ಕಾರು ಬಿಡುಗಡೆ ಮಾಡಲು ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಆರೋಪ ಲೋಕಾಯುಕ್ತ ಬಲೆಗೆ ಬಿದ್ದ ತುಮಕೂರು ಗ್ರಾಮಾಂತರ ಠಾಣೆಯ ಪಿ,ಎಸ್,ಐ!
ತುಮಕೂರು;-ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಚೇತನ್ ಕುಮಾರ್ ಲೋಕಾಯುಕ್ತ ಬಲೆಗೆ, ನಾಗೇಶ್ ಎಂಬುವರಿಗೆ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿ.ಎಸ್.ಐ ಚೇತನ್ ಕುಮಾರ್, ಕೆಸರುಮಡು ಗ್ರಾಮದ ಬಳಿ ದೂರುದಾರ ನಾಗೇಶ್ ಕಳೆದ ಮೂರು ದಿನಗಳ ಹಿಂದೆ ತಮ್ಮ ಕಾರು ಬಿಟ್ಟು ಹೋಗಿದ್ದರು ಕಳೆದ ಮೂರು ದಿನಗಳಿಂದ ಅನುಮಾನಸ್ಪದವಾಗಿ ಒಂದೆಕಡೆಯಲ್ಲಿ ನಿಂತಿದ್ದ ಕಾರನ್ನು ಪಿ.ಎಸ್.ಐ ಚೇತನ್ ಕುಮಾರ್ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದರು,ಬಳಿಕ ಕಾರಿನ ಮಾಲಿಕ ನಾಗೇಶ್ ಠಾಣೆಗೆ ಬಂದು ಕಾರು ಬಿಡುಗಡೆ ಮಾಡುವಂತೆ ಕೇಳಿದಾಗ ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯ ಪಿ.ಎಸ್.ಐ ಚೇತನ್ ಕುಮಾರ್ ಒಂದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹಣ ಕೊಡದೆ ಇದ್ದರೆ ಗಾಂಜಾ ಕೇಸ್ ಬುಕ್ ಮಾಡುವುದಾಗಿ ನಾಗೇಶ್ ಗೆ ಬೆದರಿಕೆ ಹಾಕಿದ್ದ ಪಿ.ಎಸ್.ಐ ಚೇತನ್ ಕುಮಾರ್ ಬಳಿಕ ಲೋಕಾಯುಕ್ತ ಅಧಿಕಾರಿಗಳಿಗೆ ನಾಗೇಶ್ ದೂರು ನೀಡಿದ್ದರು ದೂರು ದಾಖಲಿಕೊಂಡ ಲೋಕಾಯುಕ್ತ ಅಧಿಕಾರಿಗಳು ಹಣ ಕೊಡುವ ಸೋಗಿನಲ್ಲಿ ಕಾರ್ಯಾಚರಣೆ ನಡೆಸಿ ಪಿ.ಎಸ್.ಐ ಚೇತನ್ ಕುಮಾರ್ ನನ್ನು ಶನಿವಾರ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ,ಬೆಂಗಳೂರು ಬಳಿಕ ತುಮಕೂರಿನಲ್ಲಿ ಪೊಲೀಸರ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವುದು ಲೊಲೀಸ್ ಇಲಾಖೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ಅಧಿಕಾರಿಗಳಿಗಳು ಭ್ರಷ್ಟಾಚಾರ ಆರೋಪದಲ್ಲಿ ಜೈಲುಪಾಲಾಗುತ್ತಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ@publicnewskunigal