ಇಂದಿನಿಂದ ಐದು ದಿನಗಳವರೆಗೆ ಇತಿಹಾಸ ಪ್ರಸಿದ್ಧ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಉಜ್ಜನಿ ಶ್ರೀ ಚೌಡೇಶ್ವರಿ ಅಮ್ಮನವರ ಜಾತ್ರಮಹೊತ್ಸವ ಇಂದಿನಿಂದ ಐದು ದಿನಗಳ ವರೆಗೆ ನಡೆಯಲಿದೆ ಸೋಮವಾರ ಜಾತ್ರಮಹೊತ್ಸವದ ಪ್ರಯುಕ್ತ ದೇವಿಗೆ ವಿಷೇಶ ಹೂವಿನ ಅಲಂಕಾರ ಸೇರಿದಂತೆ ದೇವಾಲಯದ ಅವರಣದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಹೊಮ ಅವನಾದಿಗಳು ಜರುಗಿವು ಏಪ್ರಿಲ್ ನಾಲ್ಕರವರೆಗೆ ನಡೆಯಲಿರುವ ಜಾತ್ರಮಹೊತ್ಸವದಲ್ಲಿ ಕುಣಿಗಲ್ ಶಾಸಕ ಡಾ.ರಂಗನಾಥ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದ ಡಾ.ಸಿ.ಎನ್ ಮಂಜುನಾಥ್ ಭಾಗಿಯಾಗಲಿದ್ದಾರೆ ಮಂಗಳವಾರ ಸಂಜೆ ದೇವಿಯ ಅಗ್ನಿ ಕೊಂಡೊತ್ಸವಕ್ಕೆ ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತರು ಸೌದೆ ಸಮರ್ಪಿಸಲಿದ್ದಾರೆ ಬುಧವಾರ ಮುಂಜಾನೆ ದೇವಿಯು ಅಗ್ನಿಕೊಂಡೊ ಪ್ರವೇಶ ಮಾಡಲಿದ್ದು ಸಂಜೆ ಬ್ರಹ್ಮರಥೋತ್ಸವ ಜರುಗಲಿದೆ ದೇವಿಯ ಅಗ್ನಿಕೊಂಡೋತ್ಸವ ಕಣ್ತುಂಭಿಕೊಳ್ಳಲು ರಾಜ್ಯದ ಮೂಲೆ ಮೂಲೆ ಯಿಂದ ಭಕ್ತರು ಆಗಮಿಸಲಿದ್ದಾರೆ ದಲಿತರು ಜನಿವಾರ ಧರಿಸಿ ಬ್ರಾಹ್ಮಣರಾಗಿ ದೀಕ್ಷೆ ಪಡೆದು ಕಠಿಣ ವ್ರತ ಕೈಗೊಂಡು ಜಾತ್ರಮಹೊತ್ಸವದಲ್ಲಿ ಭಾಗಿಯಾಗುವುದು ವಿಷೇಶ ಜಾತ್ರಮಹೊತ್ಸವಕ್ಕೆ ತಾಲ್ಲೂಕು ಆಡಳಿತದ ವತಿಯಿಂದ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ದೇವಿಯ ದರ್ಶನ ಪಡೆಯಲು ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ತಹಶೀಲ್ದಾರ್ ಕರಿಯನಾಯಕ್ ತಿಳಿಸಿದ್ದಾರೆ ಜಾತ್ರಮಹೊತ್ಸವದ ಭದ್ರತೆಗಾಗಿ ಪೊಲೀಸರು ಹಾಗೂ ಹೊಂಗಾಡ್ ಸೆರಿದಂತೆ ನೂರ ಐವತ್ತು ಮಂದಿಯನ್ನು ನಿಯೊಜಿಸಲಾಗಿದೆ ಜಾತ್ರಮಹೊತ್ಸವದಲ್ಲಿ ಲಕ್ಷಾಂತರ ಮಂದಿ ಭಾಗಿಯಾಗುವ ನಿರೀಕ್ಷೆ ಇದ್ದು ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ದತೆ ಮಾಡಲಾಗಿದೆ @publicnewskunigal