ವೃದ್ದೆಯ ಸರ ಕದ್ದು ಪರಾರಿಯಾಗಿದ್ದ ಆರೋಪಿಗಳ ಬಂಧನ ಆರೋಪಿಗಳನ್ನು ಪೊಲೀಸರು ಪತ್ತೆ ಮಾಡಿದ್ದೆ ರೋಚಕ!
ಕುಣಿಗಲ್ ತಾಲ್ಲೂಕಿನ ಅಮೃತೂರು ವ್ಯಾಪ್ತಿಯ ಯಾಚನಹಳ್ಳಿ ಗ್ರಾಮದಲ್ಲಿ ಹಾಡ ಹಗಲಿನಲ್ಲೆ ಅಮೃತೂರು ಮಾರ್ಕೋನಹಳ್ಳಿ ರಸ್ತೆಯಲ್ಲಿ ಯಾಚನಹಳ್ಳಿ ಗ್ರಾಮದ ಮೇಣಸಮ್ಮ ಎಂಬ ವೃದ್ದೆ ಆಸ್ಪತ್ರೆಗೆ ತೆರಳಲು ಗ್ರಾಮದಿಂದ ನಡೆದುಕೊಂಡು ಹೊಗುತ್ತಿದ್ದ ವೇಳೆ ಅದೆ ರಸ್ತೆಯಲ್ಲಿ ಹೊಗುತ್ತಿದ್ದ ಮಹಿಳೆಯೊರ್ವರು ತಮ್ಮ ದ್ವಿಚಕ್ರ ವಾಹನದಲ್ಲಿ ವೃದ್ದೆಯನ್ನು ಕರೆದುಕೊಂಡು ಹೊಗಲು ಬೈಕ್ ನಿಲ್ಲಿಸಿದ್ದಾರೆ ವೃದ್ದೆ ಬೈಕ್ ನಲ್ಲಿ ಕೂರುತ್ತಿದ್ದಂತೆ ಹಿಂಬಾಲಿಸಿ ಬಂದ ಆರೋಪಿಗಳು ವೃದ್ದೆಯ ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತು ಪರಾರಿಯಾದ್ದರು ತಕ್ಷಣ ಕೆಲವರು ಸರಗಳ್ಳರನ್ನು ಹಿಂಬಾಲಿಸಿದ್ದರು ಅವರು ಪತ್ತೆಯಾಗಿರಲಿಲ್ಲ ಬಳಿಕ ಸ್ಥಳಿಯರ ಮಾಹಿತಿ ಹಿನ್ನೆಲೆ ಸ್ಥಳಕ್ಕೆ ಅಮೃತೂರು ಪಿಎಸ್ಐ ಶಮಂತ್‌ಗೌಡ ಬೇಟಿ ನೀಡಿ ಪರಿಶೀಲನೆ ನಡೆಸಿ ವೃದ್ದೆಯ ದೂರು ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ವೃತ್ತ ನಿರೀಕ್ಷಕ ನವೀನ್‌ಗೌಡ ಮಾರ್ಗದರ್ಶನದಲ್ಲಿ ಪಿಎಸ್ಐ ಶಮಂತ್‌ಗೌಡ ನೆತೃತ್ವದ ಪೊಲೀಸರ ತಂಡ ಸುಮಾರು 72 ಕಿಲೋಮಿಟರ್ ವ್ಯಾಪ್ತಿಯಲ್ಲಿ 350 ಕ್ಕೂ ಹೆಚ್ಚು ಸಿ.ಸಿ ಕ್ಯಾಮರಗಳನ್ನು ಪರಿಶೀಲಿಸಿ ಕೊನೆಗೂ ಸರಗಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಬೆಂಗಳೂರು ದಕ್ಷಿಣ ಜಿಲ್ಲೆಯ ಚನ್ನಪಟ್ಟಣ ಮೂಲದ ಸಲ್ಮಾನ್ ಖಾನ್ (32) ಸಲೀಮ್ (27) ಬಂದಿತ ಆರೋಪಿಗಳು ಬಂಧಿತರಿಂದ ಸುಮಾರು ನಾಲ್ಕು ಗ್ರಾಂ ಚಿನ್ನದ ಮಾಂಗಲ್ಯ ಕೃತ್ಯಕ್ಕೆ ಬಳಸಿದ್ದ ಒಂದು ದ್ವಚಕ್ರ ವಾಹನ ವಶಕ್ಕೆ ಪಡೆದು ಆರೋಪಿಗಳ್ನು ಜೈಲಿಗೆ ಕಳುಹಿಸಿದ್ದಾರೆ,ಫ್ರೆಬ್ರವರಿ 8 ರ ಭಾನುವಾರದಂದು ಘಟನೆ ನಡೆದಿತ್ತು ಇದಾದ ಬಳಿಕ ದೂರಿನಲ್ಲಿ ನಲವತ್ತು ಗ್ರಾಂ ಚಿನ್ನದ ಮಾಂಗಲ್ಯ ಸರ ಕಳುವಾಗಿದೆ ಎಂದು ನಮೂದಿಸಲಾಗಿತ್ತು ಆದರೆ ಅಸಲಿಗೆ ಮಾಂಗಲ್ಯ ಹೊರತಾಗಿ ಸರ ನಕಲಿ ಎಂದು ತಿಳಿದು ಬಂದಿದೆ ನಕಲಿ ಚಿನ್ನದ ಸರದಲ್ಲಿ ನಾಲ್ಕು ಗ್ರಾಂ ಚಿನ್ನದ ಮಾಂಗಲ್ಯ ಮಾತ್ರ ಕಳ್ಳರ ಪಾಲಾಗಿತ್ತು ಇಬ್ಬರು ಆರೋಪಿಗಳ ಪೈಕಿ ಒರ್ವ ಪ್ರಕರಣ ಒಂದರಲ್ಲಿ ಮೊದಲೆ ಜೆಲಿಗೆ ಹೊಗಿ ಬಂದಿದ್ದಾನೆ ಎಂದು ತಿಳಿದು ಬಂದಿದೆ ಕಾರ್ಯಚರಣೆಯಲ್ಲಿ ಅಮೃತೂರು ಠಾಣೆಯ ಸಿಬ್ಬಂದಿಗಳಾದ ನಾರಾಯಣಸ್ವಾಮಿ, ರಾಮಕೃಷ್ಣ,ಮಂಜುನಾಥ್, ರೇಣುಕಪ್ರಸಾದ್,ಹಾಗೂ ಪ್ರಶಾಂತ್, ಭಾಗಿಯಾಗಿದ್ದು ಪ್ರಕರಣವನ್ನು ಕೆವಲ ನಾಲ್ಕೆ ದಿನದಲ್ಲಿ ಪತ್ತೆ ಹಚ್ಚಿದ ಪೊಲೀಸರಿಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ @publicnewskunigal