ರೈತರ ಕೊಳವೆ ಬಾವಿಗಳಿಂದ ಕೆಬಲ್ ವೈಯರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಪ್ರಕರಣ ದಾಖಲು!
ಕುಣಿಗಲ್ ಪೊಲೀಸ್ ಠಾಣೆ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ರೈತರ ಪಂಪ್ ಸೆಟ್ ಗಳಿಂದ ಕೆಬಲ್ ವೈಯರ್ ಕಳ್ಳತನ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಕುಣಿಗಲ್ ಪೊಲೀಸರು ಯಶಸ್ವಿಯಾಗಿದ್ದಾರೆ ಬಂಧಿತ ಆರೋಪಿಗಳನ್ನು ಮಂಡ್ಯ ಜಿಲ್ಲೆಯ ಸಿದ್ದಯ್ಯನ ಕೊಪ್ಪಲು ನಿವಾಸಿ ಸಿದ್ದರಾಮು ಹಾಗೂ ಬೇವಿನಕೊಪ್ಪಲು ನಿವಾಸಿ ವೆಂಕಟೇಶ್ ಎಂದು ತಿಳಿದು ಬಂದಿದೆ ಬಂಧಿತ ಆರೋಪಿಗಳು ಕೊತ್ತಗೆರೆ ಹೊಬಳಿ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರಾತ್ರಿ ವೇಳೆ ರೈತರ ಕೊಳವೆ ಬಾವಿಗಳಿಂದ ಕೆಬಲ್ ಕಳ್ಳತನ ಮಾಡಿ ಬಳಿಕ ಕದ್ದ ಕೆಬಲ್ ವೈಯರ್ ತಂದು ಕೆಂಗೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ @publicnewskunigal