ವಿದ್ಯುತ್ ಇಲ್ಲದಿದ್ದರೆ ಕಾರ್ಯನಿರ್ವಹಿಸದ ಅಮೃತೂರು ಪೊಲೀಸ್ ಠಾಣೆ ಕಂಪ್ಯೂಟರ್ ಹಾಗೂ ಸಿ.ಸಿ.ಕ್ಯಾಮರ ಬಂದ್!
ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣಿಯಲ್ಲಿ ಯು.ಪಿ.ಎಸ್ ಕೆಟ್ಟು ಹೊಗಿ ವರ್ಷಗಳೆ ಕಳೆದರು ಇದುವರೆಗೂ ದುರಸ್ಥಿ ಮಾಡಿಲ್ಲ ಠಾಣೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಕಂಪ್ಯೂಟರ್ ಗಳು ಸೆರಿದಂತೆ ಸಿಸಿ ಕ್ಯಾಮರಗಳು ಸಹ ಕಾರ್ಯನಿರ್ವಹಿಸುವುದಿಲ್ಲ ಠಾಣೆಲ್ಲಿ ಕೆಟ್ಟಿರುವ ಯು.ಪಿ.ಎಸ್ ಸರಿಪಡಿಸುವಂತೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಪತ್ರ ಬರೆದು ವರ್ಷಗಳು ಕಳೆದರು ಸಹ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಇದಲ್ಲದೆ ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದರು ಸಹ ಠಾಣೆಯಲ್ಲಿ ಠಾಣಾಧಿಕಾರಿ ಇಲ್ಲ ಇಲ್ಲಿನ ಪಿ.ಎಸ್.ಐ ಶಮಂತ್‌ಗೌಡ ವರ್ಗವಣೆಯಾಗಿ ಹದಿನೈದು ದಿನ ಕಳೆದರು ಸಹ ಅಮೃತೂರು ಠಾಣೆಗೆ ವರ್ಗವಣೆಮೇಲೆ ಬರಬೇಕಿದ್ದ ಹೊಸ ಪಿಎಸ್ಐ ಎಸ್.ಜಿ ಶ್ರೀನಿವಾಸ್ ಪ್ರಸಾದ್ ಅಧಿಕಾರ ವಹಿಸಿಕೊಂಡಿಲ್ಲ ಠಾಣೆಯಲ್ಲಿರುವ ಅಧಿಕಾರಿಗಳು ಸಿಬ್ಬಂದಿಗಳನ್ನು ಇತರೆ ಕೆಲಸಕ್ಕೆ ನಿಯೋಜಿಸಿದರೆ ನ್ಯಾಯಕ್ಕಾಗಿ ಠಾಣೆಗೆ ಬರುವ ಸಾರ್ವಜನಿಕರಿಗೆ ಅಧಿಕಾರಿಗಳು ಸಕಾಲದಲ್ಲಿ ಸಿಗದಂತಾಗಿದೆ ಒಂದು ವೇಳೆ ಅಧಿಕಾರಿಗಳು ಇದ್ದುರು ಠಾಣೆಯಲ್ಲಿ ವಿದ್ಯುತ್ ಇಲ್ಲದಿದ್ದರೆ ಎಫ್.ಐ.ಆರ್ ದಾಖಲಿಸಲು ದಿನವೆಲ್ಲ ಕಾಯುವಂತಾಗಿದೆ ಮಂಗಳವಾರ ದೂರು ನೀಡಲು ಬಂದಿದ್ದ ಕೆಲ ಸಾರ್ವಜನಿಕರು ಗಂಟೆಗಟ್ಟಲೆ ಠಾಣೆಯಲ್ಲಿ ಕಾದು ಎಫ್.ಐ.ಆರ್ ದಾಖಲಿಸಲಾಗದೆ ವಾಪಸ್ ತೆರಳಿದ್ದಾರೆ ಇನ್ನು ಗೃಹ ಸಚಿವರ ತವರು ಜಿಲ್ಲೆಯ ಪೊಲೀಸ್ ಠಾಣೆಗಳ ಸ್ಥಿತಿ ಹೀಗಾದರೆ ರಾಜ್ಯದ ಇನ್ನುಳಿದ ಪೊಲೀಸ್ ಠಾಣೆಗಳ ಸ್ಥಿತಿ ಏನೆಂಬುದು ನಾಗರೀಕರ ಪ್ರಶ್ನೆಯಾಗಿದೆ ಇನ್ನಾದರು ಸಂಬಂದಪಟ್ಟ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಠಾಣೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಬೇಕಿದೆ @publicnewskunigal