ಪಟ್ಟಣದಲ್ಲಿ ವಾಹನ ತಪಾಸಣೆಯ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಗಿ ಕೆಳಗೆ ಬಿದ್ದ ಬೈಕ್ ಸವಾರ ಕರ್ತವ್ಯ ನಿರತ ಪಿಎಸ್ಐ ಮೇಲೆ ಹಲ್ಲೆಗೆ ಯತ್ನ!
ಕುಣಿಗಲ್ ಪಟ್ಟಣದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಗುರುವಾರ ಮಧ್ಯಾಹ್ನ ಪೊಲೀಸರು ವಾಹನ ತಪಾಸಣೆಯ ವೇಳೆ ಮೊಬೈಲ್ ಪೋನ್ ನಲ್ಲಿ ಮಾತನಾಡುತ್ತ ಬಂದ ಬೈಕ್ ಸವಾರನ್ನು ಕರ್ತವ್ಯ ನಿರತ ಪ್ರೊಬೆಸನರಿ ಪಿಎಸ್ಐ ತಡೆದಿದ್ದಾರೆ ಈ ವೇಳೆ ಪೊಲೀಸರಿಂದ ತಪ್ಪಿಸಿಕೊಳ್ಳುಲು ಬರದಲ್ಲಿ ವಾಹನ ಸವಾರ ಬೈಕನ್ನು ಅತಿ ವೇಗವಾಗಿ ತೆಗೆದುಕೊಂಡು ಹೊಗುತ್ತಿದ್ದ ವೇಳೆ ಬೈಕ್ ಸವಾರನ ಅನುಚಿತ ವರ್ತನೆ ಕಂಡ ಪಿಎಸ್ಐ ಬೈಕ್ ಸವಾರನತ್ತ ಲಾಠಿ ಬಿಸಿದ್ದಾರೆ, ಈ ವೇಳೆ ಬೈಕ್ ಸವಾರ ಪೊಲೀಸರಿಂದ ತಪ್ಪಿಸಿಕೊಳ್ಳಲು ಬರದಲ್ಲಿ ವೇಗವಾಗಿ ಹೊಗಿ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದ್ದಾನೆ ಈ ವೇಳೆ ಗುಂಪು ಸೇರಿದ ಕೆಲವರು ಕರ್ತವ್ಯ ನಿರ್ವಹಿಸುತ್ತಿದ್ದ ಪಿಎಸ್ಐ ರವರೊಂದಿಗೆ ವಾಗ್ವಾದಕ್ಕೆ ಇಳಿದು ಪಿಎಸ್ಐ ರವರನ್ನು ಎಳೆದಾಡಿದ್ದು ಹಲ್ಲೆಗೆ ಯತ್ನಿಸಿದ್ದಾರೆ, ನೊಡು ನೊಡುತ್ತಿದ್ದ ಹಾಗೆ ಪೊಲೀಸರನ್ನು ಗುಂಪು ಸುತ್ತುವರಿದಿದೆ ಕರ್ತವ್ಯ ನಿರತ ಪೊಲೀಸರು ಮತ್ತು ಗುಂಪು ನಡುವೆ ವಾಗ್ವಾದ ನಡೆದಿದೆ ಬಳಿಕ ಸ್ಥಳಕ್ಕೆ ಪಟ್ಟಣದ ಠಾಣೆಯ ಸಿಪಿಐ ಮಾಧ್ಯಾನಾಯಕ್ ಬೇಟಿನೀಡಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ, ಇತ್ತಿಚೆಗೆ ಕುಣಿಗಲ್ ಪಟ್ಟಣದಲ್ಲಿ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು ತಲೆಗೆ ಎಲ್ಮೇಟ್ ಧರಿಸದ ಯುವಕರು ಪ್ರಾಣ ಕಳೆದುಕೊಳ್ಳುತ್ತಿದ್ದು ಪೊಲೀಸರು ವಾಹನ ಸವಾರರಿಗೆ ಎಲ್ಮೇಟ್ ಧರಿಸುವಂತೆ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದು ಜೋತೆಗೆ ಪಟ್ಟಣದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ ವಾಹನ ಸವಾರರು ಮತ್ತು ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿದ್ದರು ಸಹ, ವಾಹನ ಸವಾರರು ಪೊಲೀಸರು ತಪಾಸಣೆ ನಡೆಸುವ ವೇಳೆ ಅನುಚಿತ ವರ್ತನೆ ತೊರುವುದು ತಪ್ಪಿಲ್ಲ ಆದರೆ ಮುಂದುವರಿದು ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿರುವುದು ಪೊಲೀಸರ ಕಾರ್ಯ ವೈಕರಿಯನ್ನು ಪ್ರಶ್ನಿಸುವಂತಾಗಿದೆ ಘಟನೆ ಬಗ್ಗೆ ಯಾವುದೆ ರೀತಿಯ ಪ್ರಕರಣ ದಾಖಲಾಗಿರುವುದಿಲ್ಲ @publicnewskunigal