ಯಲಿಯೂರು ಕೆರೆಯಲ್ಲಿ ಈಜಲು ತೆರಳಿದ್ದ ಎಸ್,ಎಸ್,ಎಲ್,ಸಿ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವು!
ಕುಣಿಗಲ್ ತಾಲ್ಲೂಕಿನ ಯಲಿಯೂರು ಗ್ರಾಮದ ಕೆರೆಯಲ್ಲಿ ಸ್ನೇಹಿತನೊಂದಿಗೆ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಎಸ್,ಎಸ್,ಎಲ್,ಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಜೆ ನಡೆದಿದೆ ಗ್ರಾಮದ ಚಂದ್ರಶೇಖರ್ ಎಂಬುವರ ಮಗ ಕುಶಾಲ್ (16) ಮೃತಪಟ್ಟ ವಿದ್ಯಾರ್ಥಿ ಗ್ರಾಮದ ಮಾರುತಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುತ್ತಿದ್ದ ಕುಶಾಲ್ ಪರೀಕ್ಷೆ ಇದ್ದ ಕಾರಣ ಭಾನುವಾರ ಶಾಲೆಯಲ್ಲಿ ನಡೆದ ವಿಷೇಶ ತರಗತಿಯಲ್ಲಿ ಭಾಗಿಯಾಗಿ ಸಂಜೆ ಮನೆಗೆ ಬಂದು ಮನೆಗೆಲಸ ಮಾಡಿ ನಂತರ ಸ್ನೇಹಿತನೊಂದಿಗೆ ಗ್ರಾಮದ ಕೆರೆಗೆ ಈಜಲು ತೆರಳಿದ್ದಾನೆ ಈವೇಳೆ ನೀರಿನಲ್ಲಿ ಆಳವಾಗಿರುವ ಗುಂಡಿಯಲ್ಲಿ ಸಿಲುಕಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ ಜೋತೆಯಲ್ಲಿದ್ದ ಸ್ನೇಹಿತ ಹಾಗೂ ಸ್ಥಳಿಯ ಕುರಿಗಾಹಿಗಳು ರಕ್ಷಿಸಲು ಪ್ರಯತ್ನ ಪಟ್ಟರು ಸಾಧ್ಯವಾಗಿಲ್ಲ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಧಳದ ಅಧಿಕಾರಿಗಳು ಏಳುಗಂಟೆಯವರೆಗೆ ಕೆರೆಯಲ್ಲಿ ಶೋಧಕಾರ್ಯ ನಡೆಸಿದರು ಬಾಲಕನ ಮೃತದೇಹ ಪತ್ತೆಯಾಗಿಲ್ಲ ಇನ್ನೂ ಕೆರೆಯಲ್ಲಿ ಅಕ್ರಮವಾಗಿ ಎಲ್ಲೆಂದರಲ್ಲಿ ಮಣ್ಣು ತೆಗೆಯಲು ಬೃಹದಾಕಾರದ ಗುಂಡಿಗಳನ್ನು ತೆಗೆಲಾಗಿದ್ದು ಗುಂಡಿಯಲ್ಲಿ ಮೀನುಗಾರರು ಹಾಕಿರುವ ಬಲೆ ಹಾಗೂ ಮುಳ್ಳಿನ ಮದ್ಯೆ ಬಾಲಕ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು ಸೋಮವಾರವು ಶೋಧಕಾರ್ಯ ಮುಂದುವರಿದಿದೆ ಇದ್ದೊಬ್ಬ ಮಗನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು @publicnewskunigal