ನವಜಾತ ಶಿಶುವನ್ನು ಬಟ್ಟೆಯಲ್ಲೆ ಸುತ್ತಿ ಬ್ಯಾಗಿನಲ್ಲಿ ಇಟ್ಟು ರಸ್ತೆ ಬದಿಯಲ್ಲಿ ಎಸೆದು ಹೊಗಿರುವ ಘಟನೆ ನಡೆದಿದೆ ಸ್ಥಳಿಯರ ಸಮಯ ಪ್ರಜ್ಞೆಯ ಕಾರಣದಿಂದ ಸದ್ಯ ಮಗು ಜಿಲ್ಲಾ ಆಸ್ಪತ್ರೆಯ ಆರೈಕೆ ಕೇಂದ್ರ ಸೇರಿದೆ!
ಕುಣಿಗಲ್ ತಾಲ್ಲೂಕಿನ ಯಡಿಯೂರು ದೇವಾಲಯದ ಸಮೀಪ ದಾಸೋಹ ಭವನದ ರಸ್ತೆ ಬದಿಯಲ್ಲಿ ಭಾನುವಾರ ಸಂಜೆ ಬ್ಯಾಗ್ ಒಂದರಲ್ಲಿ ಮಗು ಅಳುತ್ತಿರುವ ಶಬ್ದ ಕೇಳಿಬಂದಿದೆ ಕೂಡಲೆ ಸ್ಥಳಿಯರು ಬ್ಯಾಗ್ ತೆರದು ನೋಡಿದಾಗ ಅದರಲ್ಲಿ ನವಜಾತ ಶಿಶು ಇರುವುದು ಪತ್ತೆಯಾಗಿದೆ ತಕ್ಷಣ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಸ್ಥಳಕ್ಕೆ ಬಂದ ಅಮೃತೂರು ಪೊಲೀಸರು ಮಗುವನ್ನು ವಶಕ್ಕೆ ಪಡೆದು ಯಡಿಯೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ ಮಗು ಆರೋಗ್ಯವಾಗಿರುವುದನ್ನು ಖಾತರಿ ಪಡಿಸಿಕೊಂಡ ಪೊಲೀಸರು ಬಳಿಕ ಮಗುವನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯುದಿದ್ದಾರೆ ಈ ವೇಳೆ ಮಗುವನ್ನು ಪರಿಕ್ಷಿಸಿದ ತಾಲ್ಲೂಕು ಆಸ್ಪತ್ರೆಯ ವೈದ್ಯರು ಇತ್ತಿಚೇಗೆ ಜನಿಸಿರುವ ನವಜಾತ ಗಂಡು ಶಿಶು ನಾಲ್ಕೈದು ದಿನ ಕಳೆದಿರಬಹುದು ಎಂದು ಅಂದಾಜಿಸಿದ್ದಾರೆ ಸದ್ಯ ಮಗು ತುಮಕೂರು ಜಿಲ್ಲಾ ಆಸ್ಪತ್ರೆಯ ಸಖಿ ಕೇಂದ್ರದಲ್ಲಿ ವೈದ್ಯರ ಹಾಗೂ ದಾದಿಯರ ಆರೈಕೆಯಲ್ಲಿದೆ ಯಾವ ಕಾರಣಕ್ಕೆ ಪೋಷಕರು ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಎಸೆದು ಹೊಗಿದ್ದಾರೆ ಎಂಬುದು ತಿಳಿದುಬಂದಿಲ್ಲ ಹೆತ್ತವರನ್ನು ಹೊರತುಪಡಿಸಿ ಬೇರೆ ಯಾರಾದರು ಮಗುವನ್ನು ದೇವಾಲಯದ ಸಮೀಪ ಬಟ್ಟೆಯಲ್ಲಿ ಸುತ್ತಿ ಬ್ಯಾಗಿನಲ್ಲಿ ಎಸೆದು ಹೊಗಿದ್ದಾರ ಎಂಬುದು ಪೊಲೀಸರ ತನಿಖೆಯಿಂದಷ್ಟೆ ಸತ್ಯ ಹೊರಬರಬೇಕಿದೆ @publicnewskunigal