ಕುಣಿಗಲ್ ಸುದ್ದಿ;-ಕುಣಿಗಲ್ ಪಟ್ಟಣದ ಜೆಡಿಎಸ್ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ,ಎನ್ ಜಗದೀಶ್ 2019 ರಲ್ಲಿ ನಡೆದೆ ಪುರಸಭಾ ಚುನಾವಣೆಯಲ್ಲಿ ಪಟ್ಟಣದ ಏಳನೆ ವಾರ್ಡ್ ನಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಅನ್ಸರ್ ಪಾಷ,ಹಾಗೂ ಕಾಂಗ್ರೆಸ್ ನಿಂದ ಸಮೀವುಲ್ಲಾ ಸ್ಪರ್ಧಿಸಿದ್ದರು ಆದರೆ ಕಾಂಗ್ರೆಸ್ ಅಭ್ಯರ್ಥಿ ಸಮೀವುಲ್ಲಾ ರವರು ಚುನಾವಣೆಯ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸುವ ಸಂಧರ್ಭದಲ್ಲಿ ಸುಳ್ಳು ಅಫಿಡವಿಟ್ ಸಲ್ಲಿಸಿದ್ದು
ನಾಮಪತ್ರ ಪರಿಶೀಲನೆ ವೇಳೆ ಚುನಾವಣೆ ಅಧಿಕಾರಿಗಳಿಗೆ ಸಮೀವುಲ್ಲಾ ಸಲ್ಲಿಸಿರುವ ನಾಮಪತ್ರದಲ್ಲಿರುವ ಲೋಪದೋಷಗಳ ಬಗ್ಗೆ ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರು ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಅಂದಿನ ಚುನಾವಣೆಯ ಅಧಿಕಾರಿ ವಿ,ಆರ್ ವಿಶ್ವನಾಥ್ ನಾಮಪತ್ರದಲ್ಲಿ ಸಲ್ಲಿಸಿದ್ದ ಸುಳ್ಳು ಅಫಿಡವಿಟ್ ಪರಿಶೀಲಿಸಿದ್ದರು ಸಹ ಅದನ್ನು ಅಸಿಂಧು ಗೋಳಿಸದೆ ರಾಜಕೀಯ ಒತ್ತಡಕ್ಕೆ ಮಣಿದು ಶಾಸಕರ ಸಂಸದರ ನಿರ್ದೇಶನದಂತೆ ಕಾಂಗ್ರೆಸ್ ಅಭ್ಯರ್ಥಿ ಸಮೀವುಲ್ಲಾ ರವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದ್ದರು ಇದರಿಂದ ಅವರು ಜಯಗಳಿಸಿ ಪುರಸಭೆಯಲ್ಲಿ ಸದಸ್ಯರಾಗಿ ಬಳಿಕ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿದ್ದರು
ಇದನ್ನು ಪ್ರಶ್ನಿಸಿ ಅನ್ಸರ್ ಪಾಷ ರವರು ನ್ಯಾಯಾಲಯದ ಮೊರೆ ಹೊದ ಹಿನ್ನೆಲೆಯಲ್ಲಿ ನ್ಯಾಯಲಯವು ಸಮೀವುಲ್ಲಾ ರವರ ಸದಸ್ಯತ್ವ ರದ್ದುಗೊಳಿಸಿ ಅನ್ಸರ್ ಪಾಷ ರವರಿಗೆ ಸದಸ್ಯತ್ವ ಸ್ಥಾನಕ್ಕೆ ಅರ್ಹತೆ ಕಲ್ಪಿಸಿ ಆದೆಶೀಸಿದೆ ಆದರೆ ಇಗಾಗಲೆ ಮೂರುವರೆ ವರ್ಷ ಕಳೆದಿದ್ದು ನ್ಯಾಯಲಯದಲ್ಲಿ ಜಯ ಸಿಕ್ಕಿದೆ ಸುಳ್ಳು ಮಾಹಿತಿ ನೀಡಿದರು ಸಹ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳದೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಿಕೊಟ್ಟು ಸಮೀವುಲ್ಲಾ ಗೆಲುವಿಗೆ ಸಹಕರಿಸಿದ ಅಂದಿನ ಚುನಾವಣೆಯ ಅಧಿಕಾರಿ ವಿ,ಆರ್ ವಿಶ್ವನಾಥ್ ವಿರುದ್ದ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದರು
ತಾಲ್ಲೂಕಿನಲ್ಲಿ ಅಧಿಕಾರಿಗಳು ಶಾಸಕರ ಹಾಗೂ ಸಂಸದರ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ ಆದರೆ ಇದೆ ರೀತಿಯಲ್ಲಿ ಮುಂದುವರಿದರೆ ಅಧಿಕಾರಿಗಳು ನಿಮಗೂ ವಿಶ್ವನಾಥ್ ಪರಿಸ್ಥಿತಿ ಬರಲಿದೆ ತಾಲ್ಲೂಕಿನಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ಕಾಂಗ್ರೆಸ್ ಎಜೆಂಟ್ ಗಳ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ನ್ಯಾಯ ಸಿಗುತ್ತಿಲ್ಲಾ ಎಂದು ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಬಿ,ಎನ್ ಜಗದೀಶ್ ತೀಳಿಸಿದರು ಈ ವೇಳೆ ಮಾಜಿ ಪುರಸಭಾ ಅಧ್ಯಕ್ಷ ಕೆ,ಎಲ್ ಹರೀಶ್,ಜೆಡಿಎಸ್ ವಕ್ತಾರ ತರೀಕೆರೆ ಪ್ರಕಾಶ್,ಮುಖಂಡ ರಂಗಸ್ವಾಮಿ,ಅನ್ಸರ್ ಪಾಷ, ಸೇರಿದಂತೆ ಹಲವರು ಉಪಸ್ಥಿತರಿದ್ದರು@publicnewskunigal