ಕಮರ್ಷಿಯಲ್ ಹೆಸರಿನಲ್ಲಿ ಹೋಟೆಲ್ ಮಾಲೀಕನಿಗೆ ಹಣಕ್ಕೆ ಬೇಡಿಕೆ ಆರೋಪ ಖಾಸಗಿ ಸುದ್ದಿ ವಾಹಿನಿಯ ಸಿಇಒ ಹಾಗೂ ಎಂ.ಡಿ ಬಂಧನ!
ಕುಣಿಗಲ್;-ಹೋಟೆಲ್ ಮಾಲೀಕನಿಗೆ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಹಿನ್ನೆಲೆ ಖಾಸಗಿ ಯುಟ್ಯೂಬ್ ಚಾನೆಲ್ ಪ್ರಜಾಶಕ್ತಿ ಸುದ್ದಿವಾಹಿನಿಯ ಸಿಇಒ ಹಾಗೂ ಎಂ.ಡಿ ಇಬ್ಬರನ್ನು ಕುಣಿಗಲ್ ತಾಲ್ಲೂಕಿನ ಅಮೃತೂರು ಪೊಲೀಸರು ಬಂಧಿಸಿರುವ ಪ್ರಕರಣ ಶುಕ್ರವಾರ ನಡೆದಿದೆ ಕುಣಿಗಲ್ ತಾಲ್ಲೂಕಿನ ಬೆಂಗಳೂರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 75ರ ನಾಗೇಗೌಡನ ಪಾಳ್ಯ ಬಳಿ ಇರುವ ತಾಜ್ ರೆಸ್ಟೋರೆಂಟ್ ಹೋಟೆಲ್ ಮಾಲೀಕನಿಗೆ ನಿಮ್ಮ ಹೋಟೆಲ್ ನಲ್ಲಿ ಅಕ್ರಮವಾಗಿ ಜಿಂಕೆಮಾಂಸ ಬೆರೆಸಿ ಅಡುಗೆ ತಯಾರಿಸಿ
ಮಾರಾಟ ಮಾಡಲಾಗುತ್ತಿದೆ ಈ ಬಗ್ಗೆ ನಮಗೆ ಸ್ಥಳೀಯರಿಂದ ದೂರು ಬಂದಿದ್ದು ನಾವು ಗುಪ್ತ ಮಾಹಿತಿ ಸಂಗ್ರಹಿಸಿದ್ದೇವೆ ಈ ಬಗ್ಗೆ ರಾಜ್ಯದ್ಯಂತ ಸುದ್ದಿ ಬಿತ್ತರಿಸಲಾಗುತ್ತದೆ ಎಂದು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಅಡಿಯಲ್ಲಿ ರೆಸ್ಟೋರೆಂಟ್ ಮಾಲೀಕ ಜಿಯಾವುಲ್ಲಾ ನೀಡಿದ ದೂರಿನ ಅನ್ವಯ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಅಮೃತೂರು ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ ಇತ್ತೀಚೆಗೆ ತಾಲ್ಲೂಕಿನಲ್ಲಿ ಇಂತಹ ಘಟನೆಗಳು ಹೆಚ್ಚುತ್ತಿದ್ದು ಪೊಲೀಸರಿಗೆ ದೂರು ನೀಡಿದಾಗ ಮಾತ್ರ ಪ್ರಕರಣಗಳು ಬೆಳಕಿಗೆ ಬರುತ್ತಿವೆ @publicnewskunigal