ಉತ್ತರಾಖಂಡ್ ನಲ್ಲಿ ಹೆಲಿಕಾಪ್ಟರ್ ದುರಂತ ಪೈಲಟ್ ಸೇರಿದಂತೆ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ಕರ್ನಾಟಕದ ಐದು ಮಂದಿ ಸಾವು!
ಕರ್ನಾಟಕ ದಿಂದ ಉತ್ತರಾಖಂಡ ಚಾರ್ ಧಾಮ್ ಯಾತ್ರೆಗೆ ತೆರಳಿದ್ದ ವೇಳೆ ಹೆಲಿಕಾಪ್ಟರ್ ಪತನಗೊಂಡು ಕರ್ನಾಟಕದ ಐದು ಮಂದಿ ಸೇರಿದಂತೆ ಆರು ಜನರು ನಾವನ್ನಪ್ಪಿರುವ ಘಟನೆ ಉತ್ತರಾಖಂಡ್ ನಲ್ಲಿ ಶುಕ್ರವಾರ ಸಂಭವಿಸಿದೆ ಬದರಿನಾಥ್ ನಿಂದ ಡೆಹ್ರಾಡೂನ್ಗೆ ತೆರಳುತ್ತಿದ್ದ ಹೆಲಿಕಾಪ್ಟರ್ ಸಂಪರ್ಕ ಕಡಿತಗೊಂಡು ಮಧ್ಯಾಹ್ನ ಹೆಲಿಕಾಪ್ಟರ್ ನಾಪತ್ತೆಯಾಗಿದೆ ಜೋಶಿಮಠ ಕಣಿವೆಯ ಮೇಲೆ ಹಾರಾಟ ನಡೆಸುತ್ತಿದ್ದಾಗ ಸಂಪರ್ಕ ಕಡಿತಗೊಂಡಿದ್ದು ಕಣಿವೆಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದ್ದು ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪಟ್ಟಣದ ಕೋಳಿ ಅಂಗಡಿ ಮಾಲೀಕ ಹೆಚ್.ಎಸ್ ನಟರಾಜು (50) ಅಕ್ಕಿಮರಿಪಾಳ್ಯ ನಿವಾಸಿ ವಕೀಲ ಶಂಕರೇಗೌಡ (38) ಹಾಗೂ ಈ ಹಿಂದೆ ಕುಣಿಗಲ್ ತಾಲ್ಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅಥಣಿ ತಾಲ್ಲೂಕಿನ ಅರಟಾಳು ಗ್ರಾಮದ ಸಿಪಿಐ ಅರುಣ್ ಸೋಲಂಕಿ ಪ್ರಸ್ತುತ ಬೆಂಗಳೂರಿನ ಸಿಸಿಬಿ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ಸ್ನೇಹಿತರೊಂದಿಗೆ ಕಳೆದ ಮಂಗಳವಾರ ಉತ್ತರಾಖಂಡ್ ಗೆ ಪ್ರವಾಸಕ್ಕೆ ತೆರಳಿದ್ದರು ಪೈಲಟ್ ಕ್ಯಾಪ್ಟನ್ ಹಿಮಾಂಶು ಹಾಗೂ ಪ್ರತಾಪ್ ಮತ್ತು ಸುಧೀರ್.ಕೆ ಮೃತರು ಹೆಲಿಕಾಪ್ಟರ್ ಪತನಗೊಂಡ ಸ್ಥಳವನ್ನು ಪತ್ತೆ ಮಾಡಲಾಗಿದ್ದು ಮೃತದೇಹಗಳು ಗುರುತು ಸಿಗದಂತಾಗಿದೆ ಭಾರತೀಯ ಸೇನೆ, ಹಾಗೂ ಚಮೋಲಿ ಜಿಲ್ಲಾಡಳಿತ ಎನ್.ಡಿ.ಆರ್.ಎಫ್ ಮತ್ತು ಎಸ್.ಡಿ.ಆರ್.ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಚುರುಕುಗೊಂಡಿದ್ದು.ಹೆಲಿಕಾಪ್ಟರ್ ಪತನಗೊಂಡ ಮಳೆ ಮತ್ತು ಮಂಜಿನಿಂದ ಕೂಡಿತ್ತು ಎಂದು ತಿಳಿದು ಬಂದಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಟ್ರಾನ್ಸ್ ಭಾರತ್ ಏವಿಯೇಷನ್ ಸಂಸ್ಥೆಯ ಎಲ್ಲಾ ಹೆಲಿಕಾಪ್ಟರ್ಗಳ ಹಾರಾಟ ಸ್ಥಗಿತ ಮೃತರ ಕುಟುಂಬಸ್ಥರು ಉತ್ತರಾಖಂಡ್ ಗೆ ಪ್ರಯಾಣ ಬೆಳೆಸಿದ್ದಾರೆ ಶಾಸಕ ಡಾ.ರಂಗನಾಥ್ ಹಾಗೂ ಸಂಸದ ಡಾ.ಸಿ.ಎನ್ ಮಂಜುನಾಥ್ ಮೃತರಿಗೆ ಸಂತಾಪ ಸೂಚಿಸಿದ್ದಾರೆ ಮೃತದೇಹಗಳ ಗುರುತು ಪತ್ತೆಯಾದ ಬಳಿಕ ರಾಜ್ಯಕ್ಕೆ ತರಲಾಗುವುದು ಎಂದು ತಿಳಿದುಬಂದಿದೆ @publicnewskunigal