ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಸಾಲಮಾಡಿಕೊಂಡು ಸಾಲ ತಿರಿಸುವ ಸಲುವಾಗಿ ಸರಗಳ್ಳತನ ಮಾಡಲು ಹೊಗಿ ಪೊಲೀಸರ ಅತಿಥಿಯಾದ ಇಂಜಿನಿಯರ್!
ಕುಣಿಗಲ್ ತಾಲ್ಲೂಕಿನ ಸಂತೆಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆಂಪನಹಳ್ಳಿ ಗ್ರಾಮದ (27) ವರ್ಷದ ದೀಪಕ್ ಎಂಬ ಯುವಕ ಆನ್ಲೈನ್ ಗೇಮಿಂಗ್ ಚಟಕ್ಕೆ ಬಿದ್ದು ಹಣ ಕಳೆದುಕೊಂಡು ಸಾಲ ತಿರಿಸಲು ಸರಗಳ್ಳತನ ಮಾಡಿ ಇಗ ಪೊಲೀಸರ ಅತಿಥಿಯಾಗಿದ್ದಾನೆ, ಬಿ.ಇ ಇಂಜಿನಿಯರಿಂಗ್ ಪದವಿಧರನಾಗಿರುವ ಆರೋಪಿ ದೀಪಕ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಉತ್ತಮ ವೇತನವು ಸಿಗುತಿತ್ತು ಈ ಮಧ್ಯೆ ಆರೋಪಿ ದೀಪಕ್ ಆನ್ಲೈನ್ ಗೇಮಿಂಗ್ ಚಟಕ್ಕೆ ದಾಸನಾಗಿ 80 ಸಾವಿರ ರೂಪಾಯಿ ಸಾಲ ಮಾಡಿಕೊಂಡಿದ್ದ ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಅಡ್ಡದಾರಿ ಹಿಡಿದಿದ್ದ ಆತ ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು ಸರಗಳ್ಳತನ ಮಾಡಲು ಯೋಜನೆ ರೂಪಿಸಿ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಮೂಗನಪುರ ಮತ್ತು ಕೆಂಪನಹಳ್ಳಿ ಗ್ರಾಮಗಳಲ್ಲಿ ಸರಗಳ್ಳತನ ಒಂಟಿ ಮಹಿಳೆಯರ ಕತ್ತಿನಲ್ಲಿದ್ದ ಮಾಂಗಲ್ಯ ಸರವನ್ನು ಕದ್ದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕುಣಿಗಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ, ಕದ್ದ ಸರವನ್ನು ಬೆಂಗಳೂರಿನ ಮುತ್ತೂಟ್ ಫೈನಾನ್ಸ್ ನಲ್ಲಿ ಅಡವಿಟ್ಟು ಒಂದು ಲಕ್ಷದ ಅರವತ್ತು ಸಾವಿರ ಹಣ ಪಡೆದಿದ್ದ ಆಸಾಮಿ ಇಗ ಪೊಲೀಸರ ಅತಿಥಿಯಾಗಿದ್ದಾನೆ, ವಿದ್ಯಾವಂತನಾಗಿದ್ದ ಆರೋಪಿ ದೀಪಕ್ ಉತ್ತಮ ಬದುಕು ಕಟ್ಟಿಕೊಳ್ಳುವ ಬದಲು ಅಡ್ಡದಾರಿ ಹಿಡಿದು ತನ್ನ ಬದುಕನ್ನು ಕಂಬಿಯ ಹಿಂದೆ ಕಳೆಯುವಂತೆ ಮಾಡಿಕೊಂಡಿರುವುದು ನಿಜಕ್ಕೂ ದುರಂತವೆ ಸರಿ ಇತ್ತಿಚೇಗೆ ಇಂತಹ ಘಟನೆಗಳು ಸಮಾಜದಲ್ಲಿ ಹೆಚ್ಚುತ್ತಿರುವುದು ಕಳವಳಕಾರಿಯಾಗಿದ್ದು ವಿದ್ಯಾರ್ಥಿಗಳು ಉತ್ತಮ ಬದುಕು ಕಟ್ಟಿಕೊಳ್ಳುವ ಬರದಲ್ಲಿ ಒತ್ತಡಕ್ಕೆ ಅಥಾವ ಸುಲಭವಾಗಿ ಹಣ ಮಾಡುವ ಸಲುವಾಗಿ ಆನ್ಲೈನ್ ಗೇಮ್ ಗಳ ಚಟಕ್ಕೆ ದಾಸರಾಗುತ್ತಿದ್ದಾರೆ ಈ ಬಗ್ಗೆ ಪೊಷಕರು ಎಚ್ಚೆತ್ತುಕೊಂಡು ಮಕ್ಕಳ ಚಟುವಟಿಕೆಗಳ ಮೇಲೆ ಗಮನ ಹರಿಸಬೇಕಾಗಿದೆ, @publicnewskunigal