ಪಾರ್ಟಿ ನೆಪದಲ್ಲಿ ಕರೆಸಿ ಕಂಠಪೂರ್ತಿ ಕುಡಿಸಿ ರೌಡಿಶೀಟರ್ ನಾಗರಾಜು (ಆಟೋ ನಾಗನ) ಬರ್ಬರವಾಗಿ ಹತ್ಯೆ ಮಾಡಲಾಗಿದೆ!
ಬೆಂಗಳೂರು ಉತ್ತರ ತಾಲೂಕಿನ ನಗರೂರು ಬಳಿ ಇರುವ ಬಾಲಾಜಿ ಸರೊವರ್ ಫಾರ್ಮ್ ಹೌಸ್ ನಲ್ಲಿ ಸ್ನೇಹಿತರ ನಡುವೆ ಜಗಳವಾಗಿ ರೌಡಿ ಶೀಟರ್ ಒಬ್ಬನನ್ನು ಚಾಕುವಿನಿಂದ ಹಿರಿದು ಬರ್ಬರವಾಗಿ ಹತ್ಯೆ ಮಾಡಲಾಗಿದೆ, ಬೆಂಗಳೂರಿನ ಗಂಗೋಂಡನಹಳ್ಳಿ ನಿವಾಸಿ ನಾಗರಾಜು ಅಲಿಯಾಸ್ (ಆಟೋನಾಗ)(32) ಮೃತ. ಮೂಲತಃ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಕಂಪಲಾಪುರ ಗ್ರಾಮದ ನಿವಾಸಿಯಾಗಿದ್ದ ನಾಗರಾಜು, ಏಳೆಂಟು ವರ್ಷಗಳಿಂದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಹಾಗೂ ಬಡ್ಡಿ ದಂದೆಯಲ್ಲಿ ತೊಡಗಿದ್ದ, ಭಾನುವಾರ ಮಧ್ಯಾಹ್ನ 2 ಗಂಟೆ ಸಮಯದಲ್ಲಿ ನಾಲೈದು ಮಂದಿ ಸ್ನೇಹಿತರೊಂದಿಗೆ ಸೇರಿ ಬಾಲಾಜಿ ಫಾರ್ಮ್ ಹೌಸ್‌ನಲ್ಲಿ ಪಾರ್ಟಿ ಮಾಡಿದ್ದು,ಕಂಠಪೂರ್ತಿ ಮಧ್ಯ ಸೇವನೆ ಮಾಡಿದ್ದಾರೆ ಈ ವೇಳೆ ಸ್ನೇಹಿತರ ನಡುವೆ ಹಣಕಾಸಿನ ವಿಷಯವಾಗಿ ಗಲಾಟೆ ನಡೆದಿದ್ದು, ಜತೆಯಲ್ಲಿದ್ದ ನಾಲೈದು ಮಂದಿ ಆಟೋನಾಗನ ಹೊಟ್ಟೆ, ಎದೆ ಭಾಗಕ್ಕೆ ಚಾಕುವಿನಿಂದ ಹಿರಿದು ಸ್ಥಳದಿಂದ ಪರಾರಿಯಾಗಿದ್ದಾರೆ. ತೀವ್ರರಕ್ತಸ್ರಾವದಿಂದ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,ರೌಡಿಶೀಟರ್ ಆಟೋನಾಗ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ,ಸೇರಿದಂತೆ ಬೆಂಗಳೂರಿನ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ, ಕೊಲೆ, ದರೋಡೆ ಸೇರಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ, ಸಾಕಷ್ಟು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದ ಎನ್ನಲಾಗಿದೆ @publicnewskunigal