ಡಿ.ಜೆ ಬದಲು ಸ್ಥಳಿಯ ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಅವಕಾಶ ನೀಡಿ ಎಎಸ್ಪಿ ಗೋಪಾಲ್!
ಕುಣಿಗಲ್ ಪಟ್ಟಣದ ಕನ್ನಡ ಭವನದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಶಾಂತಿ ಸಭೆಯನ್ನು ಉದ್ಘಾಟಿಸಿ ಬಳಿಕ ತುಮಕೂರು ಎಎಸ್ಪಿ ಗೋಪಾಲ್ ಮಾತನಾಡಿ ಹಬ್ಬ ಆಚರಣೆಗಳನ್ನು ಆಚರಿಸುವ ಸಂದರ್ಭದಲ್ಲಿ ಯಾವುದೆ ಧರ್ಮ ಅಥಾವ ಕೊಮು ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸಗಳು ಆಗದಿರಲಿ ಡಿ.ಜೆ ಬದಲು ಸ್ಥಳಿಯ ಜಾನಪದ ಹಾಗೂ ಸಾಂಸ್ಕೃತಿಕ ಕಲೆಗಳಿಗೆ ಅವಕಾಶ ನೀಡಿ ಮಹಿಳೆಯರು ಮಕ್ಕಳು ಭಾಗಿಯಾಗುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ,ಮಧ್ಯ ಸೇವಿಸದೆ ಪೊಜೆ ಪುರಸ್ಕಾರದಲ್ಲಿ ಪಾಲ್ಗೊಳ್ ಯಾವುದೆ ಅಹಿತಕರ ಘಟನೆಗಳಿಗೆ ಅವಕಾಶ ನೀಡದೆ ಅರ್ಥಪೂರ್ಣವಾಗಿ ಹಬ್ಬ ಆಚರಣೆ ಮಾಡಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಮಾಡುವ ಸ್ಥಳದಲ್ಲಿ ಸಿಸಿ ಕ್ಯಾಮರ ಅಳವಡಿಸಿ. ಸಾಮಾಜಿಕ ಜಾಲತಾಣ ಬಳಕೆ ಮಾಡುವಾಗ ಎಚ್ಚರಿಕೆ ಇರಲಿ ಅನ್ಯ ಕೊಮು ಅಥಾವ ಧರ್ಮದವರಿಗೆ ನೊವುಂಟು ಮಾಡುವ ರೀತಿಯಲ್ಲಿ ಅಪ ಪ್ರಚಾರ ಮಾಡುವ ರೀತಿಯಲ್ಲಿ ಪೋಟೊಗಳು ಮತ್ತು ಸಂದೇಶ ಹಂಚಿಕೊಂಡರೆ ಅಂತವರ ವಿರುದ್ದ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾವುದು.ಒಂದೆ ಕಡೆಯಲ್ಲಿ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗುವುದು ಪೊಲೀಸರು ಸದಾ ನಿಮ್ಮ ಸುರಕ್ಷತೆಯ ಬಗ್ಗೆ ಯೋಚಿಸುತ್ತಾರೆ ಅವರೊಂದಿಗೆ ಸಹಕರಿಸಿ ಸಂಭ್ರಮದಿಂದ ಹಬ್ಬ ಆಚರಿಸಿ ಎಂದರು ಬಳಿಕ ಕುಣಿಗಲ್ ಠಾಣೆಯ ಸಿಪಿಐ ಮಾಧ್ಯನಾಯಕ್ ಮಾತನಾಡಿ ಯಾವುದೆ ಜಾತಿ ಯಾವುದೆ ಧರ್ಮ ಇರಲಿ ನಾವೆಲ್ಲ ಭಾರತೀಯರು ಎಂಬ ಭಾವನೆ ಇರಲಿ.ಸರ್ಕಾರದ ಮಾರ್ಗ ಸೂಚಿ ಇರುವ ಕಾರಣ ಎಲ್ಲರೂ ತಪ್ಪದೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಸಮದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ ಹಬ್ಬದ ಹೆಸರಿನಲ್ಲಿ ದೌರ್ಜನ್ಯ ಮಾಡಿ ಜನ ಸಾಮಾನ್ಯರಿಂದ ವಸೂಲಿ ಮಾಡದಿರಿ ಪ್ರೀತಿಯಿಂದ ಕೊಟ್ಟರೆ ಪಡೆದುಕೊಳ್ಳಿ ರಸ್ತೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ವಾಹನಗಳನ್ನು ಅಡ್ಡಗಟ್ಟಿ ವಸೂಲಿಗೆ ಇಳಿದಿದ್ದಾರೆ ದೂರು ಬಂದರೆ ಅಂತಹವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಶಾಂತಿ ಸುವ್ಯವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಕಠಿಣ ಕ್ರಮ ಅಗತ್ಯ ಹಬ್ಬ ಆಚರಣೆಗೆ ಅಡ್ಡಿಪಡಿಸುವುದು ಪೊಲೀಸ್ ಇಲಾಖೆಯ ಕೆಲಸವಲ್ಲ ಎಂದರು.ಇನ್ನೂ ಪಿಒಪಿ ಗಣಪತಿ ಮಾರಾಟ ಮಾಡಲು ಅವಕಾಶ ನೀಡದಂತೆ ಸಭೆಯಲ್ಲಿ ಮುಖಂಡರು ಮನವಿ ಮಾಡಿದರು,ಈ ವೇಳೆ ಮುಸ್ಲಿಂ ಸಮುದಾಯದ ಮುಖಂಡರು ಮಾತನಾಡಿ ಹಿಂದೂ ಮುಸ್ಲಿಂ ಭಾಂದವರು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೆವೆ ನಾವು ಹಬ್ಬ ಆಚರಣೆ ಮಾಡುವ ಸಂದರ್ಭದಲ್ಲಿ ಹಿಂದೂ ಮುಖಂಡರು ಸಹಕಾರ ನೀಡುತ್ತರೆ ಅದರಂತೆ ನಾವುಗಳು ಕೂಡ ಗಣೇಶ ಹಬ್ಬದಂದು ಮೂರ್ತಿ ವಿಸರ್ಜನೆ ಮಾಡುವ ವೇಳೆ ನಾವುಗಳು ಕೂಡ ಸಹಕಾರ ನೀಡುತ್ತೆವೆ ನಮ್ಮಲ್ಲಿ ಯಾವುದೆ ಒಡಕು ಇಲ್ಲದೆ ಅಣ್ಣತಮ್ಮಂದಿರ ರೀತಿಯಲ್ಲಿ ಇದ್ದೆವೆ ಎಂದರು ಡಿವೈಎಸ್ಪಿ ಓಂ ಪ್ರಕಾಶ್ ಮಾತನಾಡಿ ಹಬ್ಬ ಆಚರಣೆಯಲ್ಲಿ ಯಾವುದೆ ಅಹಿತಕರ ಘಟನೆಯ ಹಾಗೂ ಸಮಸ್ಯೆಯಾಗದಂತೆ ತಡೆಯುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ ಜೋತೆಗೆ ನ್ಯಾಯಲಯದ ಆದೇಶ ಪಾಲನೆ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಲ್ಲರೂ ಒಮ್ಮತದಿಂದ ನಿಗದಿ ಪಡಿಸಿದ ದಿನದಂತೆ ವಿಸರ್ಜನೆಗೆ ಅವಕಾಶ ನೀಡುತ್ತೆವೆ ಯಾವುದೆ ಸಮಾಜ ಧರ್ಮ ಟಾರ್ಗೆಟ್ ಮಾಡುವುದನ್ನು ನಾವು ಸಹಿಸುವುದಿಲ್ಲ ಎಲ್ಲಾದರು ತಪ್ಪುಗಳು ಕಂಡುಬಂದಲ್ಲಿ ಪೊಲೀಸ್ ಇಲಾಖೆಯ ಗಮನಕ್ಕೆ ತನ್ನಿ ಎಂದರು ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರವಿಕುಮಾರ್,ಎ.ಎಸ್.ಐ ಶ್ರೀಧರ್.ಪತ್ರಕರ್ತರ ಸಂಘದ ಅಧ್ಯಕ್ಷ ಬಿಚನಹಳ್ಳಿ ಶ್ರೀನಿವಾಸ್.ಹಾಗೂ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುಖಂಡರು ಉಪಸ್ಥಿತರಿದ್ದರು