ಪೌತಿ ಖಾತೆ ಮಾಡಲು ಲಂಚ ಪಡೆದ ಪ್ರಕರಣ ಆರೋಪಿ ಗ್ರಾಮ ಲೆಕ್ಕಾಧಿಕಾರಿಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಇಪ್ಪತ್ತು ಸಾವಿರ ದಂಡ ವಿಧಿಸಿ ಆದೇಶಿಸಿದ ನ್ಯಾಯಲಯ!
ಕುಣಿಗಲ್ ತಾಲೂಕಿನ ಇಪ್ಪಾಡಿ ಗ್ರಾಮದ ವಾಸಿ ಐ.ಜಿ ಸತೀಶ್ ರವರ ತಾಯಿ ಮತ್ತು ದೊಡ್ಡಪ್ಪನ ಹೆಸರಿಗೆ ಇಪ್ಪಾಡಿ ಗ್ರಾಮದಲ್ಲಿದ್ದ ಸರ್ವೆ ನಂಬರ್ 69/5 ರ ಜಮೀನಿನ ಪೌತಿ ಖಾತೆ ಮಾಡಿಕೊಡಲು ಇಪ್ಪಾಡಿ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಯಾಗಿದ್ದ ಕೆ.ಬಿ ಲೋಕೇಶ್ ರವರು ಇಪ್ಪತ್ತು ಸಾವಿರ ರೂಪಾಯಿ ಲಂಚಕ್ಕೆ ಒತ್ತಾಯಿಸಿ ಮುಂಗಡವಾಗಿ 10 ಸಾವಿರ ರೂಗಳನ್ನು ಪಡೆದು ಉಳಿಕೆ ಹತ್ತು ಸಾವಿರ ರೂಪಾಯಿ ಕೊಡುವಂತೆ ಒತ್ತಾಯಿಸಿದ್ದರು ಈ ಸಂಬಂಧ ತುಮಕೂರು ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಠಾಣೆಗೆ ಸತೀಶ್ ರವರು ದೂರು ನೀಡಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿಕೊಂಡ ಭ್ರಷ್ಟಾಚಾರ ನಿಗ್ರಹದಳದ ಪೊಲೀಸರು ಡಿವೈಎಸ್ಪಿ ಮಲ್ಲಿಕಾರ್ಜುನ್ ಚುಕ್ಕಿ ರವರ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ದಿನಾಂಕ 07/01/2021 ರಂದು ಕುಣಿಗಲ್ ಪಟ್ಟಣದಲ್ಲಿರುವ ಮನಿಕಾಳಯ್ಯ ಬಿಲ್ಡಿಂಗ್ ನ ಮೊದಲ ಮಹಡಿಯ ರೂಮಿನಲ್ಲಿ ದೂರುದಾರರಿಂದ ಹತ್ತು ಸಾವಿರ ಲಂಚದ ಹಣ ಸ್ವೀಕರಿಸುತ್ತಿದ್ದ ಆರೋಪಿ ಗ್ರಾಮ ಲೆಕ್ಕಾಧಿಕಾರಿ ಕೆ.ಬಿ ಲೋಕೇಶ್ ನನ್ನು ಬ್ರಷ್ಟಾಚಾರ ನಿಗ್ರಹದಳದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದರು ಇದಾದ ಬಳಿಕ ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ವಿಜಯಲಕ್ಷ್ಮಿ ವೈ.ಸತ್ಯನಾರಾಯಣ ರವರು ಪ್ರಕರಣದ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿರುತ್ತಾರೆ ಈ ಸಂಬಂಧ ಅಂದಿನ ಗ್ರಾಮಲೆಕ್ಕಾಧಿಕಾರಿ ಯಾಗಿದ್ದ ಆರೋಪಿ ಕೆ.ಬಿ ಲೋಕೇಶ್ ಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ಇಪ್ಪತ್ತು ಸಾವಿರ ದಂಡ ವಿಧಿಸಲಾಗಿದ್ದು ದಂಡ ಪಾವತಿಸಲು ವಿಫಲವಾದಲ್ಲಿ ಆರು ತಿಂಗಳ ಸಾಧಾರಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿ 7ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯ ತುಮಕೂರು ರವರು ಆದೇಶಿಸಿದ್ದಾರೆ ಈ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆಯ ಪರವಾಗಿ ಆರ್.ಪಿ ಪ್ರಕಾಶ್ ವಿಶೇಷ ಸಾರ್ವಜನಿಕ ಅಭಿಯೋಜಕರು ಕರ್ನಾಟಕ ಲೋಕಾಯುಕ್ತ ತುಮಕೂರು ರವರು ವಾದ ಮಂಡಿಸಿರುತ್ತಾರೆ @publicnewskunigal