ಡಿ.ಹೊಸಹಳ್ಳಿ ಗ್ರಾಮದಲ್ಲಿ ಅಕಾಲಿಕ ಮಳೆಗೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿ ಮಹಿಳೆಗೆ ಗಂಭೀರ ಗಾಯ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಡಿ.ಹೊಸಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಸುರಿದ ಆಕಾಲಿಕ ಬಿರುಗಾಳಿ ಮಳೆಯ ಕಾರಣದಿಂದ ರಾಜ್ಯ ಹೆದ್ದಾರಿ 33ರ ರಸ್ತೆ ಬದಿಯಲ್ಲಿದ್ದ ಹಲವು ಮರಗಳು ಮುರಿದು ಬಿದ್ದು ಗ್ರಾಮದ ವರಲಕ್ಷ್ಮಿ ಎಂಬುವವರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಶೀಟ್ ಮುರಿದು ಮನೆಯಲ್ಲಿದ್ದ ವರಲಕ್ಷ್ಮಿ (36) ತಲೆಗೆ ಗಂಭೀರ ಗಾಯಗಳಾಗಿದ್ದು ಹುಲಿಯೂರುದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ಗೆ ಕರೆದೊಯ್ಯಲಾಗಿದೆ ಹಾಗೂ ಗ್ರಾಮದ ಮಂಜುಳ (50) ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಮೇಲೆ ಮರದ ಕೊಂಬೆಗಳು ಬಿದ್ದಿರುವ ಕಾರಣ ಶಾಲೆಯ ಕಾಂಫೌಂಡ್ ಗೋಡೆ ಮತ್ತು ಗೇಟ್ ಗೆ ಹಾನಿಯಾಗಿದ್ದು ಗ್ರಾಮದಲ್ಲಿ ಮಂಜುನಾಥ,ಸಂಜಿವಯ್ಯ, ಗುರುರಾಜ್,ನಂಜಪ್ಪ, ರಾಮಚಂದ್ರಪ್ಪ,ರಾಜಣ್ಣ,ಭಾರತಿ ಗೋಲ್ಲರಹಟ್ಟಿ ಗ್ರಾಮದ ಶಿವಲಿಂಗಮ್ಮ ಎಂಬುವವರ ಮನೆಗಳ ಮೇಲ್ಛಾವಣಿಯೆ ಬಿರುಗಾಳಿಮಳೆಗೆ ಹಾರಿಹೊಗಿದೆ ಇದಲ್ಲದೆ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ ನೂರಾರು ಮರಗಳು ನೆಲಕಚ್ಚಿವೆ ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ,ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಹುಲಿಯೂರುದುರ್ಗ ಉಪ ತಹಶೀಲ್ದಾರ್ ಜಗದೀಶ್ ಬೇಟಿ ನೀಡಿ ಡಿ.ಹೊಸಹಳ್ಳಿ ಗ್ರಾಮದಲ್ಲಿ ಪರಿಶೀಲಿಸಿ ಗ್ರಾಮಸ್ಥರಿಂದ ಮಾಹಿತಿ ಪಡೆದಿದ್ದಾರೆ,ಇನ್ನೂ ಕಳೆದ ವರ್ಷ ಇದೆ ರೀತಿ ಮಂಗಾರು ಪ್ರಾರಂಭವಾದಗ ಬಿರುಗಾಳಿ ಮಳೆಯ ಕಾರಣದಿಂದ ಹಲವು ಮನೆಗಳು ಹಾನಿಯಾಗಿದ್ದವು ಆದರೆ ಇದುವರಿಗೆ ಯಾವುದೆ ಪರಿಹಾರ ಮಾತ್ರ ಸಿಕ್ಕಿಲ್ಲ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳೆದ ವರ್ಷ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಮನವಿ ಸಲ್ಲಿಸಿದರು ಇದುವರೆಗೆ ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಪ್ರಾಣ ಹಾನಿಯಾದರೆ ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಉಪ ತಹಶೀಲ್ದಾರ್ ಜಗದೀಶ್ ಮುಂದೆ ಅಸಮಾಧಾನ ಹೊರ ಹಾಕಿದರು @publicnewskunigal