ಸರ್ವರ್ ಸಮಸ್ಯೆ ಜಾತಿ ಮತ್ತು ಆದಾಯ ಪ್ರಮಾಣಪತ್ರ ಪಡೆಯಲು ತಾಲ್ಲೂಕು ಕಚೇರಿಗೆ ಸಾರ್ವಜನಿಕರ ಮತ್ತು ವಿದ್ಯಾರ್ಥಿಗಳು ಅಲೆದಾಟ ಅರ್ಜಿ ಸಲ್ಲಿಸಿ ಹತ್ತು ದಿನ ಕಳೆದರು ಸಿಗದ ದಾಖಲೆಗಳು!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಜಾತಿ ಮತ್ತು ಆದಾಯ ಧೃಡೀಕರಣ ಪತ್ರ ಪಡೆಯಲು ಸರ್ವರ್ ಸಮಸ್ಯೆ ಕಾರಣದಿಂದ ಕಳೆದ ಹತ್ತು ದಿನಗಳಿಂದ ತಾಲ್ಲೂಕು ಕಚೇರಿಗೆ ವಿದ್ಯಾರ್ಥಿಗಳು ಮತ್ತು ಪೊಷಕರು ಅಲೆದಾಡುವಂತಾಗಿದೆ ವಿದ್ಯಾರ್ಥಿಗಳ ಪೋಷಕರು ದಿನ ನಿತ್ಯ ಕೆಲಸ ಕಾರ್ಯಗಳನ್ನು ಬಿಟ್ಟು ತಾಲ್ಲೂಕು ಕಚೇರಿಗೆ ಬಂದು ಜಾತಿ ಮತ್ತು ಆದಾಯ ಪ್ರಮಾಣ ಪತ್ರಕ್ಕಾಗಿ ಕಾಯುವಂತಾಗಿದೆ ಸರ್ವರ್ ಸಮಸ್ಯೆ ಕಾರಣದಿಂದ ತಾಲ್ಲೂಕು ಮತ್ತು ನಾಡ ಕಚೇರಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಡೇಟ ಎಂಟ್ರಿ ಆಪರೇಟರ್ ಗಳು ಸರ್ವರ್ ಸಮಸ್ಯೆ ಕಾರಣದಿಂದ ಜಾತಿ ಮತ್ತು ಆದಾಯ ಧೃಡೀಕರಣ ಪತ್ರದ ದಾಖಲೆಗಳನ್ನು ಎರಡು ಅಥಾವ ಮೂರು ಬಾರಿ ಅಪ್ಲೋಡ್ ಮಾಡುವಂತಾಗಿದೆ ಒಂದು ವೇಳೆ ಅಪ್ಲೋಡ್ ಆದರು ಸಹ ಓಟಿಪಿ ಬರುವುದಿಲ್ಲ ಬಂದರು ತಡವಾಗಿ ಬರುತ್ತಿದ್ದು ಸಮಯ ಮುಗಿದ ಬಳಿಕ ಬಂದ ಓಟಿಪಿ ಸಂಖ್ಯೆ ಅಂಗೀಕಾರಗೊಳ್ಳದ ಕಾರಣ ಪುನಃ ಓಟಿಪಿ ಕಳಿಸಿ ಅರ್ಜಿಗಳನ್ನು ಅಪ್ಲೋಡ್ ಮಾಡಬೇಕಾಗಿದೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಸಿಗದ ಕಾರಣ ನಿತ್ಯ ತಾಲ್ಲೂಕು ಅಥಾವ ನಾಡ ಕಚೇರಿಗೆ ಅಲೆದಾಟ ಮಾಡುವಂತಾಗಿದೆ,ಇತ್ತಿಚೇಗೆ ಮಾನ್ಯ ಮುಖ್ಯಮಂತ್ರಿಗಳು ಅನಗತ್ಯ ಕಚೇರಿಗಳಿಗೆ ಅಲೆದಾಟ ತಪ್ಪಿಸಿ ಸಾರ್ವಜನಿಕರಿಗೆ ಅನೂಕುಲ ಕಲ್ಪಿಸುವ ಉದ್ದೇಶದಿಂದ ಉಚಿತವಾಗಿ ಜಾತಿ ಮತ್ತು ನಿವಾಸಿ ಪ್ರಮಾಣ ಪತ್ರ ಮನೆಯಬಾಗಿಲಿಗೆ ತಲುಪಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ ಆದರೆ ಅಧಿಕಾರಿಗಳು ಮನೆಯ ಬಾಗಿಲಿಗೆ ಹೊಗಿ ಕೊಡುವುದಿರಲಿ ಸಾವಿರಾರು ರೂಪಾಯಿ ಖರ್ಚುಮಾಡಿ ಅರ್ಜಿ ಸಲ್ಲಿಸಿದರು ಸಕಾಲದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ ಕೈಗೆ ಸಿಗದಂತಾಗಿದೆ ಸರ್ವರ್ ಸಮಸ್ಯೆ ಕಾರಣದಿಂದ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಇನ್ನಾದರು ಸರ್ಕಾರ ಅಥವಾ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕಿದೆ@publicnewskunigal