ರಾಜ್ಯ ಹೆದ್ದಾರಿ 33ರ ಕುರುಡಿಹಳ್ಳಿ ಬಳಿ ಬಿಕರ ರಸ್ತೆ ಅಪಘಾತ ನಾಲೆಗೆ ಬಿದ್ದ ಲಾರಿ ಒರ್ವ ಸಾವು ಮತ್ತೊರ್ವ ಗಂಭೀರ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೊಬಳಿ ವ್ಯಾಪ್ತಿಯ ತುಮಕೂರು ಕುಣಿಗಲ್ ಸಂಪರ್ಕಿಸುವ ರಾಜ್ಯ ಹೆದ್ದಾರಿ 33ರ ಕುರುಡಿಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪಶು ಆಹಾರ ತುಂಬಿದ್ದ ಲಾರಿ ಹೆಮಾವತಿ ನಾಲೆಗೆ ಉರುಳಿ ಬಿದ್ದ ಪರಿಣಾಮ ಒರ್ವ ಸ್ಥಳದಲ್ಲಿ ಸಾವನ್ನಪ್ಪಿದ್ದು ಮತ್ತೊರ್ವ ಗಂಭಿರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ ಅನಂತಪುರ ಮೂಲದ ಲಾರಿ ಚಾಲಕ ವೆಂಕಟೇಶ್ (50) ಮೃತ ವ್ಯಕ್ತಿ ಮತ್ತೊರ್ವ ಚಾಲಕ ಮಧು (50) ಗಂಭೀರವಾಗಿ ಗಾಯಗೊಂಡಿದ್ದು ಎರಡು ಕಾಲುಗಳು ಮುರಿದಿದೆ ಆಂಧ್ರಪ್ರದೇಶದಿಂದ ತುಮಕೂರು ಮಾರ್ಗವಾಗಿ ಕೇರಳಕ್ಕೆ ತೆರಳವಾಗ ಕುರುಡಿಹಳ್ಳಿ ಗ್ರಾಮದ ಬಳಿ ಅವಘಡ ಸಂಭವಿಸಿದೆ ಚಾಲಕನ ನಿಯಂತ್ರಣ ತಪ್ಪಿದ ನಾಲೆಗೆ ಬಿದ್ದ ರಬಸಕ್ಕೆ ಲಾರಿ ಸಂಪೂರ್ಣ ಜಕಂಗೊಂಡಿದೆ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಕುಣಿಗಲ್ ಪೊಲೀಸರು ಜೆಸಿಬಿ ಯಂತ್ರ ಬಳಸಿ ಕಾರ್ಯಚರಣೆ ನಡೆಸಿ ಚಾಲಕನನ್ನು ಹೊರತೆಗೆದಿದ್ದಾರೆ ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತದೇಹವನ್ನು ಮರಣೋತ್ತರ ಪರೀಕ್ಷೆಯಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರಿಸಲಾಗಿದ್ದು ಗಾಯಳುವನ್ನು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ ಇತ್ತಿಚೆಗೆ ರಾಜ್ಯ ಹೆದ್ದಾರಿ 33ರಲ್ಲಿ ಜವರಾಯನ ಅಟ್ಟಹಾಸ ಮೆರೆದಿದ್ದು ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಇನ್ನಾದರು ಸಂಬಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಹೆಚ್ಚುತ್ತಿರುವ ಅಪಘಾತಕ್ಕೆ ಕಡಿವಾಣ ಹಾಕಬೇಕಿದೆ @publicnewskunigal