ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ!
ಕುಣಿಗಲ್ ತಾಲ್ಲೂಕು ತೋಟಗಾರಿಕೆ ಇಲಾಖೆಯಲ್ಲಿ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ಇಲಾಖೆ ವತಿಯಿಂದ 2026-27 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ, ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡಲು ಅರ್ಜಿ ಅಹ್ವಾನಿಸಿದೆ. ತೋಟಗಳ ಹೊಸಪ್ರದೇಶ ವಿಸ್ತರಣೆ, ಪುನಶ್ಚೇತನ, ಜೇನುಸಾಕಾಣಿಕೆ, ಯಂತ್ರೋಪಕರಣಗಳಿಗೆ ಸಹಾಯಧನ ನೀಡಲಾಗುವುದು. ಮಾರ್ಗಸೂಚಿಯನ್ವಯ ವಿವಿಧ ಕಾರ್ಯಕ್ರಮಗಳನ್ನಾಧರಿಸಿ ಶೇ.25 ರಿಂದ 50 ರಷ್ಟು ಸಹಾಯಧನ ನೀಡಲಾಗುವುದು. ಆಸಕ್ತ ರೈತರು ಹಾಗೂ ಉದ್ದಿಮೆದಾರರು ಅರ್ಜಿಯೊಂದಿಗೆ ಪಹಣಿ, ಬೆಳೆ ದೃಡೀಕರಣ, ಚೆಕ್ ಬಂಧಿ, ಆಧಾರ್ ಪ್ರತಿ, ಬ್ಯಾಂಕ್ ಪಾಸ್ ಬುಕ್ ಪ್ರತಿ. ಜಾತಿ ಪ್ರಮಾಣ ಪತ್ರ (ಪ.ಜಾತಿ ಮತ್ತು ಪ.ಪಂಗಡ ರೈತರಿಗೆ), ಜಂಟಿ ಖಾತೆ ಇದ್ದಲ್ಲಿ ಒಪ್ಪಿಗೆ ಪ್ರಮಾಣ ಪತ್ರ, ಖಾತೆದಾರರು ಮರಣ ಹೊಂದಿದ್ದಲ್ಲಿ ಮರಣ ಪ್ರಮಾಣ ಪತ್ರ ಮತ್ತು ಇತರೆ ದಾಖಲಾತಿಗಳನ್ನು ದಿನಾಂಕ: 15-06-2026 ರಿಂದ 25-06-2026 ರೊಳಗಾಗಿ ತಾಲ್ಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿಗೆ /ಹತ್ತಿರದ ಗ್ರಾಮ ಪಂಚಾಯಿತಿ ಕಛೇರಿಗೆ ಸಲ್ಲಿಸಬೇಕು.ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಛೇರಿ ಕುಣಿಗಲ್ ರವರನ್ನು ಸಂಪರ್ಕಿಸುವುದು ಹಾಗೂ ಗುರಿಗೆ ಅನುಗುಣವಾಗಿ ಮಾರ್ಗಸೂಚಿಯನುಸಾರ ಫಲಾನುಭವಿಯನ್ನು ಜೇಷ್ಟತೆ ಆಧಾರದ ಮೇರೆಗೆ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು ತಿಳಿಸಿದ್ದು ಹೆಚ್ಚಿನ ಮಾಹಿತಿಗಾಗಿ ರಾಜಶೇಖರ್ ಬಿ, ಹುಲಿಯೂರುದುರ್ಗ ಹೋಬಳಿ ; 7019340006 ಮಹಾಂತೇಶ್ ಕೊತ್ತಗೆರೆ ಹೋಬಳಿ : 9164871157 ಯೋಗ ಜಿ.ಆರ್ ಹುತ್ರಿದುರ್ಗ ಹೋಬಳಿ : 8147608936 ಶ್ರೀನಿವಾಸ ಅಮೃತೂರು ಹೋಬಳಿ : 7411561772 ಸಂತೋಷ್ ಕುಮಾರ್ ಟಿ.ಸಿ ಯಡಿಯೂರು ಹೋಬಳಿ :7975355595 ಸೌಮ್ಯ ಹೆಚ್.ಎಂ. ಕಸಬ ಹೋಬಳಿ: 8746949391ರವರನ್ನು ಸಂಪರ್ಕಿಸಲು ಕೊರಿದೆ @publicnewskunigal