ಕೆಬಲ್ ಕದ್ದು ಪರಾರಿಯಾಗುವ ವೇಳೆ ಬೈಕ್ ಕೈಕೊಟ್ಟ ಕಾರಣ ಕುಂಠಯ್ಯನಪಾಳ್ಯ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರು ಇಗ ಪೊಲೀಸರ ವಶಕ್ಕೆ!
ಕೆಬಲ್ ವೈಯರ್ ಕದ್ದು ಪರಾರಿಯಾಗುವ ವೇಳೆ ಬೈಕ್ ನಲ್ಲಿ ಪೆಟ್ರೋಲ್ ಖಾಲಿಯಾಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದ ಕಳ್ಳರಿಗೆ ಗ್ರಾಮಸ್ಥರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಕುಂಠಯ್ಯನಪಾಳ್ಯ ಗ್ರಾಮದಲ್ಲಿ ಮಂಗಳವಾರ ನಡೆದಿದೆ,ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲ್ಲೂಕಿನ ಬೆಳಗವಾಡಿ ಗ್ರಾಮದಲ್ಲಿ ರೈತರ ಕೊಳವೆ ಬಾವಿಗಳಿಂದ ಕೆಬಲ್ ಕಳ್ಳತನ ಮಾಡಿ ಅದನ್ನು ಬೈಕ್ ನಲ್ಲಿ ಹುಲಿಯೂರುದುರ್ಗ ಕಡೆಗೆ ತೆಗೆದುಕೊಂಡು ಹೋಗುವ ವೇಳೆ ಕುಂಠಯ್ಯನಪಾಳ್ಯ ಗ್ರಾಮದ ಬಳಿ ಬೈಕ್ ಪೆಟ್ರೋಲ್ ಖಾಲಿಯಾಗಿ ಬೈಕ್ ನಿಂತಿದೆ ಇದರಿಂದ ಗಾಬರಿಗೊಂಡ ಕಳ್ಳರಿಬ್ಬರು ಕೆಬಲ್ ವೈಯರ್ ಅನ್ನು ಅರಣ್ಯ ಪ್ರದೇಶದಲ್ಲಿ ಬಚ್ಚಿಡಲು ಮುಂದಾಗಿದ್ದ ವೇಳೆ ಸ್ಥಳಿಯರ ಕೈಗೆ ಸಿಕ್ಕಿಬಿದ್ದಿದ್ದಾರೆ ಸ್ಥಳಿಯರು ಪ್ರಶ್ನೆಮಾಡುತಿದ್ದಂತೆ ಗಾಬರಿಯಾದ ಕಳ್ಳರು ಸಬುಬು ಹೇಳಿ ಜಾರಿಕೊಳ್ಳಲು ಮುಂದಾಗಿದ್ದು ಮೊದಲೆ ಕುಣಿಗಲ್ ತಾಲ್ಲೂಕಿನ ಹಲವು ಕಡೆಗಳಲ್ಲಿ ಕೆಬಲ್ ಕಳ್ಳರ ಕಾಟಕ್ಕೆ ಬೆಸತ್ತಿದ್ದ ರೈತರು ಕಳ್ಳರಿಗೆ ಧರ್ಮದೇಟು ನೀಡುತಿದ್ದಂತೆ ಸತ್ಯ ಬಾಯಿ ಬಿಟ್ಟಿದ್ದಾರೆ ಮಾಗಡಿ ತಾಲ್ಲೂಕಿನ ಬೆಳಗವಾಡಿ ಗ್ರಾಮದಲ್ಲಿ ಕದ್ದು ತಂದಿರುವುದಾಗಿ ಹೇಳಿದ್ದು ಬಳಿಕ ಗ್ರಾಮಸ್ಥರು ಕಳ್ಳರನ್ನು ಹುಲಿಯೂರುದುರ್ಗ ಪೊಲೀಸರಿಗೆ ಒಪ್ಪಿಸಿದ್ದಾರೆ ಬೆಳಗವಾಡಿ ಗ್ರಾಮದ ತಿಮ್ಮೆಗೌಡ ಹಾಗೂ ಗಂಗಾ ಬಂಧಿತ ಆರೋಪಿಗಳು ಸಧ್ಯ ಪ್ರಕರಣವನ್ನು ಮಾಗಡಿ ಪೊಲೀಸ್ ಠಾಣೆಗೆ ವರ್ಗಾಹಿಸಲಾಗಿದೆ @publicnewskunigal