ಗಂಡ ಹೆಂಡತಿಯ ನಡುವೆ ಜಗಳ ಬಿಡಿಸಲು ಹೊದ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ ತಂದೆ ಆರೋಪಿ ಪೊಲೀಸರ ವಶಕ್ಕೆ!
ತಂದೆಯೆ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಚೌಡನಾಯಕನಪಾಳ್ಯ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ,ಆರೋಪಿ ನಂಜೆಗೌಡ ಮಧ್ಯ ವ್ಯಸನಿಯಾಗಿದ್ದು ಪತ್ನಿಯೊಂದಿಗೆ ಆಗಾಗ ಜಗಳವಾಡುತ್ತಿದ್ದ ಇದೆ ಕಾರಣಕ್ಕೆ ಈ ಹಿಂದೆ ಪತ್ನಿ ರಂಜಿತಾಳಿಗೆ ಮಾರಣಾಂತಿಕ ಹಲ್ಲೆ ನಡೆಸಿ ಜೈಲು ಸೇರಿದ್ದ ಆರೋಪಿ ಇತ್ತಿಚೆಗೆ ಬಿಡುಗಡೆಯಾಗಿದ್ದ ನಂಜೆಗೌಡ ಭಾನುವಾರ ಬೆಳಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ ಜಗಳ ತಾರಕ್ಕೆರಿ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದನ್ನು ಗಮನಿಸಿದ ಮಗ ಸುನೀಲ್ (16) ಮಧ್ಯ ಪ್ರವೇಶಿಸಿ ಜಗಳ ಬಿಡಿಸಲು ಮುಂದಾಗಿದ್ದಾನೆ ಈ ವೇಳೆ ಕೊಪಗೊಂಡ ನಂಜೆಗೌಡ ಪತ್ನಿಯನ್ನು ಮನೆಯಿಂದ ಆಚೆಗೆ ತಳ್ಳಿ ಬಾಗಿಲು ಹಾಕಿಕೊಂಡು ಮನೆಯಲ್ಲಿದ್ದ ಆರೆಯಿಂದ ಮಗನ ಮೇಲೆ ಮನ ಬಂದಂತೆ ಹಲ್ಲೆ ನಡೆಸಿ ಕೊಲೆಗೈದು ವಿಕೃತಿ ಮೆರೆದಿದ್ದಾನೆ ಕುಣಿಗಲ್ ಪಟ್ಟಣದ ಸ್ಟೆಲ್ಲಾಮೇರಿಸ್ ಶಾಲೆಯಲ್ಲಿ ಹತ್ತನೆ ತರಗತಿ ಒದುತ್ತಿದ್ದ ಸುನೀಲ್ ತಂದೆಯಿಂದಲೆ ಕೊಲೆಯಾಗಿರುವುದು ಸ್ಥಳಿಯರ ಹಾಗೂ ಕುಟುಂಬಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕಾಗಮಿಸಿದ ಕುಣಿಗಲ್ ಸಿಪಿಐ ಮಾಧ್ಯನಾಯಕ್ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ @publicnewskunigal