ಕುಡಿದ ಮತ್ತಿನಲ್ಲಿ ಚಿಕ್ಕಮ್ಮನ ಮೇಲೆ ಮಾರಣಾಂತಿಕ ಹಲ್ಲೆ ಆರೋಪಿ ಕೊಲೆಯಲ್ಲಿ ಅಂತ್ಯ ಪ್ರಕರಣ ದಾಖಲು!
ಕುಣಿಗಲ್ ಹುಲಿಯೂರುದುರ್ಗ ತಾಲೂಕಿನ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಮದ್ಯ ವ್ಯಸನಿಯೊಬ್ಬ ಕ್ಷುಲ್ಲಕ ಕಾರಣಕ್ಕೆ ಗ್ರಾಮದ ತನ್ನ ಚಿಕ್ಕಮ್ಮನ ಮೇಲೆ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಕಾಳಮ್ಮ ಎಂಬುವವರನ್ನು ಸ್ಥಳೀಯರು ಕುಣಿಗಲ್ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.ಈ ಘಟನೆಯಿಂದ ಕೋಪಗೊಂಡ ಕಾಳಮ್ಮನ ಮಗ ಕುಮಾರ್, ಕೊಲೆಯಾದ ಮಂಜುನಾಥನ ಅಣ್ಣ ಉಮೇಶ್ ಮತ್ತು ರಂಗಸ್ವಾಮಿ ಎಂಬುವವರು ಸೇರಿ ಮಂಜುನಾಥನ ಮೇಲೆ ದೊಣ್ಣೆ, ಗುದ್ದಲಿಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಈ ದಾಳಿಯಲ್ಲಿ ಮಂಜುನಾಥ್ (35) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.ಮಂಜುನಾಥನ ತಂದೆ ಚಿಕ್ಕರಂಗಯ್ಯ ನೀಡಿರುವ ದೂರಿನ ಹಿನ್ನೆಲೆಯಲ್ಲಿ ಮೂವರ ಮೇಲೆ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ. ಶನಿವಾರ ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರ ತಂಡ ಹಾಗೂ ತುಮಕೂರು ಜಿಲ್ಲಾ ಪೊಲೀಸ್ ಉಪ ಅಧೀಕ್ಷಕ ಗೋಪಾಲ್, ಅಮೃತೂರು ವೃತ್ತ ನಿರೀಕ್ಷಕ ನವೀನ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. @publicnewskunigal