ಶ್ರೀ ಓಡೆ ಭೈರವೇಶ್ವರ ಸ್ವಾಮಿಯ ಭಂಗಿ ಸೇವೆಗೆ ಸಾಕ್ಷಿಯಾದ ಸಹಸ್ರಾರು ಮಂದಿ ಭಕ್ತ ಸಮೂಹ ಸಾಮೂಹಿಕ ಮಧ್ಯರ್ಜನೆಯಲ್ಲಿ ಮಹಿಳೆಯರು ಭಾಗಿ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹೊನ್ನಮಾಚನಹಳ್ಳಿ ಗ್ರಾಮದ ಶ್ರೀ ಓಡೆ ಭೈರವೇಶ್ವರ ಸ್ವಾಮಿ ಜಾತ್ರಮಹೊತ್ಸವದ ಪ್ರಯುಕ್ತ ಶನಿವಾರ ದೇವರಿಗೆ ಭಂಗಿ ಸೇವೆ ನೆರವೇರಿಸಿದ ಭಕ್ತರು,ತಮ್ಮ ಇಷ್ಟಾರ್ಥಗಳಿಗಾಗಿ ದೇವರಿಗೆ ಪ್ರಾರ್ಥಿಸಿ ಹರಕೆಯ ರೂಪದಲ್ಲಿ ಮಂಸದೂಟ ಮತ್ತು ಮದ್ಯ ಸಮರ್ಪಿಸುವುದು ಇಲ್ಲಿನ ವಾಡಿಕೆಯಾಗಿದ್ದು, ಪ್ರತಿವರ್ಷ ಹೇಮಗಿರಿ ವರದರಾಜ ಸ್ವಾಮಿ ಜಾತ್ರೆ ಬಳಿಕ ಇಲ್ಲಿ ಜಾತ್ರೆ ನಡೆಯುತ್ತದೆ ಇಲ್ಲಿಗೆ ಬರುವ ಭಕ್ತರಿಗೆ ಸಾಮೂಹಿಕ ಮಧ್ಯರ್ಜನೆ ಹಾಗೂ ಬಾಡೂಟ ವ್ಯವಸ್ಥೆ ಆಯೋಜಿಸಲಾಗುತ್ತದೆ ಶ್ರೀ ಓಡೆ ಭೈರವೇಶ್ವರ ಸ್ವಾಮಿಗೆ ಭಕ್ತರು ಹರಕೆಯ ರೂಪದಲ್ಲಿ ನೀಡುವ ಮಧ್ಯವನ್ನು ಒಂದೆಡೆ ಸೇರಿಸಿ ದೇವರಿಗೆ ನೈವೇದ್ಯ ಮಾಡಿದ ಬಳಿಕ ಜಾತ್ರೆಗೆ ಬಂದಿರುವ ಭಕ್ತರಿಗೆ ಹಂಚಲಾಗುತ್ತದೆ, ಮಹಿಳೆಯರು ಸೇರಿದಂತೆ ಎಲ್ಲ ಭಕ್ತರು ಸರದಿ ಸಾಲಿನಲ್ಲಿ ಸಮಾನವಾಗಿ ಕುಳಿತು ಮಧ್ಯ ಹಾಗೂ ಮಂಸದಿಂದ ಮಾಡಿರುವ ಆಹಾರವನ್ನು ಸೆವಿಸುವುದು ಇಲ್ಲಿ ನೂರಾರು ವರ್ಷಗಳಿಂದ ನಡೆದು ಬಂದಿರುವ ಈ ಸಂಪ್ರದಾಯವಾಗಿದೆ ಇಲ್ಲಿ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ಮದ್ಯ ನೈವೇದ್ಯ ಹಾಗೂ ದಿನಸಿ ಪದಾರ್ಥ ಕುರಿ.ಮೇಕೆಗಳನ್ನು ಅರಕೆಯ ರೂಪದಲ್ಲಿ ಸಮರ್ಪಿಸುತ್ತಾರೆ, ಈ ಭಾರಿ ನಿರೀಕ್ಷೆಗೂ ಮೀರಿದ ಜನರು ಜಾತ್ರೆಯಲ್ಲಿ ಸೇರಿದ ಕಾರಣ ಸರಿಯಾದ ವ್ಯವಸ್ಥೆ ಇಲ್ಲದೆ ಉಟ ಬಡಿಸುವ ವೇಳೆ ನೂಕು ನುಗ್ಗಲು ಉಂಟಾಗಿತ್ತು,ತಾಲ್ಲೂಕು ಆಡಳಿತ ಇಂತಹ ಆಚರಣೆಗಳಿಗೆ ಮನ್ನಣೆ ಕೊಡುವುದರ ಜೋತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂಬುದು ಇಲ್ಲಿಗೆ ಬರುವ ಭಕ್ತರ ಆಗ್ರಹವಾಗಿದೆ@publicnewskunigal