ಪಂಜಾಬ್ ರಾಜ್ಯದ ಛತ್ತೀಸ್‌ಗಢದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ನ ಹೃದಯಾಘಾತದಿಂದ ಕುಣಿಗಲ್ ಮೂಲದ ಯೋಧ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ ಕಳೆದ ಇಪ್ಪತೈದು ವರ್ಷಗಳಿಂದ ಭಾರತಿಯ ಸೇನೆಯಲ್ಲಿ ಕಳೆದ ಇಪ್ಪತೈದು ವರ್ಷಗಳಿಂದ ಸೇನಾದಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಂಗರಹಳ್ಳಿ ಗ್ರಾಮದ ರಾಮಯ್ಯ ನವರ ಪುತ್ರ ನಿರಂಜನ್ ಕರ್ತವ್ಯ ನಿರ್ವಹಿಸುತ್ತಿದ್ದಾಗ ಸಾವನ್ನಪ್ಪಿರುವ ವೀರ ಯೋಧ ಹುಲಿಯೂರುದುರ್ಗದಲ್ಲಿ ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು ಹುಲಿಯೂರುದುರ್ಗದ ಫ್ರೆಂಡ್ಸ್ ಕ್ರಿಕೆಟರ್ಸ್ ಹಾಗೂ ದುರ್ಗಾಂಬಾ ಗೆಳೆಯರ ಬಳಗದ ಅತ್ಯಂತ ಆತ್ಮೀಯ, ಹೃದಯವಂತ ಸದಸ್ಯರಾಗಿದ್ದು, ಎಲ್ಲರ ಮನಸ್ಸು ಗೆದ್ದ ಒಳ್ಳೆಯ ಸ್ನೇಹಿತರಾಗಿದ್ದರು.ಬೆಂಗಳೂರಿನಲ್ಲಿರುವ ಅವರ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ಕೆಲ ಕಾಲ ಇರಿಸ ಬಳಿಕ ಹಂಗರಹಳ್ಳಿ ಗ್ರಾಮದಲ್ಲಿ ಸೋಮವಾರ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ವನ್ನು ವಿಧಿವಿಧಾನಗಳ ಮೂಲಕ ನೆರವೇರಿಸಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ @publicnewskunigal