ಜೀವ ಜಲಕ್ಕೆ ಹಾಹಾಜೀವ ಜಲಕ್ಕೆ ಆಹಾಕಾರ ಕುಡಿಯುವ ನೀರಿನ ಬವಣೆ ತಪ್ಪಿಸಲು ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿ ಮೊರೆ!
ಕುಣಿಗಲ್ ತಾಲ್ಲೂಕಿನಾದ್ಯಂತ ತಾಪಮಾನ ಹೆಚ್ಚುತ್ತಿದ್ದಂತೆ ಕಳೆದೊಂದು ತಿಂಗಳಿಂದ ಕುಡಿಯುವ ನೀರಿನ ಹಾಹಾಕಾರ ಉಂಟಾಗಿದ್ದು ತಾಲ್ಲೂಕಿ 36 ಗ್ರಾಮ ಪಂಚಾಯಿತಿಗಳ ಪೈಕಿ ಸುಮಾರು ಐವತ್ತ ಏಳಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕುಡಿಯುವ ನೀರಿನ ಬವಣೆ ತಪ್ಪಿಸುವ ನಿಟ್ಟಿನಲ್ಲಿ ತಾಲ್ಲೂಕು ಆಡಳಿತ ಖಾಸಗಿ ಕೋಳವೆ ಬಾವಿ ಹಾಗೂ ನೀರಿನ ಟ್ಯಾಂಕರ್ ಮೊರೆಹೊಗಿದ್ದಾರೆ ದಿನ ನಿತ್ಯ ಒಂದಲ್ಲ ಒಂದು ಗ್ರಾಮ ಪಂಚಾಯ್ತಿಗಳಲ್ಲಿ ಕೊಳವೆ ಬಾವಿಗಳು ಬತ್ತಿ ಹೊಗುತ್ತಿದ್ದು ಉಳಿದ ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕುಸಿಯುತ್ತಿದೆ, ಗ್ರಾಮ ಪಂಚಾಯ್ತಿ ಪಿಡಿಒಗಳಿಗೆ ಜನ ಜಾನು ವಾರುಗಳಿಗೆ ಕುಡಿಯುವ ನೀರು ಒದಗಿಸುವುದೆ ದೊಡ್ಡ ಸವಾಲಾಗಿದೆ ಕುಣಿಗಲ್ ತಾಲ್ಲೂಕಿನ 36 ಗ್ರಾಮ ಪಂಚಾಯ್ತಿಗಳಲ್ಲಿ ಪ್ರಸ್ತುತ ಎಂಟುನೂರ ಇಪ್ಪತ್ತು ಕೊಳವೆ ಬಾವಿಗಳಿದ್ದು, ಕಳೆದೊಂದು ತಿಂಗಳಿನಲ್ಲಿ ಐವತ್ತಕ್ಕೂ ಹೆಚ್ಚು ಕೊಳವೆ ಬಾವಿಗಳು ನೀರಿಲ್ಲದೆ ಬತ್ತಿಹೊಗಿರುವ ಕಾರಣ ನೀರಿನ ಬವಣೆ ಹೆಚ್ಚುತ್ತಿದ್ದು, ಕುಡಿಯುವ ನೀರು ಒದಗಿಸುವುದು ಇಗ ದೊಡ್ಡ ಸವಾಲಾಗಿದೆ ಕೆಲವು ಗ್ರಾಮಗಳಿಗೆ ದಿನ ಬಿಟ್ಟು ದಿನ ಟ್ಯಾಂಕರ್ ಗಳ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ, ಇನ್ನೂ ಕೆಲವು ಕಡೆಗಳಲ್ಲಿ ಖಾಸಗಿ ಕೊಳವೆಬಾವಿ ಮೊರೆ ಹೊಗಲಾಗಿದೆ, ಪ್ರತಿ ತಿಂಗಳು ಖಾಸಗಿ ಕೊಳವೆಬಾವಿ ಮಾಲೀಕರಿಗೆ 15 ರಿಂದ 18 ಸಾವಿರ ಪಾವತಿ ಮಾಡಬೇಕಿದ್ದು, ಪ್ರತಿ ನೀರಿನ ಟ್ಯಾಂಕರ್ ಗೆ 800 ರಿಂದ 1200 ವರೆಗೆ ಪಾವತಿಸಲಾಗುತ್ತಿದ್ದೆ,ಪ್ರಸ್ತುತ ಗ್ರಾಮ ಪಂಚಾಯಿತಿಗಳಲ್ಲಿ ಯಾವುದೆ ಅನುದಾನ ಇಲ್ಲದ ಕಾರಣ ಗ್ರಾಮ ಪಂಚಾಯ್ತಿ ಪಿಡಿಒಗಳು ಪೇಚಿಗೆ ಸಿಲುಕಿದ್ದಾರೆ, ಇನ್ನೂ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಬಿಡಿಗಾಸು ಅನುದಾನ ಬಿಡುಗಡೆಯಾಗಿಲ್ಲ, ಪಂಪು ಮೋಟಾರ್ ಕೆಟ್ಟರು ಸಹ ರಿಪೇರಿ ಮಾಡಿಸಲು ಯಾವುದೆ ಅನುದಾನ ಇಲ್ಲದಂತಾಗಿದೆ.ಕುಡಿಯುವ ನೀರಿನ ಸಮಸ್ಯೆ ಕಾರಣದಿಂದ ಗ್ರಾಮಪಂಚಾಯ್ತಿಗಳು ತೆರಿಗೆ ವಸೂಲಿಯಲ್ಲು ಹಿಂದೆ ಉಳಿಯುವಂತಾಗಿದೆ,ಹದಿನೈದನೆ ಹಣಕಾಸು ಯೋಜನೆಯಡಿ 2025/26ನೇ ಸಾಲಿನಲ್ಲಿ ತಾಲ್ಲೂಕಿಗೆ ಮೂವತ್ತು ಲಕ್ಷ ಹಣ ಇನ್ನೂ ಬಿಡುಗಡೆಯಾಗಿಲ್ಲ ಇದರಿಂದಾಗಿ ಮೂಲಭೂತ ಸೌಕರ್ಯ ಒದಗಿಸಲು ಗ್ರಾಮ ಪಂಚಾಯ್ತಿಗಳಿಗೆ ಹೆಚ್ಚು ಹೊರೆಯಾಗುತ್ತಿದೆ,ಪಂಪು ಮೋಟರ್ ಮತ್ತು ಬೀದಿ ದೀಪ ಕೆಟ್ಟರೆ ಹಾರ್ಡವೇರ್ ಮಾಲೀಕರ ಬಳಿ ಸಾಲ ಮಾಡುವ ಪರಿಸ್ಥಿತಿ ಪಿಡಿಒಗಳದ್ದಾಗಿದೆ.ಇದೆ ರೀತಿ ಮುಂದುವರಿದರೆ ತಾಲ್ಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳಲಿದೆ, @publicnewskunigal