ಸದ್ಯದಲ್ಲೆ ಕುಣಿಗಲ್ ಗೆ BMTC ಬಸ್ ಸಂಚಾರ ಪ್ರಾರಂಭವಾಗಲಿದೆ ಎಂದು ಮಾಜಿ ಸಂಸದ ಹಾಗೂ ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ತಿಳಿಸಿದ್ದಾರೆ!
ಕುಣಿಗಲ್ ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಮೈದಾನದಲ್ಲಿ ಡಿ.ಕೆ.ಎಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೂರು ದಿನಗಳ ಕುಣಿಗಲ್ ಉತ್ಸವದಲ್ಲಿ ನಡೆದ ಮನರಂಜನೆ ಕಾರ್ಯಕ್ರಮದಲ್ಲಿ ಭಾನುವಾರ ಭಾಗಿಯಾಗಿ ಮಾತನಾಡಿದ ಮಾಜಿ ಸಂಸದ ಡಿ.ಕೆ ಸುರೇಶ್ ನಾನು ಯಾರು ನೆನಪಿದ್ದಿನಾ ಎನ್ನುತ್ತಲೆ ಮಾತು ಪ್ರಾರಂಭಿಸಿದ ಅವರು ನೀವು ನನಗೆ ವಿಶ್ರಾಂತಿ ಕೋಟ್ಟಿರಬಹುದು ಆದರೆ ನಾನು ನಿಮಗೆ ಕೊಟ್ಟ ಮಾತಿಗೆ ಎಂದಿಗೂ ವಿಶ್ರಾಂತಿ ಇಲ್ಲ ನಿಮ್ಮ ಜೋತೆಗೆ ನಿಮ್ಮ ಮನೆಯ ಮಗನಾಗಿ ಈ ತಾಲ್ಲೂಕಿನ ಖುಣವನ್ನು ತೀರಿಸುವ ಕೆಲಸವನ್ನು ಶಾಸಕರ ಜೋತೆಗೆ ಸೇರಿ ಮಾಡುತ್ತೆನೆ,ಯುವಕರನ್ನು ಬೇಳೆಸಬೇಕು ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉನ್ನತ ಮಟ್ಟದ ವೇದಿಕೆ ಕಲ್ಪಿಸಬೇಕು ಅವರನ್ನು ಬೆಳೆಸುವ ಕೆಲಸ ಮಾಡಬೇಕು ಆದ್ದರಿಂದ ಈ ಕುಣಿಗಲ್ ಉತ್ಸವವನ್ನು ಆಯೋಜಿಸಿ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಸದ್ಯ ಮನೆಯಲ್ಲಿದ್ದ ನನ್ನನ್ನ ಬಮೂಲ್ ಅಧ್ಯಕ್ಷನ್ನ ಮಾಡಿದ್ದಿರಿ ಆದರೆ ನಿಮ್ಮ ಸೇವೆಯನ್ನು ನಾನು ಮರೆತಿಲ್ಲ ತಾಲ್ಲೂಕಿನ ಅಭಿವೃದ್ದಿಯ ವಿಷಯವಾಗಿ ಶಾಸಕರಿಂದ ಮಾಹಿತಿ ಪಡೆದು ಕೊಂಡಿದ್ದೆನೆ ಈ ಕುಣಿಗಲ್ ತಾಲ್ಲೂಕನ್ನು ಅಭಿವೃದ್ದಿಯ ಪತದಲ್ಲಿ ಕೊಂಡೊಯ್ಯುವ ಕೆಲಸವನ್ನು ಶಾಸಕರ ಒಡಗೂಡಿ ಮಾಡ್ತೇನೆ,
ಕಳೆದ ಹನ್ನೆರಡು ವರ್ಷಗಳಿಂದ ಎರಡು ವರ್ಷಗಳಿಗೊಮ್ಮೆ ಕನಕಪುರದಲ್ಲಿ ಕನಕೋತ್ಸವ ಕಾರ್ಯಕ್ರಮ ಮಾಡುತ್ತ ಬಂದಿದ್ದೆವೆ ಕುಣಿಗಲ್ ನಲ್ಲಿ ಇದು ಮೊದಲ ಕಾರ್ಯಕ್ರಮ ಒಂದು ವರ್ಷ ಕಾರ್ಯಕ್ರಮ ಮಾಡಿ ನಿಲ್ಲಿಸಭಾರದು ತಾಲ್ಲೂಕಿನ ಪ್ರತಿಭೆಗಳನ್ನು ಸದ ಗುರುತಿಸುವ ಕೆಲಸ ಮಾಡಬೇಕು ಹಾಗಾಗಿ 2027/28ಕ್ಕೆ ಮತ್ತೆ ಅದ್ದೂರಿಯಿಂದ ಕುಣಿಗಲ್ ಉತ್ಸವವನ್ನು ನಾವು ನೀವು ಎಲ್ಲರು ಸೇರಿ ಮಾಡೋಣ ತಿರುಪತಿಯಿಂದ ಉತ್ಸವ ಮೂರ್ತಿಯನ್ನು ತಂದು ತಾಲ್ಲೂಕಿಗೆ ಒಳ್ಳೆಯದಾಗಲಿ ಎಂದು ಶಾಸಕರು ಕಲ್ಯಾಣೋತ್ಸವ ಮಾಡಿದ್ದಾರೆ ಮನೆ ಮನೆಗೆ ಲಡ್ಡು ವಿತರಿಸಲು 70 ಸಾವಿರ ಲಡ್ಡು ತರಿಸಿದ್ದಾರೆ ಎಲ್ಲರಿಗೂ ತಿರುಪತಿ ವೆಂಕಟೇಶ್ವರನ ಪ್ರಸಾದ ತಲುಪಲಿದೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರೆ ಆದರೆ ಶಾಸಕರು ಏನು ಕೇಳಿಲ್ಲ ಆದರೆ ನಾನು ಈ ತಾಲ್ಲೂಕಿನ ಅಭಿವೃದ್ದಿಯನ್ನು ಚಿಂತನೆಯಲ್ಲಿಟ್ಟುಕೊಂಡು ಕುಣಿಗಲ್ ಗೆ ಬಿ.ಎಂ.ಟಿ.ಸಿ ಸಂಚಾರ ಪ್ರಾರಂಭಿಸಲು ಮನವಿ ಮಾಡಿದ್ದೆ ಸದ್ಯದಲ್ಲೆ ಕುಣಿಗಲ್ ಗೆ ಬಿ.ಎಂ.ಟಿ.ಸಿ ಸಂಚಾರ ಪ್ರಾರಂಭವಾಗಲಿದೆ ಎಂದರು,ಕಾರ್ಯಕ್ರಮದಲ್ಲಿ ಶಾಸಕ ಡಾ.ರಂಗನಾಥ್,ಮದ್ದೂರು ಶಾಸಕ ಕೆ.ಉದಯ್,ಮಾಜಿ ಶಾಸಕ ರಾಮಸ್ವಾಮಿಗೌಡ,ಮಾಜಿ ಸಂಸದ ಶಿವರಾಮೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು @publicnewskunigal