಾನ್ಯತೆ ಇಲ್ಲದ ಪತ್ರಕರ್ತರು ಎಂದು ಪರಿಗಣಿಸಿದ್ದು ಸಮಂಜಸವಲ್ಲ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ, ಕುಣಿಗಲ್ ತಾಲ್ಲೂಕಿನಲ್ಲಿ ರಾಜ್ಯ,ಪ್ರಾದೇಶಿಕ ಹಾಗೂ ಸ್ಥಳಿಯ
ಪತ್ರಿಕೆಗಳಲ್ಲಿ ವರದಿಗಾರರಾಗಿ 22 ಮಂದಿ ಪತ್ರಕರ್ತರು ಅಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಆದರೆ ಪತ್ರಕರ್ತರ ಬಗ್ಗೆ ಯಾವುದೆ ಪತ್ರಕರ್ತರು ನಮ್ಮಲ್ಲಿ ಮಾನ್ಯತೆ ಹೊಂದಿಲ್ಲ ಎಂಬ ಮಾಹಿತಿಯನ್ನು ಕುಣಿಗಲ್ ಠಾಣೆಯ ಸಿಪಿಐ ರವರಿಗೆ ನೀಡಿರುವ ಕಾರಣ ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಗಳಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು ಜೋತೆಗೆ ಪತ್ರಕರ್ತರ ಗೌರವಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಲಾಗಿತ್ತು ಈ ಹಿನ್ನೆಲೆಯಲ್ಲಿ ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಕುಣಿಗಲ್ ತಾಲ್ಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪತ್ರಕರ್ತರ ಮಾಹಿತಿ ಜೋತೆಗೆ KUWJ ಸದಸ್ಯತ್ವ ಹೊಂದಿರುವ ಕುಣಿಗಲ್ ತಾಲೂಕು ಸದಸ್ಯರ ಪಟ್ಟಿ ನೀಡುವುದರ ಜೋತೆಗೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ವಾರ್ತಾ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಈ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಎಲ್. ಯೋಗೇಶ್,ಖಜಾಂಚಿ ಸತೀಶ್ ಹಾರೋಗೆರೆ, ಕಾರ್ಯದರ್ಶಿ ಯಶಸ್ ಕೆ.ಪದ್ಮನಾಭ, ನಿರ್ದೇಶಕರಾದ ಜಗನ್ನಾಥ್ ಕಾಳೇನಹಳ್ಳಿ, ಮಾರುತಿ ಗಂಗಹನುಮಯ್ಯ, ಸುಪ್ರತಿಕ್, ವಿಜಯ್ ಉಪಸ್ಥಿತರಿದ್ದರು @publicnewskunigal