ಪಟ್ಟಣದ ಚಿಕ್ಕ ಕೆರೆಯ ಮೆಲುಸೇತುವೆ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ ಒರ್ವ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ!
ಕುಣಿಗಲ್ ಪಟ್ಟಣದ ರಾಜ್ಯ ಹೆದ್ದಾರಿ 33ರ ಚಿಕ್ಕ ಕೆರೆಯ ಮೆಲುಸೇತುವೆ ಬಳಿ ಬುಧವಾರ ಬೆಳಗ್ಗೆ ಕುಣಿಗಲ್ ಕಡೆಗೆ ಹೊಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಸಿಮೆಂಟ್ ಮಿಕ್ಸರ್ ಲಾರಿ ಡಿಕ್ಕಿಯಾದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಮಹಿಳೆಯ ತಲೆಯ ಮೇಲೆ ಲಾರಿ ಹರಿದ ಪರಿಣಾಮ ತೀವ್ರ ರಕ್ತ ಸ್ರಾವದಿಂದಾಗಿ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ ತಾಲ್ಲೂಕಿನ ಹೇರೂರು ಗ್ರಾಮದ ರಾಜಣ್ಣನವರ ಪತ್ನಿ ರತ್ನಮ್ಮ (55) ಅಪಘಾತದಲ್ಲಿ ಮೃತಪಟ್ಟ ಮಹಿಳೆ, ಹೇರೂರು ಗ್ರಾಮದಿಂದ ಕುಣಿಗಲ್ ಪಟ್ಟಣದಲ್ಲಿ ಸಂತೆಗೆಂದು ತಮ್ಮ ಹೋಂಡಾ ಆಕ್ಟಿವಾ ಬೈಕ್ ನಲ್ಲಿ ದಂಪತಿಗಳಿಬ್ಬರು ಹೊಗುತ್ತಿರುವಾಗ ಚಿಕ್ಕಕೆರೆಯ ರೈಲ್ವೆ ಬ್ರಿಡ್ಜ್ ಮೇಲೆ ಹಿಂಬದಿಯಿಂದ ಸಿಮೆಂಟ್ ಮಿಕ್ಸ್ ಮಾಡುವ ಲಾರಿ ದ್ವಿಚಕ್ರ ವಾಹನದ ಹಿಂಬದಿಗೆ ಗುದ್ದಿದ ಕಾರಣ ಬೈಕ್ ನಲ್ಲಿ ಹಿಂಬದಿ ಕುಳಿತಿದ್ದ ರತ್ನಮ್ಮ ರಸ್ತೆಗೆ ಬಿದ್ದಿದ್ದಾರೆ ಲಾರಿಯ ಹಿಂಬದಿಯ ಚಕ್ರ ತಲೆಯ ಮೇಲೆ ಹರಿದು ಪರಿಣಾಮ ಅವಘಡ ಸಂಭವಿಸಿದೆ ಪತಿಯ ಎದುರಲ್ಲೆ ಪತ್ನಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ ಚಾಲಕನ ಅಜಾಗರುಕತೆಯ ಕಾರಣದಿಂದ ಘಟನೆ ಸಂಭವಿದ್ದು ಸ್ಥಳಕ್ಕೆ ಕುಣಿಗಲ್ ಠಾಣೆಯ ಪೊಲೀಸ್ ಭೇಟಿ ನೀಡಿ ಪರಿಶೀಲಿನ ನಡೆಸಿದ್ದು ಪ್ರಕರಣ ದಾಖಲಾಗಿದೆ @publicnewskunigal