ಕುಣಿಗಲ್ ತಾಲ್ಲೂಕಿನ ಕೋತ್ತಗೆರೆ ಹೊಬಳಿ ವ್ಯಾಪ್ತಿಯ ಮುತ್ತುಗದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಶಾಸಕ ಡಾ,ರಂಗನಾಥ್ ಗುದ್ದಲಿ ಪೂಜೆ ನೆರವೆರಿಸಿದರು ಗ್ರಾಮದಲ್ಲಿ ಹಲವು ದಿನಗಳಿಂದ ಬೇಡಿಕೆ ಇದ್ದ ಇನ್ನೆಲೆಯಲ್ಲಿ ಹಳೆಯ ರಾಷ್ಟ್ರೀಯ ಹೆದ್ದಾರಿ 48 ರಿಂದ ಮುತ್ತುಗದಹಳ್ಳಿ ಮೂಲಕ ಮೇಣಸಿನಹಳ್ಳಿ ಬೋರೆಗೌಡನಪಾಳ್ಯ ಗ್ರಾಮದ ವರೆಗೆ ಸಂಪರ್ಕಿಸುವ ರಸ್ತೆ ಅಭಿವೃದ್ದಿ ಕಾಮಗಾರಿಗೆ ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಗುದ್ದಲಿ ಪೂಜೆ ನೆರವೆರಿಸಿದರು ಕಾರ್ಯಕ್ರಮದಲ್ಲಿ ಪಿಡಬ್ಲೂಡಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಗುರುಸಿದ್ದಪ್ಪ ಮಾಜಿ ತಾಲ್ಲೂಕು ಪಂಚಾಯ್ತಿ ಸದಸ್ಯ ರಾಜಣ್ಣ ಮುಖಂಡರಾದ ಪಾಪಣ್ಣ ಸೇರಿದಂತೆ ಗ್ರಾಮದ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು

ಕುಣಿಗಲ್ ತಾಲ್ಲೂಕಿನ ಸುದ್ದಿಗಳು ಪ್ರಚಲಿತವಾಗಲಿ ಬೆಂಬಲಿಸಿ ಪ್ರೊತ್ಸಾಹಿಸಲು ಮನವಿ