ಬಿಸೇಗೌಡನದೊಡ್ಡಿ ಗ್ರಾಮದಲ್ಲಿ ಕ್ರಷರ್ ದೂಳಿನಿಂದ ಬೇಸತ್ತ ಗ್ರಾಮಸ್ಥರಿಂದ ಕ್ರಷರ್ ಲಾರಿಗಳನ್ನು ತಡೆದು ಆಕ್ರೋಶ ಕ್ರಮಕ್ಕೆ ಆಗ್ರಹ!
ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಬಿಸೇಗೌಡನ ದೊಡ್ಡಿ ಗ್ರಾಮದಲ್ಲಿ ಗುರುವಾರ ಕ್ರಷರ್ ಲಾರಿಗಳನ್ನು ತಡೆದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಗ್ರಾಮದ ಕಲ್ಲು ಗಣಿಗಾರಿಕೆಯ ಕಾರಣದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ಉಸಿರುಗಟ್ಟಿದ ವಾತವರಣ ನಿರ್ಮಾಣವಾಗಿದೆ ಗಣಿಗಾರಿಕೆಯಲ್ಲಿ ಉತ್ಪತ್ತಿಯಾಗುವ ವಿಷಪೂರಿತ ದೂಳಿನ ಕಾರಣದಿಂದ ಸುತ್ತಮುತ್ತಲ ಗ್ರಾಮಗಳಲ್ಲಿ ವಯೋವೃದ್ದರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ,ಜನುವಾರುಗಳು ದೂಳು ಮಿಶ್ರಿತವಾದ ಆಹಾರ ತಿಂದು ಸಾವನ್ನಪ್ಪುತ್ತಿವೆ ಕೃಷಿಯನ್ನೆ ನಂಬಿ ಜೀವನ ಸಾಗಿಸುತ್ತಿರುವ ನಮಗೆ ಗಣಿಗಾರಿಕೆಯ ಕಾರಣದಿಂದ ಸಮಸ್ಯೆ ಎದುರಾಗಿದೆ ಇಪ್ಪತ್ತನಾಲ್ಕು ಗಂಟೆಗಳಕಾಲ ಕ್ರಷರ್ ಕಾರ್ಯನಿರ್ವಹಿಸುತ್ತಿರುವ ಕಾರಣ ಸ್ಪೊಟದ ಶಬ್ದಕ್ಕೆ ಕಾಡು ಪ್ರಾಣಿಗಳು ಗ್ರಾಮಗಳತ್ತ ಬರುತ್ತಿವೆ ಈ ಬಗ್ಗೆ ತಾಲ್ಲೂಕು ಆಡಳಿತ ಜಿಲ್ಲಾಡಳಿತ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು ಸಹ ಯಾವುದೆ ಪ್ರಯೋಜನವಾಗಿಲ್ಲ,ಇದೆ ಗಣಿಗಾರಿಕೆಯ ಕಾರಣದಿಂದ ಹಲವರು ಕುಟುಂಬ ಸಹಿತ ಗ್ರಾಮಗಳನ್ನು ತೊರೆದಿದ್ದಾರೆ,ಕ್ರಷರ್ ನಿಂದ ಎಂಸ್ಯಾಂಡ್,ಜಲ್ಲಿ ಸಾಗಿಸುವಾಗ ಟಿಪ್ಪರ್ ಲಾರಿಗಳು ಮೇಲೆ ಟಾರ್ಪಲ್ ಹೊದಿಕೆ ಹಾಕುವುದಿಲ್ಲ ಇದರಿಂದ ರಸ್ತೆಯುದ್ದಕ್ಕೂ ಜಲ್ಲಿ ಕಲ್ಲುಗಳು ಎಂಸ್ಯಾಂಡ್ ಬಿದ್ದು ರಸ್ತೆಯಲ್ಲಿ ಒಡಾಡುವ ದ್ವಿಚಕ್ರ ವಾಹನ ಸವಾರರು ಬಿದ್ದು ಹಲವರು ಕಾಲು ಕೈ ಮುರಿದುಕೊಂಡಿದ್ದಾರೆ, ಲಾರಿಗಳಲ್ಲಿ ಅತಿಯಾದ ಭಾರ ತುಂಬುವ ಕಾರಣದಿಂದ ಗ್ರಾಮದ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿ ಒಡಾಡದಂತಾಗಿದೆ ಕಲ್ಲುಬಂಡೆ ಸ್ಪೋಟಗೊಳಿಸುವ ಸಂದರ್ಭದಲ್ಲಿ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮವಾಗಲಿ ಅಥವಾ ಸೈರನ್ ಆಗಲಿ ಮಾಡುವುದಿಲ್ಲ ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ಗಣಿಗಾರಿಕೆಯನ್ನು ನಡೆಸಲಾಗುತ್ತಿದೆ, ರಸ್ತೆಯಲ್ಲಿ ಲಾರಿಗಳು ಸಂಚರಿಸುವಾಗ ಉತ್ಪತ್ತಿಯಾಗು ದೂಳಿಗೆ ನೀರು ಸಹ ಹಾಕುವುದಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು ಕೂಡಲೆ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸದಿದ್ದರೆ ಹೊರಾಟ ಮಾಡಬೇಕಗುತ್ತದೆ ಇದಕ್ಕೆ ಅವಕಾಶ ನಿಡಬೇಡಿ ಎಂದು ಗ್ರಾಮದ ಪ್ರಕಾಶ್, ಸೀನಪ್ಪ ,ವೆಂಕಟೇಶ್, ಗಿರೀಶ್, ರಾಜಣ್ಣ, ನಾಗೇಶ್, ರಮೇಶ್, ನಂಜುಂಡಸ್ವಾಮಿ, ಶಂಕರ್, ಪಟೇಲಪ್ಪ, ಆಗ್ರಹಿಸಿದ್ದಾರೆ @publicnewskunigal