ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಐವತ್ತು ಸಾವಿರ ಲಡ್ಡು ವಿತರಣೆ!
ಕುಣಿಗಲ್ ಪಟ್ಟಣದ ಮಾಜಿ ಸಂಸದರ ಕಚೇರಿಯಲ್ಲಿ ಗುರುವಾರ ಡಿ.ಕೆ.ಎಸ್ ಚಾರಿಟಬಲ್ ಟ್ರಸ್ಟ್ ಹಾಗೂ ಜನಪ್ರಿಯ ಶಾಸಕರಾದ ಡಾ,ರಂಗನಾಥ್ ರವರ ನೇತೃತ್ವದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಕುಣಿಗಲ್ ತಾಲ್ಲೂಕಿನ ಶಾಲಾ ಕಾಲೇಜು ಮಕ್ಕಳಿಗೆ ಸಿಹಿ ವಿತರಿಸುವ ಸಲುವಾಗಿ ಐವತ್ತು ಸಾವಿರ ಲಡ್ಡುಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಂಗಣ್ಣಗೌಡ,ಯುತ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಜಯರಾಮಯ್ಯ,ಹುಲಿಯೂರುದುರ್ಗ ಗ್ರಾಮ ಪಂಚಾಯ್ತಿಯ ಸದಸ್ಯರಾದ ಅಲ್ಲಾಭಕಾಷ್, ನಾಗೇಶ್,ಮುಖಂಡರಾದ ಮೊಹನ್ ಗೋಪಿನಾಥ್ ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal