ಗ್ರಾಮ ಪಂಚಾಯಿತಿ ಅಧ್ಯಕ್ಷನ ವಿರುದ್ದ ಭ್ರಷ್ಟಾಚಾರ ಆರೋಪ ಸಾಬೀತು ಆದ ಹಿನ್ನೆಲೆ ಅಧ್ಯಕ್ಷ ಸ್ಥಾನವನ್ನು ಅನರ್ಹಗೋಳಿಸಿ ಆರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ಆದೇಶಿಸಿಲಾಗಿದೆ!
ಕುಣಿಗಲ್ ತಾಲ್ಲೂಕು ಹುತ್ರಿದುರ್ಗ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷರಾದ ಹೆಚ್.ಜಿ ರಂಗಯ್ಯ ರವರು 03/02/2023 ರಂದು ಅಧ್ಯಕ್ಷರಾಗಿ ಆಯ್ಕೆಯಾಗಿ 06/03/2023 ರಂದು ರಾಜೀನಾಮೆ ನೀಡಿದ್ದು ರಾಜೀನಾಮೆ ನೀಡಿದ ನಂತರ ಅಂಗೀಕಾರವಾಗುವ ಅವಧಿಯಲ್ಲಿ ಹದಿಮೂರುಲಕ್ಷ ಅಂಗೀಕಾರವಾದ ನಂತರ ಒಂದುಲಕ್ಷ 15ನೇ ಹಣಕಾಸು ಯೋಜನೆಯ ನಿಧಿ- 1ರಲ್ಲಿ ಎರಡುಲಕ್ಷ ಮತ್ತು ಬೇನಾಮಿ ಹೆಸರುಗಳಲ್ಲಿ ಸುಮಾರು ಒಂದುಲಕ್ಷದ ನಲವತ್ತೆಂಟು ಸಾವಿರ ಹಣವನ್ನು ಪಿಡಿಒ ಹಾಗೂ ಅಧ್ಯಕ್ಷ ಸೇರಿ ಡ್ರಾ ಮಾಡಿದ್ದು ಸದರಿ ದೂರನ್ನು ಪ್ರಾದೇಶಿಕ ಆಯುಕ್ತರು ಬೆಂಗಳೂರು ವಿಭಾಗ ಇವರು ವಿಚಾರಣೆ ನಡೆಸಿದ್ದು ಸದರಿ ವ್ಯಕ್ತಿ ವಿಚಾರಣೆಗೆ ಹಾಜರಾಗದೆ ಲಿಖಿತ ವಿವರಣೆ ನೀಡದ ಕಾರಣ ಹಾಗೂ 15 ನೇ ಹಣಕಾಸು ಯೋಜನೆಯ ಖಾತೆಗೆ ಸಂಬಂಧಿಸಿದಂತೆ ನಗದು ಪುಸ್ತಕದಲ್ಲಿದ್ದ 27.71.196 ರೂಗಳ ವೆಚ್ಚಕ್ಕೆ ಯಾವುದೆ ಬಿಲ್ ವೋಚರ್ ಲೆಕ್ಕವನ್ನು ತನಿಖೆಗೆ ಹಾಜರುಪಡಿಸದ ಕಾರಣ 2022 ನೇ ಸಾಲಿನ 15 ನೇ ಹಣಕಾಸು ಯೋಜನೆಯಡಿ ನಿಧಿ-1ಹಾಗೂ ಬೇರೆ ಬೇರೆ ಬ್ಯಾಂಕ್ ಖಾತೆಯಲ್ಲಿ ಸುಮಾರು 18 ಲಕ್ಷ ಅವ್ಯವಹಾರದಲ್ಲಿ ಭಾಗಿಯಾಗಿ ಹಣ ದುರುಪಯೋಗ ಆರೋಪವು ಸಾಬೀತಾದ ಹಿನ್ನೆಲೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 43 (ಎ)(2) ರಅನ್ವಯ ಹೆಚ್.ಜಿ ರಂಗಯ್ಯ ರವರನ್ನು ಸದರಿ ಅಧ್ಯಕ್ಷ ಹಾಗೂ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಿ ಆರು ವರ್ಷಗಳ ಕಾಲ ಚುನಾವಣೆಗೆ ನಿಲ್ಲದಂತೆ ಪೀಠಾಧಿಕಾರಿಗಳು ಆದೇಶಿಸಿದ್ದಾರೆ@publicnewskunigal