ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ ಉಪ ಮುಖ್ಯ ಮಂತ್ರಿ ಡಿ.ಕೆ ಶಿವಕುಮಾರ್!
ತುಮಕೂರಿನಲ್ಲಿ ನಡೆಯುತ್ತಿದ್ದ ರಾಜ್ಯ ಸರ್ಕಾರದ ಮೂರನೇ ವರ್ಷದ ಸಾಧನ ಸಮಾವೇಶದಲ್ಲಿ ಭಾಗಿಯಾಗಿ ಬಳಿಕ ರಾಮನಗರಕ್ಕೆ ತೆರಳುವ ವೇಳೆ ಮಾರ್ಗ ಮಧ್ಯೆ ಕುಣಿಗಲ್ ಪಟ್ಟಣಕ್ಕೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಪಟ್ಟಣದ ಸ್ಟಡ್ ಫಾರಂಗೆ ಬೇಟಿ ನೀಡಿದ್ದ ವೇಳೆ ಕಾಂಗ್ರೆಸ್ ಮುಖಂಡರು ಉಪ ಮುಖ್ಯಮಂತ್ರಿಗಳನ್ನು ಬೇಟಿ ಮಾಡಿದರು ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ ಮಾತನಾಡಿ ಕೊತ್ತಗೆರೆ ಹೊಬಳಿಯಲ್ಲಿ ಕೊಳವಿಬಾವಿಗಳು ಬತ್ತಿಹೋಗುತ್ತಿದ್ದು ಕೊತ್ತಗೆರೆ ಹೊಬಳಿಗೆ ಇಗಾಗಲೆ ಏತನೀರಾವರಿ ಯೋಜನೆಗೆ ಡಿ.ಪಿ ಆರ್ ಸಿದ್ದಾವಾಗಿದೆ ಯೋಜನೆಗೆ ಹಣ ಬಿಡುಗಡೆಗೊಳಿಸಿ ಯೋಜನೆಗೆ ಗುದ್ದಲಿಪೂಜೆ ನೆರವೆರಿಸುವಂತೆ ಉಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು, ಇದೆ ವೇಳೆ ಮತ್ತೊರ್ವ

ಕಾಂಗ್ರೆಸ್ ಮುಖಂಡ ಬೆನವಾರ ಶೇಷಣ್ಣ ಮಾತನಾಡಿ ಹುಲಿಯೂರುದುರ್ಗ ಹೊಬಳಿ ವೈ.ಕೆ ರಾಮಯ್ಯ ನವರ ಬಳಿಕ ಯಾವುದೆ ಅಭಿವೃದ್ದಿ ಕಂಡಿಲ್ಲ ದಯಮಾಡಿ ಹುಲಿಯೂರುದುರ್ಗ ಭಾಗದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಿ ಕೆರೆಗಳನ್ನು ತುಂಬಿಸುವಂತೆ ಮನವಿ ಮಾಡಿದರು, ಇದೆ ವೇಳೆ ಶಾಸಕ ಡಾ.ರಂಗನಾಥ್ ರೊಂದಿಗೆ ಚರ್ಚಿಸಿ ತಾಲ್ಲೂಕಿನ ನೀರಾವರಿ ಯೋಜನೆಗಳ ಕುರಿತು ಮಾಹಿತಿ ಪಡೆದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ರವರು ಲಿಂಕ್ ಯೋಜನೆಯ ಪ್ರಗತಿ ಬಗ್ಗೆ ಮಾಹಿತಿ ಪಡೆದ ಅವರು ಸಮಸ್ಯೆ ಇರುವ ಕಡೆಯಲ್ಲಿ ಹೊರತು ಪಡಿಸಿ ಬೇರೆ ಕಡೆಯಲ್ಲಿ ಕೆಲಸ ಪ್ರಾರಂಭಿಸುವಂತೆ ಶಾಸಕ ಡಾ.ರಂಗನಾಥ್ ಗೆ ತಿಳಿಸಿದರು ಕುಣಿಗಲ್ ತಾಲ್ಲೂಕಿನ ನೀರಾವರಿ ಯೋಜನೆಗಳಿಗೆ ನನ್ನ ಅವಧಿಯಲ್ಲಿ ಹೆಚ್ಚಿನ ಅನುದಾನ ನೀಡಲಾಗಿದೆ ಎಂದರು ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ,ಕೊಘಟ್ಟ ರಾಜಣ್ಣ,ಮುಖಂಡರಾದ ಬೇಗೂರು ಮೂರ್ತಿ,ಕೆಂಪನಹಳ್ಳಿ ಕುಮಾರ್,ಬೋರೆಗೌಡ,ಶೇಷಣ್ಣ,ಪಾಪಣ್ಣ,ಮಲ್ಲಿಪಾಳ್ಯ ಶ್ರೀನಿವಾಸ್,ನಾಗೇಂದ್ರ,ದೇವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು@publicnewskunigal