ಡಿ,ದೇವರಾಜ ಅರಸು ರವರಿಗೆ ಸರಿ ಸಮನಾದ ರಾಜಕಾರಣಿ ಕರ್ನಾಟಕ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಚಿಂತಕ ಜಿ,ಕೆ ನಾಗಣ್ಣ!
ಕುಣಿಗಲ್ ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ದಿವಂಗತ ಡಿ,ದೇವರಾಜ ಅರಸು ರವರ 110ನೇ ದಿನಾಚರಣೆಯನ್ನು ತಾಲ್ಲೂಕು ಆಡಳಿತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಅಮ್ಮಿಕೋಳ್ಳಲಾಗಿತ್ತು ಈ ವೇಳೆ ಡಿ,ದೇವರಾಜ ಅರಸು ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಬಳಿಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಈ ವೇಳೆ ಚಿಂತಕ ಜಿ,ಕೆ ನಾಗಣ್ಣ ಮಾತನಾಡಿ ದಿವಂಗತ ಮಾಜಿ ಮುಖ್ಯಮಂತ್ರಿಯಾಗಿದ್ದ ಡಿ,ದೇವರಾಜ ಅರಸು ರವರಿಗೆ ಸರಿ ಸಮನಾದ ರಾಜಕಾರಣಿ ಕರ್ನಾಟಕ ರಾಜ್ಯದಲ್ಲಿ ಮತ್ತೊಬ್ಬರಿಲ್ಲ ಈ ರಾಜ್ಯಕ್ಕೆ ಅವರ ಕೊಡುಗೆ ಅಪಾರವಾದದ್ದು ನಿಜಲಿಂಗಪ್ಪ ಸರ್ಕಾರದ ಅವಧಿಯಲ್ಲಿ ಅನೇಕ ಜವಾಬ್ದಾರಿಗಳನ್ನು ನಿಭಾಯಿಸಿದ್ದ ಅವರು ರಾಜಕೀಯ ಬದಲಾವಣೆಯ ಪರ್ವದಿಂದಾಗಿ 1972ರಲ್ಲಿ ಮುಖ್ಯ ಮಂತ್ರಿಯಾಗಿದ್ದ ಅವರು 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮುರು ನಾಮಕರಣ ಮಾಡುವಲ್ಲಿ ಅರಸುರವರ ಪಾತ್ರ
ಮಾಹತ್ವವಾದದ್ದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ನಾವು ದೇವರಾಜು ಅರಸು ರವರನ್ನು ಎಂದಿಗು ಮರೆಯುವಂತಿಲ್ಲ ಹಿಂದುಳಿದ ವರ್ಗ ಹಾಗೂ ದಮನಿತರ ಮೇಲಿನ ಅನಿಷ್ಟ ಪದ್ದತಿಗಳನ್ನು ನಿರ್ಮೂಲನೆ ಮಾಡುವಲ್ಲಿ ಮಾಹತ್ವದ ಪಾತ್ರ ಅವರದ್ದಾಗಿದೆ ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜಮೀನ್ದಾರಿ ಪದ್ದತಿಯಲ್ಲಿದ್ದ ಭೂಮಿಯನ್ನು ಉಳುವವನೆ ಭೂಮಿಯ ಒಡೆಯ ಎಂದು ಬಡ ಬಗ್ಗರಿಗೆ ಭೂಮಿ ಹಂಚಿಕೆ ಹಾಗೂ ಖುಣಭಾರ ನೀತಿ.ವಿದ್ಯಾವಂತ ನಿರುದ್ಯೋಗಿಗಳಿಗೆ ಧನ ಸಹಾಯ ಯೋಜನೆಗೆ ಜಾರಿಗೆ ತಂದವರಲ್ಲಿ ಅರಸರು ಪ್ರಥಮದಲ್ವಿದ್ದಾರೆ ಅವರ ದೂರದೃಷ್ಟಿ ಕಾರಣದಿಂದ ಇಂದು ಅಹಿಂದ ವರ್ಗ ಬದುಕು ಕಟ್ಟಿಕೊಂಡದ್ದು ಎಂದರು ಇದೆ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಯು ರಶ್ಮಿ,ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿಯ ವಸಂತ್ ಕುಮಾರ್,ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಮೇಶ್,ಬಿ.ಸಿ.ಎಂ ಇಲಾಖೆಯ ಸಹಾಯಕ ನಿರ್ದೇಶಕ ವೇದಮೂರ್ತಿ,ಪುರಸಭೆ ಸಿಇಒ ಕೃಷ್ಣ,ಪುರಸಭೆಯ ಉಪಾಧ್ಯಕ್ಷ ಮಲ್ಲಿಪಾಳ್ಯ ಶ್ರೀನಿವಾಸ್,ಚಿಂತಕ ಜಿ.ಕೆ ನಾಗಣ್ಣ, ಸೇರಿದಂತೆ ಸಮುದಾಯದ ಮುಖಂಡರು ಹಾಗೂ ಅಧಿಕಾರಿಗಳು ಮಕ್ಕಳು ಉಪಸ್ಥಿತರಿದ್ಧರು @publicnewskunigal